ಚುನಾವಣೆ, ಉಪಚುನಾವಣೆ ಬಂದಾಗಲೆಲ್ಲ ವರಸೆ ಬದಲಾಯಿಸುವ ಸಿದ್ದರಾಮಯ್ಯ: ಬಿಜೆಪಿ
ಬಾದಾಮಿಯಿಂದ ಮತ್ತೆ ವಲಸೆ ಹೋಗಲು ಸಿದ್ದರಾಮಯ್ಯ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಹಾನಗಲ್ ಉಪಚುನಾವಣೆ(Hanagal By election) ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. ‘ನಾನು ಮುಖ್ಯಮಂತ್ರಿ ಆಗುವ ಮೊದಲು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನ 400 ಕೋಟಿ ರೂ.ಇತ್ತು, ನಾನು ಪ್ರತಿ ವರ್ಷ ಅನುದಾನ ಹೆಚ್ಚಿಸಿದ್ದೆ. ಕೊನೆ ಬಜೆಟ್ ನಲ್ಲಿ ಅದು 3,100 ಕೋಟಿ ರೂ. ಆಗಿತ್ತು. ಇದು ನಿಜವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಸಿದ್ದರಾಮಯ್ಯ ಹೇಳಿದ್ದರು.
ಹೆಬ್ಬೆಟ್ಟು ಗಿರಾಕಿ ಪ್ರಧಾನಿ ಮೋದಿಯಿಂದ ದೇಶ ನರಳುತ್ತಿದೆ: ಕಾಂಗ್ರೆಸ್
‘ಸಿದ್ದರಾಮಯ್ಯ ಅವರೇ, ಈ ರೀತಿ ಸುತ್ತಿ ಬಳಸಿ ಮಾತನಾಡುವ ಬದಲು ಬಹುಸಂಖ್ಯಾತರ ತುಳಿದು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಹೀಗಾಗಿ ಮುಂದಿನ ಬಾರಿ ಚಾಮರಾಜಪೇಟೆಗೆ ವಲಸೆ ಹೋಗುತ್ತೇನೆ ಎಂದು ನೇರವಾಗಿಯೇ ಹೇಳಬಹುದಲ್ಲವೇ?’ ಎಂದು ಬಿಜೆಪಿ(Karnataka BJP)ಪ್ರಶ್ನಿಸಿದೆ.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿ ಸಮರ್ಥನೆ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
Siddaramaiah)ನವರೇ ‘ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್?’ ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ