ಬೆಂಗಳೂರು: ಅಲೆಲೆಲೇ ಏನಿದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್.. ಯಪ್ಪಾ ಯಾವ ಹಾಲಿವುಡ್ ಮತ್ತು ಬಾಲಿವುಡ್ ಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಟೀಸರ್ ಕಿಕ್ ಕೊಟ್ಟಿದೆ.ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದೆ.. ಪ್ರತಿಯೊಬ್ಬ ಕನ್ನಡಿಗ ಟೀಸರ್ ನ ಅಪ್ಪಿ ಒಪ್ಪಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಬೆಂಕಿಯಂತೆ ಸುಡುತ್ತಿದೆ ಮಾರ್ಟಿನ್ ಟೀಸರ್ ಅಂತ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಾಡೂಟದ ಬಳಿಕ ದೇವಸ್ಥಾನಕ್ಕೆ ತೆರಳಿದ ಸಿ ಟಿ ರವಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಟೀಸರ್ ಮೇನ್ ಹೈಲೈಟ್ಸ್ ಏನು ಅಂದ್ರೆ ಅತ್ಯಂತ ಕ್ರೂರಿಯಾಗುರುತ್ತಾನೆ ಮಾರ್ಟಿನ್ ಅನ್ನೋದು ಗೊತ್ತಾಗುತ್ತೆ.. ಅಂತೆಯೇ ಧ್ರುವ ಸರ್ಜಾ ಕೂಡ ಇಲ್ಲಿ ಭಯಂಕರ ದೇಹ ಮತ್ತು ವಿಚಿತ್ರ ಮ್ಯಾನರಿಸಮ್ ನಲ್ಲಿ ಕಾಣಿಸುತ್ತಿದ್ದಾರೆ. ಫಾರಿನ್ ದೈತ್ಯ ಬಾಡಿ ಬಿಲ್ಡರ್ಗಳ ಜೊತೆ ಸಖತ್ ಆಗಿ ಆಕ್ಷನ್ ಸೀನ್ ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಾರೆ ಆಕ್ಷನ್ ಪ್ರಿನ್ಸ್ ಧ್ರುವ ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಧ್ರುವ ಸರ್ಜಾ ವೈರಿಗಳನ್ನು ಈ ಸಿನಿಮಾದಲ್ಲಿ ಭಯಾನಕ ಮತ್ತು ಭಯಂಕರವಾಗಿ ಕಾಡುತ್ತಾರೆ ಅನ್ನೋದು ಮಾತ್ರ ಟೀಸರ್ ಮೂಲಕ ತಿಳಿಯುತ್ತೆ. ಧ್ರುವ ಸರ್ಜಾರಿಗೆ ಅವರ ಮಾವ ಅರ್ಜುನ್ ಸರ್ಜಾ ಸ್ಟೋರಿ ಬರೆದಿರೋದು ಹೈಲೈಟ್ ನಲ್ಲಿ ಒಂದಾಗಿದೆ.
ನೂರು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಮಾರ್ಟಿನ್ ಚಿತ್ರವನ್ನು ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ
ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ಕಾರ್ಪೇಂಟರ್ ಅಡ್ಡಗಟ್ಟಿ ಕತ್ತು ಕೊಯ್ದು ಬರ್ಬರ ಹತ್ಯೆ
ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಚಿತ್ರದ ಮತ್ತೊಂದು ಹೈಲೇಟ್ ಆಗಿದೆ.. ಫೆ.23 ಕ್ಕೆ ಚಿತ್ರದ ಟೀಸರ್ ಜೊತೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಪ್ಲಾನ್ ಮಾಡಿರುವ ಮಾರ್ಟಿನ್ ಚಿತ್ರತಂಡ ಈ ಸಮ್ಮರ್ ಗೆ ಮಾರ್ಟಿನ್ ನ ಬೆಳ್ಳಿತೆರೆ ಮೇಲೆ ಕರ್ಕೊಂಡ್ ಬರೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.