ರಾಜ್ಯ ಸರ್ಕಾರಿ ನೌಕರರ ಕಿವಿ ಮೇಲೂ ಹೂವಿಟ್ಟಿರುವ ಸಿದ್ದರಾಮಯ್ಯ & ಡಿಕೆಶಿ..!
ಪೌರ ಕಾರ್ಮಿಕರಿಗೆ ಖಾಯಂಮಾತಿ ಬಗ್ಗೆ ಕಾಂಗ್ರೆಸ್ ಪೌರ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಅಂಗನವಾಡಿ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿಯೂಟ ತಯಾರಿಕರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಇನ್ನೂ ಸಹ ಭರವಸೆಯಾಗಿಯೇ ಉಳಿದಿದೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ರಾಜ್ಯದ ಕಡುಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ 6 ತಿಂಗಳ ಅರಾಜಕತೆಯ ಆಡಳಿತದಲ್ಲಿ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೆ, ಸರ್ಕಾರದ ಪ್ರಮುಖ ಕಾರ್ಯಾಂಗವಾದ ಸರ್ಕಾರಿ ನೌಕರರಿಗೂ ಸಹ ಇನ್ನಿಲ್ಲದಂತಹ ತೊಂದರೆಯನ್ನು ನೀಡಿದೆ ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬಿಸಿಯೂಟದ ಸಿಬ್ಬಂದಿಗಳಿಂದ ಹಿಡಿದು, ಅತಿಥಿ ಶಿಕ್ಷಕರು ಸೇರಿದಂತೆ ಡಯಾಲಿಸಿಸ್ ಸಿಬ್ಬಂದಿಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತ್‌ನ ಪಿಡಿಒಗಳು, ಕಾಂಗ್ರೆಸ್ ಸರ್ಕಾರದ ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ಆಡಳಿತದ ದಯನೀಯ ವೈಫಲ್ಯಕ್ಕೆ ಸಾಕ್ಷಿ!!’ ಎಂದು ಕುಟುಕಿದೆ.
ರಾಜ್ಯ ಕಾಂಗ್ರೆಸ್ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿದೆ : ಹೆಚ್‌ಡಿಕೆ ಕಿಡಿ
‘ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಲೇಬೇಕೆಂದು ಸುಳ್ಳುಗಳ ಮೇಲೆ ಸುಳ್ಳನ್ನು ಹೆಣೆದ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇವಲ ರಾಜ್ಯದ ಜನಸಾಮಾನ್ಯರ ಕಿವಿಯ ಮೇಲೆ ಮಾತ್ರ ಹೂವಿಟ್ಟಿಲ್ಲ, ಬದಲಿಗೆ ರಾಜ್ಯ ಸರ್ಕಾರಿ ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ಶಾಸಕರು & ಕಾರ್ಯಕರ್ತರ ಭೇಟಿಗೆ ಟೈಮ್ ಫಿಕ್ಸ್ ಮಾಡಿದ ಡಿಕೆಶಿ!
’ಪೌರ ಕಾರ್ಮಿಕರಿಗೆ ಖಾಯಂಮಾತಿ ಬಗ್ಗೆ ಕಾಂಗ್ರೆಸ್ ಪೌರ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಅಂಗನವಾಡಿ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿಯೂಟ ತಯಾರಿಕರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಇನ್ನೂ ಸಹ ಭರವಸೆಯಾಗಿಯೇ ಉಳಿದಿದೆ. ಈಗಾಗಲೇ ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಸೇರಿದಂತೆ ಸ್ವಪಕ್ಷೀಯ ಶಾಸಕರಿಂದ ಅವಿಶ್ವಾಸ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರವರು ಈಗ ಕಾರ್ಯಾಂಗದ ಪ್ರಮುಖ ಭಾಗವಾದ ಸರ್ಕಾರಿ ನೌಕರರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಜನರ, ಶಾಸಕರ, ಸರ್ಕಾರಿ ನೌಕರರಿಂದ ಸಂಪೂರ್ಣ ಅವಿಶ್ವಾಸ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರವರನ್ನು ಅದಿನ್ನಾವ ಪುರುಷಾರ್ಥಕ್ಕೆ ಸಿಎಂ ಕುರ್ಚಿಯಲ್ಲಿ ಕೂರಿಸಿದ್ದಾರೆ ಎಂಬ ಮರ್ಮ ಕಾಂಗ್ರೆಸ್ ಹೈಕಮಾಂಡ್‌ಗೆ ಮಾತ್ರವೇ ಗೊತ್ತು!!’ ಎಂದು ಬಿಜೆಪಿ ಟೀಕಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.