ಬೆಂಗಳೂರು: ಭೂಸುಧಾರಣೆ ಕಾಯ್ದೆಯನ್ನು ಭೂಸ್ವಾಧೀನ ಕಾಯ್ದೆಯನ್ನಾಗಿ ಪರಿವರ್ತಿಸಿರುವ (Land reform act ammendment) ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಇಂದು ರಾಜ್ಯದ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ (Karnataka Bandh)ಗೆ ಕರೆ ನೀಡಿವೆ.


COMMERCIAL BREAK
SCROLL TO CONTINUE READING

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಆಯುಕ್ತರು,10 ಮಂದಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. 60 ಎಸಿಪಿಗಳು. 140 ಇನ್ಸ್‌ಪೆಕ್ಟರ್ ಗಳು, 300ಕ್ಕೂ ಹೆಚ್ಚು ಸಬ್ ಇನ್ಸ್‌ಪೆಕ್ಟರ್ ಗಳು ಹಾಗೂ 1,500ಕ್ಕೂ ಹೆಚ್ಚು ಸಿವಿಲ್‌ ಹಾಗೂ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 


ಒಂದು ರಾತ್ರಿಯಲ್ಲಿ ಸರ್ಕಾರಿ ನೌಕರನಾದ ರೈತ, ಮುಂದೆ ಆಗಿದ್ದೇ ಬೇರೆ...


ಇದಲ್ಲದೆ 2,000ಕ್ಕೂ ಹೆಚ್ಚು ಕೆಎಸ್ ಆರ್ ಪಿ ಹಾಗೂ ಸಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ರೈತರು ಪ್ರತಿಭಟನೆ (Farmers Protest) ಮಾಡುವ ಸ್ಥಳಗಳಾದ ಟೌನ್ ಹಾಲ್, ಮೆಜೆಸ್ಟಿಕ್, ಫ್ರೀಡಂ ಪಾರ್ಕ್, ತುಮಕೂರು ರಸ್ತೆ, ಮಾಗಡಿ ರಸ್ತೆ, ವಿಧಾನಸೌಧ, ಮೈಸೂರ್ ರಸ್ತೆ, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. 


ಬೆಂಗಳೂರಿನಿಂದ ಬೇರೆ ಬೇರೆ ಕಡೆಗೆ ಹೊರಡುವ ಮೆರವಣಿಗೆ ಅವಕಾಶ ನೀಡದಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಸೂಚಿಸಿದೆ. ರೈತ ಪರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರೆ ಟ್ರಾಫಿಕ್ ಜಾಮ್ ಆಗುತ್ತದೆ ಎಂಬ ನೆಪ ಹೇಳಿಕೊಂಡು ತಡೆಯಲಾಗುತ್ತದೆ.


ಐತಿಹಾಸಿಕ ಕಾನೂನು: ಈಗ ಪ್ರತಿಯೊಬ್ಬ ರೈತನಿಗೂ ಸಿಗಲಿದೆ ಈ ಅನುಕೂಲ


ರೈತರ (Farmers) ಪ್ರತಿಭಟನೆಯನ್ನು ಬೆಂಬಲಿಸುವುದಿಲ್ಲ ಎಂದು ರಾಜ್ಯ ಬಿಜೆಪಿ (BJP) ಸರ್ಕಾರ ಹೇಳಿರುವುದರಿಂದ ಬೆಳಿಗ್ಗೆ ಎಂದಿನಂತೆ ಮೆಜೆಸ್ಟಿಕ್ ನಿಲ್ದಾಣನಿಂದ ಬಸ್ ಗಳ ಸಂಚಾರಕ್ಕೆ ಎಡೆಮಾಡಿಕೊಡಲಾಗಿದೆ. KSRTC ಹಾಗೂ BMTC ಬಸ್ ಗಳು ಸಂಚಾರ ಆರಂಭಿಸಿವೆ.


ಪ್ರತಿಭಟನಾಕಾರರು ಮೆಜೆಸ್ಟಿಕ್ ಹಾಗೂ ರೈಲ್ವೆ ನಿಲ್ದಾಣದ ಬಳಿ ಬರಬಹುದೆಂಬ ಹಿನ್ನೆಲೆಯಲ್ಲಿ ಸುತ್ತಲೂ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿಭಟನಾಕಾರರು ಫ್ಲಾಟ್ ಫಾರಂಗಳಿಗೆ ನುಗ್ಗದಂತೆ ತಡೆಯಲು ಎಲ್ಲಾ ದ್ವಾರಗಳಲ್ಲೂ ಬ್ಯಾರಿಕೇಡ್ ಹಾಕಲಾಗಿದೆ.