ಬೆಂಗಳೂರು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾವಣೆ ಮೂಲಕ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯಲ್ಲಿ ಎಂದಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆಯಾ? ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಬಿಜೆಪಿಯಲ್ಲಿ ಇದೆಯೇ? ಎಂದು ಪ್ರಶ್ನಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

#ಉತ್ತರಿಸಿಸಿದ್ದರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬಿಜೆಪಿ ಪಕ್ಷದ ನೀತಿ ನಿಯಮದಂತೆ ರಾಷ್ಟ್ರೀಯ ಅಧ್ಯಕ್ಷರ ನೇಮಕ  ನಡೆಯುತ್ತದೆ. ಜೆಡಿಎಸ್‌ ಪಕ್ಷದಿಂದ ವಲಸೆ ಬಂದ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿನ ಅಸಲಿ ಕಥೆ ತಿಳಿದಿದೆಯೇ? ಸುಮಾರು 137 ವರ್ಷ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷೀಯ ಹುದ್ದೆಗೆ ಕೇವಲ 6 ಬಾರಿ ಮಾತ್ರ ಚುನಾವಣೆ ನಡೆದಿದ್ದೇಕೆ?’ ಎಂದು ಪ್ರಶ್ನಿಸಿದೆ.


ಹಿಂದೂ ವಿರೋಧಿ ಕಾಂಗ್ರೆಸ್ ಧೋರಣೆ ಬಗ್ಗೆ ಟೀಕಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ


‘ಕಾಂಗ್ರೆಸ್‌ ಸ್ಥಾಪನೆಯಾದ ಬರೋಬ್ಬರಿ 50ಕ್ಕೂ ಅಧಿಕ ವರ್ಷದ ಬಳಿಕ ಚುನಾವಣೆ ನಡೆದಿದ್ದೇಕೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ ಸಿದ್ದರಾಮಯ್ಯ? ಕಾಂಗ್ರೆಸ್ಸಿನ ಚುನಾಯಿತ ಮೊದಲ ಅಧ್ಯಕ್ಷ ನೇತಾಜಿಗೆ ನೆಹರೂ ಮಾನಸಿಕ ಹಿಂಸೆ ನೀಡಿದ್ದೇಕೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ? ನೇತಾಜಿ ಮತ್ತು ಪುರುಷೋತ್ತಮ್‌ ಟಂಡನ್‌ ವಿರುದ್ಧ ತೆರೆಮರೆಯ ಕಸರತ್ತು ನಡೆಸಿ ಅವರನ್ನು ರಾಜಿನಾಮೆ ಕೊಡಿಸುವಂತೆ ಮಾಡಿದ ನೆಹರೂ ಯಾವುದೇ ಚುನಾವಣೆಯಿಲ್ಲದೆ 3 ಬಾರಿ ಅಧ್ಯಕ್ಷರಾದರು. ಆಗ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರಲಿಲ್ಲವೇ ಸಿದ್ದರಾಮಯ್ಯ? ಎಂದು ಬಿಜೆಪಿ ಟೀಕಿಸಿದೆ.


ಮುಂದಿನ ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ: ಸಿದ್ದರಾಮಯ್ಯ


‘ಬರೋಬ್ಬರಿ 22 ವರ್ಷಗಳ ಬಳಿಕ ಅಂದರೆ 2022ರಲ್ಲಿ ಭಾರತೀಯರೊಬ್ಬರನ್ನು ಕಾಂಗ್ರೆಸ್‌ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಕಾಂಗ್ರೆಸ್‌ ಕೊನೆಯ 2 ಅಧ್ಯಕ್ಷರನ್ನು ಬದಲಾಯಿಸುವ ವೇಳೆಯೊಳಗೆ, ಬಿಜೆಪಿ ಪಕ್ಷದಲ್ಲಿ 10 ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ. ಯಾವ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಹೆಚ್ಚಿದೆ?’ ಎಂದು ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.