BMTC : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇದಾಗಿದೆ. ಮಾರ್ಚ್ 31 ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯುವ ಬೆಂಗಳೂರಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಪ್ರಕಟಣೆ ಹೊರಡಿಸಿದೆ.
ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶಿಸಿದ್ದರೂ ಇದಕ್ಕೆ ಒಪ್ಪದ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಇಂದಿನಿಂದ ಮುಷ್ಕರ ನಡೆಸುವುದಾಗಿ ಕರೆ ನೀಡಿತ್ತು.
K. Sudhakar : ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರಿಗೆ ಸಂಚರಿಸಲು ನೂತನವಾಗಿ ಆರಂಭಿಸಲಾಗಿರುವ ಬಿಎಂಟಿಸಿ ಬಸ್ ಸೇವೆಗೆ ನಗರದ ಹಳೆ ಬಸ್ ಸ್ಟ್ಯಾಂಡ್ ಆವರಣದಲ್ಲಿ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಚಿಕ್ಕಬಳ್ಳಾಪುರ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದ್ದು, ನಗರದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಪರ್ವ ಆರಂಭವಾಗಿದೆ.
ನೌಕರರ ಅಸಮಾಧಾನದ ನಡುವೆಯೂ ಸಂಬಳ ಹೆಚ್ಚಳ ಮಾಡಲಾಗಿದೆ.. ಶೇ.15ರಷ್ಟು ಸಂಬಳ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.. ಮಾ. 1ರಿಂದಲೇ ಹೊಸ ಪರಿಷ್ಕರಣೆ ಜಾರಿಗೆ ಸರ್ಕಾರ ಆದೇಶ ಮಾಡಿದೆ..
ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ರಾಜ್ಯ ಸರ್ಕಾರ ಮಾಡಿದೆ.
ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಬಿಎಂಟಿಸಿ ನಿಗಮ. ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಫ್ರೀ ಬಸ್ ಸೇವೆ. ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಸಂಚಾರಕ್ಕೆ ಅವಕಾಶ.
ಕೆಎಸ್ ಆರ್ ಟಿಸಿ ಬಸ್ ಚಾಲಕರ ಮಗನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸಾಕ್ಷಾತ್ ಎಂಬ ಯುವಕ 05 ಬಾರಿ ಹ್ಯಾಂಡ್‍ಬಾಲ್ ಹಾಗೂ 03 ಬಾರಿ ನೆಟ್‍ಬಾಲ್ ನ್ಯಾಷನಲ್ ಲೆವಲ್ ನಲ್ಲಿ ಭಾಗವಹಿಸಿದ್ದಾರೆ. ಮುಂಬರುವ ಏಷಿಯನ್ ನೆಟ್‍ಬಾಲ್ ಚಾಂಪಿಯನ್ ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಬಿಎಂಟಿಸಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಸಾರಿಗೆ ಸಚಿವ ಶ್ರೀ ರಾಮುಲು ಅವರ ಮಾತನ್ನೇ ಕೇಳೋದಿಲ್ಲ ಸಚಿವರ ಮಾತಿಗೂ ಡೊಂಟ್ ಕೇರ್ ಇಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಹೇಳಿದ್ದೆ ರೂಲ್ಸ್.. ರಜೆ ಬೇಕು ಅಂದ್ರು ದುಡ್ಡು ಡ್ಯೂಟಿ ಬೇಕು ಅಂದ್ರು ದುಡ್ಡು..ಇಲ್ಲಿ ಭ್ರಷ್ಟಾಚಾರದ ಅಡ್ಡೆಯಾಗೋಗಿದೆ ಇದರಿಂದ ನೊಂದ ಕಾರ್ಮಿಕರು ಇಲ್ಲಿ ನಮಗೆ ನ್ಯಾಯ ಸಿಗೋದಿಲ್ಲ ಎಂದು 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ.
ಬಿಎಂಟಿಸಿ ಕೂಡಾ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ವೋಲ್ವೋ ಬಸ್ ಪಾಸ್ ದರ ಕೂಡಾ ಹೆಚ್ಚಿಸಲಾಗಿದೆ.
Transport Workers Strike: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಮತ್ತು KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಮಹತ್ವದ ಸಭೆಯನ್ನು ಕರೆದಿದ್ದಾರೆ.
ಬಿಎಂಟಿಸಿ ಕಂಡೆಕ್ಟರ್, ಡ್ರೈವರ್ಗಳಿಗೆ ಅಧಿಕಾರಿಗಳ ಕಾಟ - ಪ್ರತಿ ಡ್ಯೂಟಿ ಹಾಕಿಸಿಕೊಳ್ಳಲು ಕೊಡಬೇಕಿತ್ತು ಲಂಚ - ಬಿಎಂಟಿಸಿ ಕಂಡೆಕ್ಟರ್, ಡ್ರೈವರ್‌ಗಳ ರಕ್ತ ಹೀರುತ್ತಿದ್ದ ಎಂಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್
ಬೆಂಗಳೂರಿನಲ್ಲಿ ಬಸ್ ಒಳಗೆ ಕುಳಿತಿದ್ದವರು ಸಹ ಜೀವವನ್ನು ಅಂಗೈನಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಯಾಕಂದ್ರೆ ಬೃಹತ್ ಗುಂಡಿಗಳಿಗೆ ಬಸ್ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಡ್ಯಾನ್ಸ್ ಮಾಡುತ್ತವೆ.