Hijab Row: ‘ನೆರೆಮನೆಗೆ ಬೆಂಕಿ ಬಿದ್ದಾಗ ಕಾಂಗ್ರೆಸ್ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ’

ಹಿಜಾಬ್ ನಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿರುವ ಕೆಲವೇ ವಿದ್ಯಾರ್ಥಿಗಳು ಈ ಹಿಂದೆ ಸಮವಸ್ತ್ರದಲ್ಲಿಯೇ ಕಾಲೇಜಿಗೆ ಬರುತ್ತಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Feb 8, 2022, 02:24 PM IST
  • ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ
  • ಭಾರತದಲ್ಲಿ ಧಾರ್ಮಿಕ ಅಸಹನೆಯಿದೆ ಎಂಬ ಸುಳ್ಳು ವಿಚಾರ ಪ್ರತಿಷ್ಠಾಪಿಸುವ ಯೋಜಿತ ಸಂಚು ಇದಲ್ಲವೇ?
  • ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಪ್ರವೇಶ ಎಷ್ಟು ಸರಿ? ಎಂದು ಪ್ರಶ್ನಿಸಿದ ಬಿಜೆಪಿ
Hijab Row: ‘ನೆರೆಮನೆಗೆ ಬೆಂಕಿ ಬಿದ್ದಾಗ ಕಾಂಗ್ರೆಸ್ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ’ title=
ಹಿಜಾಬ್ ವಿವಾದದ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ

ಬೆಂಗಳೂರು: ನೆರೆಮನೆಗೆ ಬೆಂಕಿ ಬಿದ್ದಾಗ ಕಾಂಗ್ರೆಸ್ ಪಕ್ಷವು ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ ಅಂತಾ ಬಿಜೆಪಿ ಕಿಡಿಕಾರಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ವಿಚಾರವಾಗಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ‘ರಾಜ್ಯದಲ್ಲಿ ಹಿಜಾಬ್ ವಿವಾದ(Karnataka Hijab Row) ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ. ಉಡುಪಿ, ಕುಂದಾಪುರದ ವಿದ್ಯಾರ್ಥಿನಿಯರನ್ನು ಈ ವಿವಾದಕ್ಕೆ ಬಳಸಿಕೊಳ್ಳಲಾಗಿದೆ. ಈಗ ರಾಜ್ಯಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ’ ಅಂತಾ ಆರೋಪಿಸಿದೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಪ್ರವೇಶ ಎಷ್ಟು ಸರಿ? ಹಿಜಾಬ್ ವಿವಾದ(Hijab Row) ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ಸುದ್ದಿಯಾಗಿ ಪ್ರಕಟಿಸಲಾಯಿತು. ಭಾರತದಲ್ಲಿ ಧಾರ್ಮಿಕ ಅಸಹನೆ ಇದೆ ಎಂಬ ಸುಳ್ಳು ವಿಚಾರವನ್ನು ಪ್ರತಿಷ್ಠಾಪಿಸುವ ಯೋಜಿತ ಸಂಚು ಇದಲ್ಲವೇ? ಈ ಟೂಲ್ ಕಿಟ್‌ನ ಹಿಂದಿರುವ ರಾಷ್ಟ್ರ ವಿರೋಧಿ ಶಕ್ತಿಗಳ ಹೆಸರು ಬಹಿರಂಗವಾಗಲಿ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Bengaluru police : ಮನೆ ಮಾರಲು ಅಡ್ಡಿಯಾದ ಮರಕ್ಕೆ ವಿಷ ಹಾಕಿದ ಮನೆ ಮಾಲೀಕ!

‘ಹಿಜಾಬ್ ನಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿರುವ ಕೆಲವೇ ವಿದ್ಯಾರ್ಥಿಗಳು ಈ ಹಿಂದೆ ಸಮವಸ್ತ್ರದಲ್ಲಿಯೇ ಕಾಲೇಜಿಗೆ ಬರುತ್ತಿದ್ದರು. ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸುವಾಗ ಹಿಜಾಬ್ ಅಗತ್ಯ ಕಾಣಲಿಲ್ಲ. ಹಾಗಾದರೆ, ಈಗಿನ ಪ್ರತಿಭಟನೆಯ ಹಿಂದಿನ ಉದ್ದೇಶವೇನು?’ ಅಂತಾ ಬಿಜೆಪಿ ಪ್ರಶ್ನಿಸಿದೆ.

‘ಉಡುಪಿ, ಕುಂದಾಪುರಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ(Hijab Row) ಈಗ ರಾಜ್ಯದ ಇತರೆ ಜಿಲ್ಲೆಗಳಿಗೆ ವ್ಯಾಪಿಸಿದೆ. ಕೋರ್ಟ್ ಮೆಟ್ಟಿಲೇರಿದೆ. ಈ ವಿವಾದವನ್ನು ತನ್ನ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಹವಣಿಸುತ್ತಿದೆ. ನೆರೆಮನೆಗೆ ಬೆಂಕಿ ಬಿದ್ದಾಗ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ’ ಅಂತಾ ಕಿಡಿಕಾರಿದೆ.

ಇದನ್ನೂ ಓದಿ: ರಾಜ್ಯದಲ್ಲಿನ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ನೇರ ಹೊಣೆ: ಬಿಜೆಪಿ ಆರೋಪ

‘ಹಿಜಾಬ್ ಪ್ರಕರಣದ ದುರುದ್ದೇಶ, ಜಾತ್ಯತೀತ ಹೆಸರಿನಲ್ಲಿನ ಮುಖವಾಡ ಎರಡೂ ಕಳಚಿ ಬೀಳುವ ಸಮಯವಿದು. ಮುಸ್ಲಿಂ ಮಹಿಳೆಯರ ಹಕ್ಕಿನ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್(Congress) ನಾಯಕರಿಗೆ, ಇದೇ ಮಹಿಳೆಯರು ತ್ರಿವಳಿ ತಲಾಖ್‌ನಿಂದ ಎದುರಿಸುವ ದೌರ್ಜನ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ?’ ಅಂತಾ ಕುಟುಕಿದೆ.

‘ಹಿಜಾಬ್ ವಿವಾದದ ಹಿಂದೆ ಎಸ್‌ಡಿಪಿಐ ಕೈವಾಡ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳುತ್ತಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ & ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಈ ವಿವಾದಕ್ಕೆ ಪ್ರೇರಣೆ ನೀಡುತ್ತಾರೆ. ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುತ್ತಾರೆ. ಹಾಗಾದರೆ ಇವರ ಉದ್ದೇಶವೇನು?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News