ಬೆಂಗಳೂರು : 15ನೆ ವಿಧಾನ ಮಂಡಲ ಕೊನೆಯ ಅಧಿವೇಶನದ ಬಜೆಟ್ ಉತ್ತರ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷ (ಕಾಂಗ್ರೆಸ್ ) ವಿರುದ್ಧ ಗುಡುಗಿದ್ದು, ತಕ್ಕ ಉತ್ತರವಿಲ್ಲದೆ ಕಾಂಗ್ರೆಸ್ ಸಿಲಿಕಿದ ಪ್ರಸಂಗ ಇಂದು ನಡೆಯಿತು.


COMMERCIAL BREAK
SCROLL TO CONTINUE READING

ನಡೆದ್ದಿದೇನು?:


ಬಜೆಟ್ ಕುರಿತು ವಿರೋಧ ಪಕ್ಷದ ನಾಯಕ ಹಾಗೂ ಇತರೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಾಯುಕ್ತ ಮರುಸ್ತಾಪನೆ ಬಗ್ಗೆ ಉತ್ತರಿಸಿ, ತೀರ್ಪುನ್ನು ಉಲ್ಲೇಖಸಿದರು. ಈ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು, ಇದರಲ್ಲಿ ಬಿಜೆಪಿ ಮೇಲು ಗೈ ಸಾಧಿಸಿತು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿ,ನೀವು ಏಕೆ ಎಸಿಬಿ ಮಾಡಿದ್ದೀರಿ.‌ ನಿಮ್ಮ ನೈತಿಕತೆ ಬಗ್ಗೆ ಹೇಳಬೇಕು. ಅಡ್ವೊಕೇಟ್ ಜನರಲ್ ವಾದವನ್ನು ನಿಮ್ಮ ರಕ್ಷಣೆಗಾಗಿ ಕೇಳುವ ಪರಿಸ್ಥಿತಿ ಇದೆಯಾ?. ಶೀತ ಬಂತು ಎಂದು ಮೂಗು ಕತ್ತರಿಸುವುದಾ?. ಲೋಕಾಯುಕ್ತರ ಮಗ ಲಂಚ ಪಡೆದಾ ಎಂದು ಸಂಸ್ಥೆಯನ್ನೇ ಮುಚ್ಚುವುದಾ? ಎಸಿಬಿ ಸಂಸ್ಥೆಯನ್ನು ಮುಚ್ಚಿ ಲೋಕಾಯುಕ್ತ ಮರುಸ್ಥಾಪನೆ ಮಾಡಿ ಎಂದು ಹೈ ಕೋರ್ಟ್ ತೀರ್ಪು ಉಲ್ಲೆಕಿಸಿದರು. 


ಇದನ್ನೂ ಓದಿ: ಕಾರ್ಪೇಂಟರ್ ಅಡ್ಡಗಟ್ಟಿ ಕತ್ತು ಕೊಯ್ದು ಬರ್ಬರ ಹತ್ಯೆ


ನೀವು ಎಲ್ಲಾ ಅಧಿಕಾರವನ್ನು ಎಸಿಬಿಗೆ ಕೊಟ್ಟು, ಆರೋಪವನ್ನು ಕವರ್ ಅಪ್ ಮಾಡಿದ್ದೀರ. ಲೊಕಾಯುಕ್ತ ಮುಂದುವರಿದಿದ್ದರೆ ಇವರ ಮೇಲಿನ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಿದ್ದಾರೆ. 59 ಎಸಿಬಿ ತನಿಖೆ ಮಾಡಿದೆ ಎಲ್ಲವೂ ಬಿ ರಿಪೋರ್ಟ್. ಎಲ್ಲ ಲಂಚದ ಆರೋಪದ ಬಗ್ಗೆ ಎಸಿಬಿ ಬಿ ರಿಪೋರ್ಟ್ ಕೊಟ್ಟಿದೆ. ಹೈ ಕೋರ್ಟ್ ಈ ಆದೇಶ ನೀಡಲು ಇದೇ ಕಾರಣ. ಇಡೀ ವ್ಯವಸ್ಥೆಯನ್ನೇ ಭ್ರಷ್ಟಾಚಾರವಾಗಿ ವ್ಯವಸ್ಥೆಯನ್ನಾಗಿ ಬದಲಾವಣೆ ಮಾಡಿತು, ಎಂದರು.


ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಹೈ ಕೋರ್ಟ್ ಆದೇಶ ತಪ್ಪು ಎಂದು ನೀವು ಹೇಳುತ್ತೀರಾ? ಎಂದು ಶಾಸಕ ಜಾರ್ಜ್ ಅವರಿಗೆ ಕೇಳಿದಾಗ ಜಾರ್ಜ್, ಹೌದು, ತೀರ್ಪು ತಪ್ಪು ಎಂದು ಹೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದರು.


 ಹಿಂದಿನ ಲೋಕಾಯುಕ್ತ ಬಾಸ್ಕರ್ ರಾವ್ ಬಗ್ಗೆ ಆಕ್ಷೇಪ:


ಈ ಹಿಂದೆ ಲೋಕಾಯುಕ್ತ ಭಾಸ್ಕರ್ ರಾವ್, ಪಾರದರ್ಶ ಇರಲಿಲ್ಲ, ಇವರ ಪುತ್ರ ವಿರುದ್ಧ ಭ್ರಷ್ಟಾಚಾರ ಬಗ್ಗೆ ವರದಿ ಪ್ರಸ್ತಾಪಿಸಿದ, ಶಾಸಕ ಈಶ್ವರ್ ಖಂಡ್ರೆ ಹಾಗೂ ಜಾರ್ಜ್ ಗೆ ಸಿಎಂ, ಬಿಜೆಪಿ ಸರ್ಕಾರ ಇದ್ದಾಗ ಮುಂಚೆ ಲೋಕಾಯುಕ್ತರಾಗಿ ಶಿವರಾಜ್ ಪಾಟೀಲ್ ನೇಮಕ ಮಾಡಿದ್ದೆವು. ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾಗಿದ್ದರು. ಅವರ ವಿರುದ್ಧ ಪ್ರಚಾರ ಮಾಡಲಾಯಿತು. ಬಳಿಕ ಆಗಿನ ಶುದ್ಧಹಸ್ತ ರಾಜ್ಯಪಾಲರಾದ ಭಾರದ್ವಾಜ್ ಅವರು ಭಾಸ್ಕರ್ ರಾವ್ ಹೆಸರನ್ನು ಸೂಚಿಸಿದರು. ಆಗ ಪ್ರತಿಪಕ್ಷ ನಾಯಕರಾಗಿದ್ದವರು ಸಿದ್ದರಾಮಯ್ಯ. ಲೋಕಾಯುಕ್ತ ನೇಮಕದಲ್ಲಿ ಅವರೂ ಪಾಲುದಾರರಾಗಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಮಾಡಿದ ಕರ್ಮಕಾಂಡ ಒಂದೇ ಎರಡೇ. ಅದಕ್ಕೆ ಸಿದ್ದರಾಮಯ್ಯ ಅವರು ಅಷ್ಟೇ ಹೊಣೆಗಾರರು ಎಂದು ವಾಗ್ದಾಳಿ ನಡೆಸಿದರು.


ಚುನಾವಣೆ ಮುನ್ನ ತರಾತುರಿಯಲ್ಲಿ ಟೆಂಡರ್ :


ಇದನ್ನೂ ಓದಿ: ಬಾಡೂಟದ ಬಳಿಕ ದೇವಸ್ಥಾನಕ್ಕೆ ತೆರಳಿದ ಸಿ ಟಿ ರವಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?


ಇನ್ನು ಈ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್, ಆಡಳಿತ ಪಕ್ಷದ ವಿರುದ್ಧ ಚುನಾವಣಾ ಸಂದರ್ಭದಲ್ಲಿ ತರಾತುರಿಯಲ್ಲಿ ಹೆಚ್ಚು ಟೆಂಡರ್ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಕಾಲದಲ್ಲಿ  (2017 ಮಾರ್ಚ್) ₹ 11,832 ಕೋಟಿ ಮೌಲ್ಯದ ಟೆಂಡರ್ ಕೊಟ್ಟಿದ್ದರು. ಮೂರು ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಟೆಂಡರ್ ಕರೆದಿದ್ದರು. ಆದರೆ ನಾವು  ₹ 4,000 ಕೋಟಿ,ಟೆಂಡರ್ ಕರೆದಿದ್ದೇವೆ. ಅವರ ಕಾಲದಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿತ್ತು ಎಂದು ಸಮರ್ಥನೆ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.