ಬೆಂಗಳೂರು: ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK shivakumar)ವಿರುದ್ಧ ಬಿಜೆಪಿ ಟೀಕಿಸಿದೆ. ಬಿಜೆಪಿಯವರು ಸೂರತ್ ನಿಂದ 50 ಲಕ್ಷ ಶಾಲು ಆರ್ಡರ್ ಮಾಡಿದ್ದಾರೆ, ಪ್ರತಿಭಟನೆಗೆ ಮಂತ್ರಿ ಮಗನಿಂದಲೇ ಶಾಲು ಹಂಚಿಕೆ ಮಾಡಲಾಗಿದೆ ಎಂಬ ಡಿಕೆಶಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

Karnataka Hijab Row)ವನ್ನು ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹಿಜಾಬ್ ಪೂರೈಕೆ ಮಾಡಿದ್ದು ಕೆಪಿಸಿಸಿ ಕಚೇರಿಯಿಂದಲೇ?’ ಅಂತಾ ಪ್ರಶ್ನಿಸಿದೆ.


Hijab Row: ‘ನೆರೆಮನೆಗೆ ಬೆಂಕಿ ಬಿದ್ದಾಗ ಕಾಂಗ್ರೆಸ್ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ’


‘ಸಿದ್ದರಾಮಯ್ಯ(Siddaramaiah), ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲಾಲಾ ಯೂಸುಫ್ ಜಾಯ್, ಕಮಲ್ ಹಾಸನ್, ಅಲ್ ಜಜೀರಾ!!! ಇವರೆಲ್ಲಾ ಹಿಜಾಬ್ ವಿವಾದ(Hijab vs saffron shawls,)ದ ಹಿಂದಿರುವ ಧ್ವನಿಗಳು. ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್. ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಯುವ ಜನಾಂಗ ಈ ರೀತಿ ಇಬ್ಭಾಗವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ’ ಅಂತಾ ಬಿಜೆಪಿ ಆರೋಪಿಸಿದೆ.


DK shivakumar) ಅವರು ಸದಾರಮೆ ನಾಟಕವಾಡಿದಾಗಲೇ ರಾಜ್ಯದ ಜನತೆಗೆ ಅರ್ಥವಾಗಿತ್ತು. ಸುಳ್ಳೇ ಕಾಂಗ್ರೆಸ್ಸಿಗರ ಮನೆ ದೇವರು ಎಂಬ ಸತ್ಯ ದೇಶದ ಜನತೆಗೆ ಎಂದೋ ಅರಿವಾಗಿದೆ. ಡಿಕೆಶಿಯವರೇ ರಾಷ್ಟ್ರಧ್ವಜ ಇಳಿಸಿದ್ದಕ್ಕೆ ನಿಮ್ಮ ಬಳಿ ಪೂರಕ ಸಾಕ್ಷಿ ಇದೆಯೇ? ಸಾಕ್ಷ್ಯ ಒದಗಿಸುವಿರಾ ಡಿಕೆಶಿ? ತಿರಂಗ ಧ್ವಜವನ್ನು ಅಪಮಾನಿಸಿದ ನೀವು ಈ ಬಗ್ಗೆ ಒಂದೋ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಸಾಕ್ಷ್ಯ ಒದಗಿಸಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸಿದ ನೀವು ರಾಜಕೀಯದಲ್ಲಿರಲು ಅನರ್ಹ’ ಅಂತಾ ಬಿಜೆಪಿ ಕುಟುಕಿದೆ.


ಇದನ್ನೂ ಓದಿ: ರಾಜ್ಯದಲ್ಲಿನ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ನೇರ ಹೊಣೆ: ಬಿಜೆಪಿ ಆರೋಪ


‘ಹಿಜಾಬ್ ಸಂಚಿನ ಹಿಂದೆ ಕಾಂಗ್ರೆಸ್ ಕೈವಾಡ ಇದೆ‌ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಾ ಲಭಿಸಿದೆ. ಹಿಜಾಬ್(Karnataka Hijab Row) ಜೊತೆಗೆ ತುಂಡುಡುಗೆಯ ಪರ‌ ಪ್ರಿಯಾಂಕಾ ಗಾಂಧಿ ವಾದ್ರಾ ವಾದ ಮಂಡಿಸಿದ್ದಾರೆ. ಆದರೆ ಈಗ ಇರುವುದು ನಮ್ಮ ಧಿರಿಸಿನ ಪ್ರಶ್ನೆಯಲ್ಲ, ಶಾಲೆಯಲ್ಲಿ ಸಮವಸ್ತ್ರ ಧರಿಸುವ ಪ್ರಶ್ನೆ ಮಾತ್ರ. ಹಿಜಾಬ್ ವಿವಾದ ಒಂದು ಅಂತಾರಾಷ್ಟ್ರೀಯ ಸಂಚು. ಭಾರತದ ಘನತೆಯನ್ನು ಕುಗ್ಗಿಸುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದಲ್ಲಿ ಹಿಜಾಬ್‌ ವಿವಾದ ವ್ಯಾಪಿಸುತ್ತಿದೆ. ಈ ಅಭಿಯಾನಕ್ಕೆ ಅಂತಾರಾಷ್ಟ್ರೀಯ ಮಟ್ಟದ ಶಕ್ತಿಗಳು ಕೈ ಮಿಲಾಯಿಸುತ್ತಿವೆ!’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.