ಮುಂದಿನ ಚುನಾವಣೆಗೆ ರಕ್ತದಿಂದ ನೆಲವನ್ನು ಹದಗೊಳಿಸಲು ಬಿಜೆಪಿ ಅಣಿಯಾಗುತ್ತಿದೆ: ಕಾಂಗ್ರೆಸ್ ಆರೋಪ

ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೇಡ್​ ದೀಕ್ಷೆ ನೀಡಿಲ್ಲ, ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷೆ ನೀಡಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದರು.

Written by - ZH Kannada Desk | Last Updated : Oct 16, 2021, 11:05 AM IST
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ವಿಚಾರ
  • ಬಸವರಾಜ್ ಬೊಮ್ಮಾಯಿಯವರ ಕುಮ್ಮಕ್ಕಿನ ಆಕ್ಷನ್‌ಗೆ ಶಸ್ತ್ರಾಸ್ತ್ರ ಹಂಚಿಕೆಯ ರಿಯಾಕ್ಷನ್ ವ್ಯಕ್ತವಾಗಿದೆ
  • ಮುಖ್ಯಮಂತ್ರಿಗಳ ‘ಆಕ್ಷನ್ & ರಿಯಾಕ್ಷನ್’ ಹೇಳಿಕೆ ಕೆಲಸ ಮಾಡತೊಡಗಿದೆ ಎಂದು ಟೀಕಿಸಿದ ಕಾಂಗ್ರೆಸ್
ಮುಂದಿನ ಚುನಾವಣೆಗೆ ರಕ್ತದಿಂದ ನೆಲವನ್ನು ಹದಗೊಳಿಸಲು ಬಿಜೆಪಿ ಅಣಿಯಾಗುತ್ತಿದೆ: ಕಾಂಗ್ರೆಸ್ ಆರೋಪ

ಬೆಂಗಳೂರು: ಮುಂದಿನ ಚುನಾವಣೆಗೆ ರಕ್ತದಿಂದ ನೆಲವನ್ನು ಹದಗೊಳಿಸಲು ಬಿಜೆಪಿ(BJP) ಅಣಿಯಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್(Karnataka Congress) ಆರೋಪಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಕಿಡಿಕಾರಿದೆ.

ಆಯುಧಪೂಜೆ(Ayudha Puja)ಯ ಅಂಗವಾಗಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಾರ್ವಜನಿಕವಾಗಿ ಆಯುಧ ಪ್ರದರ್ಶಿಸಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್, ‘ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೇಡ್​ ದೀಕ್ಷೆ ನೀಡಿಲ್ಲ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷೆ(Trishul Diksha) ನೀಡಿದ್ದೇವೆ’ ಎಂದು ಹೇಳಿದ್ದರು.

 Congress-121.jpg

 ಇದನ್ನೂ ಓದಿ: ವೈರಲ್ ವೀಡಿಯೋಗೆ ಬೇರೆ ಯಾರನ್ನೂ ದೂಷಿಸುವುದಿಲ್ಲ : ಡಿ. ಕೆ ಶಿವಕುಮಾರ್

ಈ ವಿಚಾರವಾಗಿ #ತಾಲಿಬಾನಿಬಿಜೆಪಿ ಹ್ಯಾಶ್ ಟ್ಯಾಬ್ ಬಳಸಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ‘ಮುಖ್ಯಮಂತ್ರಿಗಳ ‘ಆಕ್ಷನ್ & ರಿಯಾಕ್ಷನ್’ ಹೇಳಿಕೆ ಕೆಲಸ ಮಾಡತೊಡಗಿದೆ. ಸ್ವಸ್ಥ ಸಮಾಜವನ್ನು ಕಟ್ಟಿಕೊಡಬೇಕಾದವರೇ ಶಾಂತಿಭಂಗಕ್ಕೆ ಕುಮ್ಮಕ್ಕು ನೀಡುತ್ತಿರುವಾಗ ಸಮಾಜಘಾತುಕ ಶಕ್ತಿಗಳಿಗೆ ಇನ್ಯಾವ ಭಯ? ಬಸವರಾಜ್ ಬೊಮ್ಮಾಯಿ(Basavaraj Bommai )ಯವರ ಕುಮ್ಮಕ್ಕಿನ ಆಕ್ಷನ್‌ಗೆ ಶಸ್ತ್ರಾಸ್ತ್ರ ಹಂಚಿಕೆಯ ರಿಯಾಕ್ಷನ್ ವ್ಯಕ್ತವಾಗಿದೆ’ ಎಂದು ಕುಟುಕಿದೆ.  

‘ಯಶಸ್ವಿ ಯೋಜನೆಗಳಿಲ್ಲದೆ, ಸಾಧನೆಯ ಬಂಡವಾಳವಿಲ್ಲದೆ, ತಮ್ಮ ವಿಫಲ ಆಡಳಿತವನ್ನು ಮರೆಮಾಚಿ ಮುಂದಿನ ಚುನಾವಣೆಗೆ ನೆಲವನ್ನು ರಕ್ತದಿಂದ ಹದಗೊಳಿಸಲು ಅಣಿಯಾಗುತ್ತಿದೆ ಬಿಜೆಪಿ. ಅದರ ಭಾಗವಾಗಿಯೇ ‘ಆಕ್ಷನ್ & ರಿಯಾಕ್ಷನ್‌’ಗಳಿಗೆ ಕುಮ್ಮಕ್ಕು ಕೊಡುವ ತಂತ್ರ ರೂಪಿಸುತ್ತಿದೆ ಬಿಜೆಪಿ. ರಾಜ್ಯದ ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಬಿಜೆಪಿ(BJP Government) ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

 ಇದನ್ನೂ ಓದಿ: Karnataka Politics: ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ, ನಡೆದಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News