ದಲಿತ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಡೋಂಗಿತನ ನಿಲ್ಲಿಸಲಿ: ಬಿಜೆಪಿ ತಿರುಗೇಟು
Dalit CM: ‘ಕಾಂಗ್ರೆಸ್ 6 ದಶಕಗಳ ಕಾಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ಬದುಕನ್ನು ಕತ್ತಲಲ್ಲಿರಿಸಿತ್ತು. ಅವರ ಬದುಕಿಗೆ `ಹೊಸ ಬೆಳಕು` ನೀಡಿದ್ದು ಬಿಜೆಪಿ.
ಬೆಂಗಳೂರು: ದಲಿತ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಡೋಂಗಿತನ ನಿಲ್ಲಿಸಲಿ ಎಂದು ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡುವುದು "ಭೂತದ ಬಾಯಲ್ಲಿ ಭಗವದ್ಗೀತೆಯಂತೆ’ ಎಂದು ಟೀಕಿಸಿದೆ.
‘ಕಾಂಗ್ರೆಸ್ 6 ದಶಕಗಳ ಕಾಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ಬದುಕನ್ನು ಕತ್ತಲಲ್ಲಿರಿಸಿತ್ತು. ಅವರ ಬದುಕಿಗೆ 'ಹೊಸ ಬೆಳಕು' ನೀಡಿದ್ದು ಬಿಜೆಪಿ. ಸ್ವಾತಂತ್ರ್ಯ ಭಾರತದಲ್ಲಿ ಕಾಂಗ್ರೆಸ್ ದಲಿತರಿಗೆ ಮಾಡಿರುವ ಮಹಾಮೋಸಗಳು ಜಗಜ್ಜಾಹೀರಾಗಿವೆ’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಹೆಚ್ಚಾಯ್ತು ದೇವಾಲಯಗಳ ಆದಾಯ
ದಲಿತರನ್ನು ಬಿಜೆಪಿ ಏಕಿಷ್ಟು ಕೇವಲವಾಗಿ ಕಾಣುತ್ತಿದೆ?: ಕಾಂಗ್ರೆಸ್
ಚಾಲಕರ ಬದುಕು ಬೀದಿಗೆ!
‘ತನ್ನ ಗ್ಯಾರಂಟಿಗಳ ಅವಾಸ್ತವಿಕ ಅನುಷ್ಠಾನದಿಂದ ಕಾಂಗ್ರೆಸ್ ಸರ್ಕಾರ ಶ್ರಮಜೀವಿಗಳ ಬದುಕನ್ನು ದುಸ್ತರವಾಗಿಸಿದೆ. ಅತ್ತ ಯೋಜನೆಗಳಿಗೆ ಸೂಕ್ತ ಹಣಕಾಸೂ ನೀಡದೆ, ಇತ್ತ ಬದುಕೂ ಹಸನು ಮಾಡದ ಸಿದ್ದರಾಮಯ್ಯನವರಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ನಿಮ್ಮ ಸ್ವಾರ್ಥಕ್ಕಾಗಿ ₹2,000 ಕೋಟಿಗಿಂತ ಹೆಚ್ಚು ನೇರ ತೆರಿಗೆಯ ಕೊಡುಗೆ ನೀಡುವ ಲಕ್ಷಕ್ಕೂ ಅಧಿಕ ಚಾಲಕರ ಬದುಕನ್ನು ಬೀದಿಗೆ ತಂದಿದ್ದೀರಿ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.