ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ಅವರು ವರ್ಗಾವಣೆ ವಿಚಾರವಾಗಿ ಮಾತನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿರುವ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ. ಇದೇ ವಿಚಾರವಾಗಿ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಧೃತರಾಷ್ಟ್ರನಿಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ..!’ವೆಂದು ಕುಟುಕಿದೆ.


COMMERCIAL BREAK
SCROLL TO CONTINUE READING

ವರ್ಗಾವಣೆಗೆ ಫೋನ್‌ ಕರೆ ಮಾಡಿ "ಹಲೋ ಅಪ್ಪಾ" ಎಂದ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯರನ್ನು ಸಿಎಂ ಸಿದ್ದರಾಮಯ್ಯನವರು ಸಮರ್ಥನೆ ಮಾಡುತ್ತಿರುವ ಪರಿ ಹೇಗಿದೆ ಅಂದ್ರೆ, ಸ್ವಾತಂತ್ರ್ಯ ಇಲ್ವಾ?, ಅಧಿಕಾರ ಇಲ್ವಾ?, ಶ್ಯಾಡೋ ಸಿಎಂ ಅಲ್ವಾ?, ಮುಖ್ಯಮಂತ್ರಿ ಮಗ ಅಲ್ವಾ?, ಕ್ಷೇತ್ರ ನೋಡಿಕೊಳ್ಳ ಬಾರದಾ?, ನನಗೆ ಕ್ಷೇತ್ರ ಬಿಟ್ಟು ಕೊಟ್ಟಿಲ್ವಾ?’ ಎಂದು ಬಿಜೆಪಿ ಟೀಕಿಸಿದೆ.


"ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ"


‘ಸಿಎಂ ಸಿದ್ದರಾಮಯ್ಯನವರೇ, ನಿಮ್ಮ  ಭ್ರಷ್ಟ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿರುವ ಕಾಂಗ್ರೆಸ್ ಶಾಸಕರ ಪಟ್ಟಿಗೆ ಹೊಸ ಸೇರ್ಪಡೆ ಜಗಳೂರು ಶಾಸಕ ದೇವೇಂದ್ರಪ್ಪ!! ಆಡಳಿತ ಪಕ್ಷದ ಶಾಸಕರುಗಳು ತಮ್ಮದೇ ಸರ್ಕಾರದ ವಿರುದ್ಧ ಈ ರೀತಿ ರಾಜೀನಾಮೆ ನೀಡುವಷ್ಟರ ಮಟ್ಟಿಗೆ ಅಸಹಾಯಕರಾಗಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು!!’ ಎಂದು ಬಿಜೆಪಿ ಕುಟುಕಿದೆ.


‘ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕಲೆಕ್ಷನ್‌ ಹಾಗೂ ಪಂಚ ರಾಜ್ಯಗಳಿಗೆ ಕಳುಹಿಸಿದ ಕಾಂಚಾಣದ ಲೆಕ್ಕವನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ರೀತಿ, ರಾಜೀನಾಮೆ ನೀಡಲು ಸಿದ್ಧ ಎಂದಿರುವ ನಿಮ್ಮದೇ ಪಕ್ಷದ ಶಾಸಕರ ಹೆಸರನ್ನೂ ಸಹ ಬರೆದಿಟ್ಟುಕೊಳ್ಳಿ, ಭವಿಷ್ಯದಲ್ಲಿ ನಿಮಗೆ ಪ್ರಯೋಜನಕ್ಕೆ ಬಂದರೂ ಬರಬಹುದು, ಅಲ್ಲವೇ ಕಾಂಗ್ರೆಸ್?’ ಎಂದು ಪ್ರಶ್ನಿಸಿದೆ.


ಇದನ್ನೂ ಓದಿ: ಅಪ್ಪ-ಮಗನ ತಲೆಯಲ್ಲಿ ಅರಳಿದ ವಿಶ್ವ ಕಪ್: ಟೀಂ ಇಂಡಿಯಾಗೆ ವಿಶೇಷವಾಗಿ ವಿಶ್!!


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ!


‘ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ ಪ್ರಿಯಾಂಕ್ ಖರ್ಗೆಯವರು, ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್‌ರವರನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿ, ಕಿರುಕುಳ ನೀಡಿದ್ದಾರೆ. ಮಣಿಕಂಠ ರಾಠೋಡ್‌ರವರ ಜೀವಕ್ಕೆ ಏನಾದರೂ ಹಾನಿಯಾದರೆ, ಅದಕ್ಕೆ ನೇರ ಹೊಣೆ ಸಚಿವ ಪ್ರಿಯಾಂಕ್ ಮತ್ತು ಕಾಂಗ್ರೆಸ್ ಸರ್ಕಾರ’ವೆಂದು ಬಿಜೆಪಿ ಕಿಡಿಕಾರಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.