ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣಗೆ ಟಿಕೆಟ್!: ದೊಡ್ಡಗೌಡರ ಕುಟುಂಬ ರಾಜಕಾರಣಕ್ಕೆ ಬಿಜೆಪಿ ವ್ಯಂಗ್ಯ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ ವ್ಯಂಗ್ಯವಾಡಿದೆ.
ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್(MLC Election Ticket)ನೀಡಲಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.#ಮಿಶನ್‌ಕುಟುಂಬರಾಜಕಾರಣ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ದೊಡ್ಡಗೌಡರ ಕುಟುಂಬ ರಾಜಕಾರಣವನ್ನು ಟೀಕಿಸಿದೆ.
[[{"fid":"222649","view_mode":"default","fields":{"format":"default","field_file_image_alt_text[und][0][value]":"JDS Karnataka","field_file_image_title_text[und][0][value]":"JDS Karnataka"},"type":"media","field_deltas":{"1":{"format":"default","field_file_image_alt_text[und][0][value]":"JDS Karnataka","field_file_image_title_text[und][0][value]":"JDS Karnataka"}},"link_text":false,"attributes":{"alt":"JDS Karnataka","title":"JDS Karnataka","class":"media-element file-default","data-delta":"1"}}]]
‘ಪಕ್ಷಕ್ಕೋಸ್ಕರ ನೀವು ದುಡಿಮೆ ಮಾಡಿ. ಅಧಿಕಾರವೂ ನಿಮ್ಮದೇ ಆಗಿರುತ್ತದೆ ಎಂದು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಬಹುಷಃ ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್ ನೀಡಲಾಗಿದೆ’ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: JOB: ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
HD Deve Gowda)ರದು ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
[[{"fid":"222650","view_mode":"default","fields":{"format":"default","field_file_image_alt_text[und][0][value]":"JDS Karnataka","field_file_image_title_text[und][0][value]":"JDS Karnataka"},"type":"media","field_deltas":{"2":{"format":"default","field_file_image_alt_text[und][0][value]":"JDS Karnataka","field_file_image_title_text[und][0][value]":"JDS Karnataka"}},"link_text":false,"attributes":{"alt":"JDS Karnataka","title":"JDS Karnataka","class":"media-element file-default","data-delta":"2"}}]]
‘ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡರ ಕುಟುಂಬದ ಎಲ್ಲಾ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ಎಚ್.ಡಿ.ರೇವಣ್ಷ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ(Suraj Revanna), ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರೂ ರಾಜಕೀಯ ಸ್ಥಾನಮಾನ ಪಡೆಯುತ್ತಿದ್ದಾರೆ. ಕುಟುಂಬದ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: ಅತ್ಯುತ್ತಮ ವಾಯುಗುಣಮಟ್ಟದಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದ ಗದಗ ಮತ್ತು ಮಡಿಕೇರಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.