ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್.ಈಶ್ವರಪ್ಪರನ್ನು ಬಂಧಿಸುವಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ!’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

‘ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದಾಗ ಮನೆಯಲ್ಲಿ ಕೂತ್ತಿದ್ದ, ಹರ್ಷನ ಕೊಲೆಯಾದಾಗ ಮೌನಕ್ಕೆ ಶರಣಾದ, ಮೂಲಭೂತವಾದಿಗಳು ವಸ್ತ್ರ ಸಂಹಿತೆ ವಿರೋಧಿಸಿದಾಗ ಕಾನೂನು ನೆರವು ನೀಡಿದ ರಣಹದ್ದುಗಳು ಮತ್ತೆ ಬೀದಿಗಿಳಿದಿವೆ!’ ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.


"ಆರೋಗ್ಯ ಸಚಿವ ಸುಧಾಕರ್‌ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ"


ಬಿಜೆಪಿ ಸರ್ಕಾರ ಸದಾರಮೆ ನಾಟಕ ಮಾಡುವ ಬದಲು ಈಶ್ವರಪ್ಪರನ್ನು ಬಂಧಿಸುವಂತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು ನೀಡಿದೆ. ‘ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ. ಸಂತೋಷ್ ಪಾಟೀಲ್, ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ? ಕಾಂಗ್ರೆಸ್ ಪಕ್ಷದಿಂದ ಸಂತೋಷ್‍ನನ್ನು ವಜಾಗೊಳಿಸಿದ್ದು ಸುಳ್ಳೋ? ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ?’ ಎಂದು ಪ್ರಶ್ನಿಸಿದೆ.


ಗ್ರಾಹಕರಿಗೆ ಸನ್ನಿ ಲಿಯೋನ್ ಆಫರ್ ನೀಡಿದ ಅಭಿಮಾನಿ...!


ಕಾಂಗ್ರೆಸ್ ಮುರಿಯಲು ಪ್ರಯತ್ನಿಸಿತ್ತು. ಇಂದು ತನ್ನದೇ ಮೂಲ ಕಾರ್ಯಕರ್ತನನ್ನು ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಲಿಕೊಟ್ಟು ಜಾತಿರಾಜಕಾರಣ ಮಾಡಲು ಹೊಂಚು ಹಾಕುತ್ತಿರುವುದು ವಿಪರ್ಯಾಸ’ ಅಂತಾ ಬಿಜೆಪಿ ಕುಟುಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.