ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೇ ನೇರ ಹೊಣೆಗಾರರು ಅಂತಾ ಬಿಜೆಪಿ ಆರೋಪಿಸಿದೆ. #YesToUniform_NoToHijab ಹ್ಯಾಶ್ ಟ್ಯಾಗ್ ಬಳಿಸಿ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘1983ರ ಶಿಕ್ಷಣ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಮವಸ್ತ್ರ(Uniform) ಕಡ್ಡಾಯಗೊಳಿಸಲಾಗಿದೆ. ಆದರೆ ಸಿದ್ದರಾಮಯ್ಯನವರು ಹಿಜಾಬ್‌ ಒಳಗಿರುವ ಮತ ಪಡೆಯಲು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎನ್ನುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರ(Hijab Row)ಗಳಿಗೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು’ ಅಂತಾ ಆಕ್ರೋಶ ವ್ಯಕ್ತಪಡಿಸಿದೆ.


ಕಾಲೇಜು ಆವರಣದಲ್ಲಿ ಹಿಜಾಬು ಮತ್ತು ಕೇಸರಿ ಶಾಲು ಧಾರಿಗಳು ಎದುರು ಬದುರಾದಾಗ...!


‘ಮೂಲಭೂತವಾದಿಗಳಿಗೆ ಸಂವಿಧಾನದ ಗುರಾಣಿ ಕೊಡುವ ಸಿದ್ದರಾಮಯ್ಯ ಅವರಿಗೆ ಸಂವಿಧಾನದ 25ನೇ ವಿಧಿಯ 2(ಎ), 2(ಬಿ) ಏನು ಹೇಳುತ್ತದೆ ಎಂಬುದು ತಿಳಿಯದಾದುದು ವಿಪರ್ಯಾಸ. ಶಾಂತಿಭಂಗ, ಸಾರ್ವಭೌಮತೆಗೆ ಧಕ್ಕೆಯಾದಾಗ ಸರ್ಕಾರಕ್ಕೆ ಧಾರ್ಮಿಕ ಹಕ್ಕನ್ನು ನಿರ್ಬಂಧಿಸುವ ಅಧಿಕಾರವೂ ಇದೆ. ಈಗ ನಡೆಯುತ್ತಿರುವುದು ಶಾಂತಿಭಂಗದ ಯತ್ನ’ ಅಂತಾ ಬಿಜೆಪಿ(BJP) ಟ್ವೀಟ್ ಮಾಡಿದೆ.


Karnataka Hijab Row) ಶಾಲೆಗೆ ಬಂದು, ಸಮವಸ್ತ್ರ ನಿಯಮ ಉಲ್ಲಂಘಿಸಿದರು. ಇವರಿಗೆ ಪ್ರಚೋದನೆ ನೀಡಿದ ಪರಿಣಾಮ, ಈಗ ಇಡೀ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿವಾದ ಹಬ್ಬಿದೆ. ಸಿದ್ದರಾಮಯ್ಯ ಅವರ ಹಿಜಾಬ್ ಮೂಲಭೂತ ಹಕ್ಕು ಎಂಬ ಪ್ರಚೋದನೆಯೇ ಇದಕ್ಕೆ ನೇರ ಕಾರಣ’ ಅಂತಾ ಹೇಳಿದೆ.


ಇದನ್ನೂ ಓದಿ: Bengaluru police : ಮನೆ ಮಾರಲು ಅಡ್ಡಿಯಾದ ಮರಕ್ಕೆ ವಿಷ ಹಾಕಿದ ಮನೆ ಮಾಲೀಕ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.