ಮಂಡ್ಯ: ರಾಜ್ಯದಲ್ಲಿ ಮುಂಬರುವ ವಿಧಾನಸಭೆಗೆ ಜೆಡಿಎಸ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ವಲಯವಾರು ವೀಕ್ಷಕರನ್ನ ನೇಮಕ ಮಾಡಿಕೊಂಡು ಪಕ್ಷ ಸಂಘಟನೆಗೆ ಮುಂದಾಗಿದೆ.
ಇದರ ಮಧ್ಯೆ ನಾಗಮಂಗಲದ ಮುಂದಿನ ಜೆಡಿಎಸ್(JDS) ಅಭ್ಯರ್ಥಿ ನಾನೇ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬಹಿರಂಗವಾಗಿಯೇ ಹೇಳಿದ್ದಾರೆ.
BJP: ಬಿಎಸ್ ವೈ ಸಂಪುಟದ ಮತ್ತೋರ್ವ ಸಚಿವರಿಂದ ಖಾತೆ ಬಗ್ಗೆ ಅಸಮಾಧಾನ!
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ(LR Shivarame Gowda), ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೀನಿ. ಮುಂದೆಯೂ ಇರ್ತೀನಿ. ಕೆಲವರು ನನ್ನನ್ನ ಕಳಿಸ್ಬೇಕು ಅಂತ ನೋಡ್ತಿದ್ದಾರೆ. ಆದ್ರೆ, ಪಕ್ಷ ಬಿಡುವ ಗಂಡು ನಾನಲ್ಲ ಎಂದು ಸ್ಪಷ್ಟಪಡಿಸಿದರು.
"ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು"
ಈಗಾಗಲೇ ಎಲ್ಲಾ ಪಕ್ಷಗಳನ್ನೂ ನೋಡಿದ್ದೇನೆ. ನಾನು ಈ ಪಕ್ಷದಲ್ಲೇ ಇದ್ದೀನಿ, ಇಲ್ಲೇ ಟಿಕೆಟ್ ಕೇಳ್ತೀನಿ. ಮುಂದಿನ ಚುನಾವಣೆಗೆ ನಾನೇ ಜೆಡಿಎಸ್ ಪಕ್ಷದ ಅಭ್ಯರ್ಥಿ. ಒಂದು ವೇಳೆ ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸೋದು ಖಚಿತ ಎಂದು ಖಂಡತುಂಡವಾಗಿ ಹೇಳಿದರು.
Ram Mandir: ರಾಮ ಮಂದಿರ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯದಿಂದ '₹ 1 ಕೋಟಿ' ಹೆಚ್ಚು ದೇಣಿಗೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.