ಸಿದ್ದರಾಮಯ್ಯಗೆ ಪರಮೇಶ್ವರ್, ಖರ್ಗೆ & ಡಿಕೆಶಿ ಖೆಡ್ಡಾ ತೋಡುವುದು ಖಚಿತ: ಬಿಜೆಪಿ

ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ರಾಜ್ಯಾದಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Nov 7, 2022, 08:51 PM IST
  • ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ
  • ಸಿದ್ದರಾಮಯ್ಯನವರೇ ಅಧಿಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದ ಬಿಟ್ಟು ಮೊದಲು ನಿಮ್ಮ ಕ್ಷೇತ್ರ ಅಂತಿಮಗೊಳಿಸಿ
  • ನೀವೆಲ್ಲೇ ಸ್ಪರ್ಧಿಸಿದರೂ ಪರಮೇಶ್ವರ್‌, ಖರ್ಗೆ, ಡಿಕೆಶಿ ನಿಮಗೆ ಖೆಡ್ಡಾ ತೋಡುವುದು ಖಚಿತ
ಸಿದ್ದರಾಮಯ್ಯಗೆ ಪರಮೇಶ್ವರ್, ಖರ್ಗೆ & ಡಿಕೆಶಿ ಖೆಡ್ಡಾ ತೋಡುವುದು ಖಚಿತ: ಬಿಜೆಪಿ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. #SidduVsDKS ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯನವರೇ ನೀವು ಅಧಿಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮಗಾಗಿ ಒಂದು ಕ್ಷೇತ್ರವನ್ನು ಮೊದಲು ಅಂತಿಮಗೊಳಿಸಿ. ನೀವೆಲ್ಲೇ ಸ್ಪರ್ಧಿಸಿದರೂ ಡಾ.ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್ ನಿಮಗೆ ಖೆಡ್ಡಾ ತೋಡುವುದು ಖಚಿತ’ವೆಂದು ಕುಟುಕಿದೆ.

ಇದನ್ನೂ ಓದಿ: "ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ"

‘ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ರಾಜ್ಯಾದಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ. ರಾಹುಲ್ ಗಾಂಧಿ ಸಹಿತ ಯಾರಿಂದಲೂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಜೋಡಿಸಲು ಸಾಧ್ಯವಿಲ್ಲ. ಇವರಿಬ್ಬರು ಒಂದಾಗಲು ಕುರ್ಚಿಯ ಆಸೆ ಬಿಡಬೇಕು, ಸಿದ್ದರಾಮಯ್ಯ ನಿಮ್ಮಿಂದ ಸಿಎಂ ಕುರ್ಚಿ ಆಸೆ ಬಿಡಲು ಸಾಧ್ಯವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್ಸಿನ ಎವರ್ ಗ್ರೀನ್ ಬಾಲಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಒಗ್ಗೂಡಿಸಲು ಮಾಡಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಂತೆ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗರು ಜೊತೆಯಾಗಿ #JanaSankalpaYatre ಮಾಡುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಂಗಳು ಸೃಷ್ಟಿಯಾಗಿವೆ!: ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News