Farmers: ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಅನ್ನದಾತನಿಗೆ ಖಾತೆಗೆ ₹ 4 ಸಾವಿರ ಜಮಾ!

ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವರ್ಗಾವಣೆ

Last Updated : Mar 7, 2021, 06:52 PM IST
  • ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೊಸದಾಗಿ ನೋಂದಾಯಿಸಿಕೊಂಡವರಿಗೆ ವಾರ್ಷಿಕ 6 ಸಾವಿರ ರೂಪಾಯಿ
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವರ್ಗಾವಣೆ
  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಮಾಹಿತಿ ಇಲ್ಲಿದೆ
Farmers: ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಅನ್ನದಾತನಿಗೆ ಖಾತೆಗೆ ₹ 4 ಸಾವಿರ ಜಮಾ! title=

ನವದೆಹಲಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೊಸದಾಗಿ ನೋಂದಾಯಿಸಿಕೊಂಡವರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ಶೇಕಡ 100 ರಷ್ಟು ಧನ ಸಹಾಯ ಹೊಂದಿರುವ ಈ ಯೋಜನೆಯಡಿಯಲ್ಲಿ ರೈತರಿಗೆ(Farmers) 6 ಸಾವಿರ ರೂ. ನೆರವು ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುತ್ತದೆ.

Post office saving account : ಕುಳಿತ ಜಾಗದಿಂದಲೇ ಅಕೌಂಟ್ ಒಪನ್ ; ಸಿಗುತ್ತಿದೆ ಉತ್ತಮ ರಿಟರ್ನ್..!

ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Kisan samman nidhi yojana)ಗೆ ನೋಂದಾಯಿಸಿಕೊಳ್ಳಲು ಮಾಹಿತಿ ಇಲ್ಲಿದೆ. ಈ ತಿಂಗಳ ಅಂತ್ಯದೊಳಗೆ ನೋಂದಾಯಿಸಿಕೊಂಡರೆ 4000 ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.

Tamil Nadu Elections: ಕಾಂಗ್ರೆಸ್ ಗೆ 25 ಕ್ಷೇತ್ರಗಳನ್ನ ಬಿಟ್ಟುಕೊಟ್ಟ ಡಿಎಂಕೆ!

ಮಾರ್ಚ್ 31 ರೊಳಗೆ ಹೊಸದಾಗಿ ನೋಂದಾಯಿಸಿಕೊಂಡ ರೈತರ ಖಾತೆ(Account)ಗೆ ಈ ತಿಂಗಳು 2000 ರೂ., ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎರಡನೇ ಕಂತಿನ 2000 ರೂಪಾಯಿ ಜಮಾ ಮಾಡಲಾಗುವುದು.

Mithun Chakraborty: ಬಿಜೆಪಿಗೆ ಸೇರ್ಪಡೆಯಾದ ಬಾಲಿವುಡ್ ನಟ 'ಮಿಥುನ್ ಚಕ್ರವರ್ತಿ'..!

3 ಕಂತುಗಳಲ್ಲಿ ಖಾತೆಗೆ ಹಣ ಜಮಾ:

ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ

ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ವರೆಗೆ

ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31ರವರೆಗೆ ಜಮಾ ಮಾಡಲಾಗುತ್ತದೆ

JEE Main 2021 Results: ಇಂದು ಜೆಇಇ -2021 ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, ಹೇಗೆ ಪರಿಶೀಲಿಸಬೇಕು?

ಯೋಜನೆಗೆ ನೋಂದಾಯಿಸಲು ಮಾಹಿತಿ: ಹೊಸದಾಗಿ ಯೋಜನೆಗೆ ನೊಂದಾಯಿಸುವ ರೈತರು ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್(Website) ಗೆ ಭೇಟಿ ನೀಡಬೇಕು.

ರೈತರ ಕಾರ್ನರ್ ಗೆ ಹೋಗಿ ಹೊಸ ರೈತರ ನೋಂದಣಿ ಕ್ಲಿಕ್ ಮಾಡಿ

ನಿಮ್ಮ ಆಧಾರ್ ಕಾರ್ಡ್(Aadhar Card) ಸಂಖ್ಯೆಯನ್ನು ನಮೂದಿಸಿ

ಕ್ಯಾಪ್ಚಾ ಕೋಡ್ ನಮೂದಿಸಿ

ಮುಂದೆ ಹೋಗಲು ನಿಮ್ಮ ರಾಜ್ಯ ಆಯ್ಕೆ ಮಾಡಿ

ನಿಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಫಾರ್ಮ್ ಭರ್ತಿ ಮಾಡಿ

ನಿಮ್ಮ ಬ್ಯಾಂಕ್ ಖಾತೆ(Bank Account) ವಿವರಗಳನ್ನು ತಿಳಿಸಿ, ಸಬ್ಮಿಟ್ ಮಾಡಿ

International womens day 2021 : ಈ ಎಲ್ಲಾ ಸ್ಥಳಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ

ಯೋಜನೆಗೆ ನೊಂದಾಯಿಸಲು ಅಗತ್ಯವಾದ ದಾಖಲೆಗಳು:

ಆಧಾರ್ ಕಾರ್ಡ್

ನಾಗರಿಕತ್ವ ಪ್ರಮಾಣಪತ್ರ

ಜಮೀನು ಮಾಲೀಕತ್ವದ ದಾಖಲೆ

ಬ್ಯಾಂಕ್ ದಾಖಲೆ ವಿವರ

ಸಹಾಯವಾಣಿ: ಅರ್ಜಿಯ ಸ್ಥಿತಿಯನ್ನು ತಿಳಿಯಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಸಹಾಯವಾಣಿ ಸಂಖ್ಯೆ 011-24300606 ಸಂಪರ್ಕಿಸಬಹುದು.

ಅಮೇರಿಕಾದಲ್ಲಿ ಸ್ವಂತ ಹೋಟೆಲ್ ತೆರೆದ ನಟಿ ಪ್ರಿಯಾಂಕಾ ಚೋಪ್ರಾ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News