Karnataka Budget 2021-22 - ಇಂದು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಧ್ಯಾಹ್ನ 12.05ಕ್ಕೆ ವಿಧಾನಸಭೆಯಲ್ಲಿ ತಮ್ಮ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಕಳೆದ ವರ್ಷ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋದ ಕರ್ನಾಟಕದಲ್ಲಿ ಆದಾಯದ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ (BS Yadyurappa) ಅವರ ಇಂದಿನ ಬಜೆಟ್ ಗಾತ್ರ ಹೆಚ್ಚಾಗುತ್ತಾ? ಅಥವಾ ಕಡಿಮೆಯಾಗುತ್ತಾ? ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ಬಜೆಟ್ ಗಾತ್ರ ಒಂದೆಡೆಯಾದರೆ ರಾಜ್ಯದ ಖಾಲಿಯಾಗಿರುವ ಖಜಾನೆಗೆ ಮರುಜೀವ ನೀಡಲು ಮುಖ್ಯಮಂತ್ರಿಗಳು ಸಂಪನ್ಮೂಲಗಳ ಕ್ರೂಢೀಕರಣ ಯಾವ ರೀತಿ ಮಾಡುತ್ತಾರೆ ಎಂಬುದು ಅವರ ಮುಂದಿರುವ ದೊಡ್ಡ ಸವಾಲಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ರಾಜ್ಯಗಳಿಗೆ ನೀಡಲಾಗುವ ಸಾಲದ ಮಿತಿಯಲ್ಲಿ ಶೇ. 3ರಷ್ಟು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸಾಲಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗುವ ಸಾಧ್ಯತೆ ಇದೆ. 


ಕಳೆದ ಬಾರಿಯ ಬಜೆಟ್ ನಲ್ಲಿ ಒಟ್ಟು 1863 ಯೋಜನೆಗಳನ್ನು ಘೋಷಿಸಲಾಗಿತ್ತು. ಇವುಗಳಲ್ಲಿ ಸುಮಾರು 368 ಯೋಜನೆಗಳನ್ನು 1 ಕೋಟಿ ರೂ.ಗೂ ಕಡಿಮೆ ಅನುದಾನದ ಯೋಜನೆಗಳಾಗಿದ್ದವು. ಈ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ಸಿಎಂ ಸೇರಿಸುತ್ತಾರೆಯೇ ಎಂಬುದನ್ನು ಸಮಯವೇ ನಿರ್ಧರಿಸಲಿದೆ. 


ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ತೆರಿಗೆಯೇತರ ಆದಾಯಕ್ಕೆ ಸಿಎಂ ಹೆಚ್ಚಿನ ಒಲವು ತೋರುತ್ತಾರೆಯೇ? - ಈ ಬಾರಿಯ ಬಜೆಟ್ ಮಂಡನೆಯ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸರ್ಕಾರಿ ಸಂಸ್ಥೆಗಳ ಖಾಗೀಕರಣಕ್ಕೆ ತಮ್ಮ ಹೆಚ್ಚಿನ ಒಲವು ತೋರಿದ್ದರು. ಕೇಂದ್ರದ ಈ ಫಾರ್ಮುಲಾವನ್ನು ಬಿ.ಎಸ್.ವೈ ಕೂಡ ಅನುಸರಿಸುತ್ತಾರೆಯೇ? ಮತ್ತು ಸರ್ಕಾರಿ ಸಂಸ್ಥೆಗಳನ್ನು ಉದಾಹರಣೆಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಹೆಚ್ಚಳಕ್ಕೆ ಅನುವು ಮಾಡಿ ಕೊಟ್ಟು ಸರ್ಕಾರದ ಮೇಲಿನ ಹೊರೆ ಕಮ್ಮಿ ಮಾಡಿ ತೆರಿಗೆಯೇತರ ಆದಾಯಕ್ಕೆ  PPP ಮಾದರಿ ಸಿದ್ಧಪಡಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.


ಕೊರೊನಾ ಮಹಾಮಾರಿಯ ಬಳಿಕ ಪಾತಾಳಕ್ಕೆ ತಲುಪಿದ್ದ ಇಡೀ ದೇಶದ ಆರ್ಥಿಕತೆ ಇದೀಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಮಹಾಮಾರಿಯ ಹಿನ್ನೆಲೆ ರಾಜ್ಯದಲ್ಲಿಯೂ ಕೂಡ ಖಜಾನೆ ಬರಿದಾಗಿದೆ. ಕಳೆದ ಬಾರಿ 2.37 ಲಕ್ಷ ಕೋಟಿ ರೂ ಗಾತ್ರದ ಆಯವ್ಯಯ ಮಂಡಿಸಿದ್ದ ಯಡಿಯೂರಪ್ಪಾ, ಈ ಬಾರಿ ಬಜೆಟ್ ಗಾತ್ರ ತಗ್ಗಿಸಲು ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುತ್ತಾರೆಯೇ ಅಥವಾ ಸಮೀಕರಿಸುತ್ತಾರೆಯೇ ಎಂಬುದು ಕೂತುಹಲ ಮೂಡಿಸಿದೆ.


ಇದನ್ನೂ ಓದಿ-Karnataka Budget : ಬಿಎಸ್ ವೈ 8 ನೇ ಬಜೇಟ್ ; ಜನ ಮಾನಸದ ನಿರೀಕ್ಷೆಗಳೇನು..?


ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಬಲವರ್ಧನೆಗೆ ಸಿಎಂ ಯಡಿಯೂರಪ್ಪಾ (CM Yadyurappa) ಹೆಚ್ಚಿನ ಒಲವು ತೋರುವ ನಿರೀಕ್ಷೆ ಇದೆ. ಇದರ ಜೊತೆಗೆ ಕೇಂದ್ರದಲ್ಲಿ ಮಂಡನೆಯಾಗಿರುವ ಕೃಷಿ ಕಾನೂನುಗಳ ಹಿನ್ನೆಲೆ ರಾಜ್ಯದ ಕೃಷಿ ಕ್ಷೇತ್ರ, ಪ್ರವಾಸೋದ್ಯಮ, ನಿರಾವರಿ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಗಳಿವೆ.


ಇದನ್ನೂ ಓದಿ-Karnataka Budget 2021-22: ಇಂದು ಬಹುನಿರೀಕ್ಷಿತ ರಾಜ್ಯ ಬಜೆಟ್, ಎಲ್ಲರ ಚಿತ್ತ ಸಿಎಂ ಬಿಎಸ್‌ವೈರತ್ತ


ಒಟ್ಟಾರೆ ಹೇಳುವುದಾದರೆ ರಾಜ್ಯದಲ್ಲಿ ಸೊರಗಿರುವ ಖಜಾನೆ ಹಿನ್ನೆಲೆ ಬಜೆಟ್ ಮಂಡನೆಯ (Budget 2021) ಕಸರತ್ತು ಮುಖ್ಯಮಂತ್ರಿಗಳ ಪಾಲಿಗೆ ಅಷ್ಟೊಂದು ಸುಲಭದ ದಾರಿಯಾಗಿ ಉಳಿದಿಲ್ಲ ಎಂಬುದು ಮಾತ್ರ ನಿಜ.


ಇದನ್ನೂ ಓದಿ-ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಅನ್ನದಾತನಿಗೆ ಖಾತೆಗೆ ₹ 4 ಸಾವಿರ ಜಮಾ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.