Karnataka Budget 2021 : ಬಜೆಟ್ನಲ್ಲಿ ಕ್ರೀಡೆ, ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು..?
ರಾಜ್ಯದಲ್ಲಿ ಕ್ರೀಡೆಗೆ ಸಾಕಷ್ಟು ಒತ್ತು ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಜೊತೆಗೆ ರಾಜ್ಯಾದ್ಯಂತ ಪ್ರವಾಸೋದ್ಯಮ ಬಲ ಪಡಿಸಲು ತೀರ್ಮಾನಿಸಿದ್ದಾರೆ.
ಬೆಂಗಳೂರು: ಕ್ರೀಡೆ ಮತ್ತು ಪ್ರವಾಸೋದ್ಯಮ (Sports and Tourism) ಯಾವುದೇ ಒಂದು ರಾಜ್ಯದ ಪ್ರತಿಷ್ಠೆಯ ಪ್ರಶ್ನೆ. ಯುವ ಜನ ಅಭಿವೃದ್ದಿಗೆ ಕ್ರೀಡೆ ಹಾಗೂ ರಾಜ್ಯದ ಸಂಸ್ಕೃತಿಯ ಪ್ರದರ್ಶನಕ್ಕೆ ಪ್ರವಾಸೋದ್ಯಮ ಅತಿ ಮುಖ್ಯವಾಗಿದೆ. ರಾಜ್ಯದಲ್ಲಿ ಕ್ರೀಡೆಗೆ ಸಾಕಷ್ಟು ಒತ್ತು ನೀಡಲು ಯಡಿಯೂರಪ್ಪ (BS Yediyurappa) ನಿರ್ಧರಿಸಿದ್ದಾರೆ. ಜೊತೆಗೆ ರಾಜ್ಯಾದ್ಯಂತ ಪ್ರವಾಸೋದ್ಯಮ ಬಲ ಪಡಿಸಲು ತೀರ್ಮಾನಿಸಿದ್ದಾರೆ.
ಕ್ರೀಡೆ ಮತ್ತು ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು..? ಇಲ್ಲಿದೆ ಡೀಟೈಲ್ಸ್. :
1.ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ
2.ಮಂಡ್ಯ (Mandya) ನಗರದ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ ರೂ
3.2022ಕ್ಕೆ ಬೆಂಗಳೂರಿನಲ್ಲಿ (Bengaluru) ರಾಷ್ಟ್ರ ಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ
4.ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ ರೂ ಅನುದಾನ
ಇದನ್ನೂ ಓದಿ : Karnataka Budget 2021: ಬಜೆಟ್ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಬಿಎಸ್ ವೈ ಲೆಕ್ಕಾಚಾರ!
5.ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ ಅನುದಾನ.
6.ಮೈಸೂರು ಜಿಲ್ಲೆ ಕಬಿನಿ ಡ್ಯಾಮ್ (Kabini Dam) ಕೆಳಭಾಗದ ಪಾರ್ಕ್ ಸ್ಥಾಪನೆಗೆ 50 ಕೋಟಿ ರೂ.
7.ಉಡುಪಿ ಜಿಲ್ಲೆ ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ ರೂ.
8.ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ 10 ಕೋಟಿ ರೂ. ಅನುದಾನ
9.ಬಳ್ಳಾರಿಯಲ್ಲಿ ಐತಿಹಾಸಿಕ ಯುಗದ ಅವಶೇಷಗಳ ಮ್ಯೂಸಿಯಂಗೆ (Museum) 2 ಕೋಟಿ
10. ಸಿದ್ದಗಂಗಾ ಶ್ರೀ (Siddaganga Shree) ಹಾಗೂ ಪೇಜಾವರ ಶ್ರೀಗಳ ಸ್ಮೃತಿವನ ಸ್ಥಾಪನೆಗೆ 2 ಕೋಟಿ ರೂ ಅನುದಾನ ನೀಡಲಾಗುವುದು
ಇದನ್ನೂ ಓದಿ : Karnataka Budget 2021 : ಕರೋನಾ ಕಾಲದಲ್ಲಿ ಕೈಹಿಡಿದ ಕೃಷಿಕ..! ಉದ್ಯಮಕ್ಕೆ ಶೇ. 5.1 ರಷ್ಟು ನಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.