ಕಾಂಗ್ರೆಸ್ಗೆ “ಭಾರತ”ದ ಮೇಲೆ ಈ ಪರಿ ದ್ವೇಷವೇಕೆ..?: ಬಿಜೆಪಿ ಆಕ್ರೋಶ
Bharat vs India: ಅಸಲಿಗೆ ಭಾರತ ಎಂಬ ಹೆಸರು ನಿನ್ನೆ ಮೊನ್ನೆಯದ್ದಲ್ಲ, ಕಾಂಗ್ರೆಸ್ಸಿಗರ ನಾಯಕ ನೆಹರೂ ಅವರೇ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ, ಸಂವಿಧಾನ ರಚನೆ ಸಂದರ್ಭದಲ್ಲಿ ಭಾರತ, ಇಂಡಿಯಾ, ಹಿಂದುಸ್ತಾನ್ ಹೆಸರುಗಳನ್ನು ಪ್ರಸ್ತಾಪಿಸಿ, ಕೊನೆಗೆ ಭಾರತ ಹಾಗೂ ಇಂಡಿಯಾ ಹೆಸರನ್ನು ಉಳಿಸಿಕೊಳ್ಳಲಾಗಿದೆ ಎಂದು ನುಡಿದಿದ್ದಾರೆ.
ಬೆಂಗಳೂರು: ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳ ಸಾಧನೆಗಾಗಿ ಭಾರತದ ಅಸ್ಮಿತೆಯನ್ನು ಬಲಿ ಕೊಡಲು ಕಾಂಗ್ರೆಸ್ ಸದಾ ಸಿದ್ಧವಾಗಿರುತ್ತದೆ ಎಂದು ಬಿಜೆಪಿ ಟೀಕಿಸಿದೆ. ಭಾರತ್ vs ಇಂಡಿಯಾ ವಿವಾದ ವಿಚಾರವಾಗಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ದೇಶದ ಹೆಮ್ಮೆಯ ಸೈನಿಕರು "ಬೋಲೋ ಭಾರತ್ ಮಾತಾ ಕೀ ಜೈ" ಎಂದರೇ, ಅದು ಅಸಂವಿಧಾನಿಕ ಪದ, ಅದನ್ನು ಹೇಳಬಾರದೆಂಬ ಉದ್ಧಟತನ ಕಾಂಗ್ರೆಸ್ನವರದ್ದಾಗಿರುತ್ತದೆ. “ಭಾರತ್ ಜೋಡೋ” ಹೆಸರಿನಲ್ಲಿ ದೇಶಾದ್ಯಂತ ವಾಕಿಂಗ್ ಮಾಡಿ ಮಜಾ ಮಾಡಿದ್ದ ಕಾಂಗ್ರೆಸ್ನವರಿಗೆ ಭಾರತ ಹಾಗೂ ಭಾರತೀಯರೆಂದರೆ ಅಲರ್ಜಿ. ಭಾರತ ಎಂಬ ಹೆಸರನ್ನು ಬಳಸಿದ್ದಕ್ಕೆ ನಖಶಿಖಾಂತ ಉರಿದುಕೊಂಡು ಅದು ಅಪರಾಧ ಎಂಬಂತೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಕುಟುಕಿದೆ.
ಇದನ್ನೂ ಓದಿ: ವಿವಿಧ ಧರ್ಮಗಳಲ್ಲಿ ʼದಯವೇ ಧರ್ಮದ ಮೂಲʼ ಎಂದಿದ್ದಾರೆ : ಸಿಎಂ ಸಿದ್ದರಾಮಯ್ಯ
ಶಾಲಾ ಮಕ್ಕಳಿಗೆ ಹೆಬ್ಬುಲಿ ಕಟಿಂಗ್ ಮಾಡ್ಬೇಡಿ: ಸವಿತಾ ಸಮಾಜಕ್ಕೆ ಪತ್ರ ಬರೆದ ಶಿಕ್ಷಕ
ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ತನ್ನ ವಿದ್ಯಾರ್ಥಿ ಘಟಕದ ಉಸ್ತುವಾರಿಯನ್ನಾಗಿ ನೇಮಿಸುತ್ತದೆ. ಮೊದಲಿನಿಂದಲೂ ಭಾರತದ ಪರ ಧ್ವನಿ ಎತ್ತುವವರಿಗಿಂತಲೂ, ಭಾರತದ ವಿರುದ್ಧ ಧ್ವನಿ ಎತ್ತುವವರ ಪರ ಕಾಂಗ್ರೆಸ್ಗೆ ಪ್ರೀತಿ ಹೆಚ್ಚು. ಕಾಂಗ್ರೆಸ್ನವರಿಗೆ ತಮ್ಮ ಗಾಂಧಿ ಕುಟುಂಬದ ಸದಸ್ಯರುಗಳಿಗೆ ನೀಡಲು “ಭಾರತ ರತ್ನ” ಬೇಕು, ಆದರೇ ಭಾರತ ಬೇಡ..!!!’ ಎಂದು ಬಿಜೆಪಿ ಟೀಕಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.