ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಇವತ್ತು ತಮ್ಮ 8 ನೇ ಬಜೆಟ್ (Karnataka Budget) ಮಂಡಿಸಲಿದ್ದಾರೆ. ಬಜೆಟ್ ಅಂದ ಮೇಲೆ ಜನರದ್ದೂ ಒಂದಷ್ಟು ನಿರೀಕ್ಷೆ ಇದ್ದೇ ಇರುತ್ತೆ. ಅದನ್ನೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸುತ್ತಾರಾ.? ಇವೆಲ್ಲಾ 12 ಗಂಟೆಯ ಹೊತ್ತಿಗೆ ಗೊತ್ತಾಗಲಿದೆ. ಜನ ಏನು ನಿರೀಕ್ಷೆ (Budget Expectations) ಮಾಡುತ್ತಿದ್ದಾರೆ ಮೊದಲು ನೋಡೋಣ.


COMMERCIAL BREAK
SCROLL TO CONTINUE READING

1. ಕೃಷಿ ಕ್ಷೇತ್ರಕ್ಕೆ (Agriculture) ಹೆಚ್ಚಿನ ಅನುದಾನವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. ಕರೋನಾದಿಂದಾಗಿ ಕೃಷಿ ಕ್ಷೇತ್ರ ನಲುಗಿ ಹೋಗಿದೆ. ಕೃಷಿ ಮಾರುಕಟ್ಟೆಗೆ ಹೊಸ ಯೋಜನೆ, ಕೃಷಿ ಮೂಲ ಸೌಕರ್ಯ (Agri Infrastructure) ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ : Karnataka Budget 2021-22: ಇಂದು ಬಹುನಿರೀಕ್ಷಿತ ರಾಜ್ಯ ಬಜೆಟ್, ಎಲ್ಲರ ಚಿತ್ತ ಸಿಎಂ ಬಿಎಸ್‌ವೈರತ್ತ


2. ಸದಾ ಟ್ರಾಫಿಕ್ ನಿಂದ  (Traffic) ಬಳಲುತ್ತಿರುವ ಮಹಾನಗರಿ ಬೆಂಗಳೂರು (Bengaluru) ಅಭಿವೃದ್ಧಿಗೆ ಪ್ರತ್ಯೇಕ ನೀತಿ  ಅನುಸರಿಸಬೇಕು. ಬಿಬಿಎಂಪಿಗೆ (BBMP) ಅನುದಾನ ಹೆಚ್ಚಿಗೆ ಮಾಡಬೇಕು. ನಗರದ ಟ್ರಾಫಿಕ್ ಕಿರಿಕಿರಿಗೆ ಅಂತ್ಯ ಹಾಡಬೇಕು. ಮೆಟ್ರೋ 2ನೇ ಮತ್ತು 3 ನೇ ಹಂತದ ಕಾಮಗಾರಿಗೆ ಚಾಲನೆ ಸಿಗಬೇಕು. ಏರ್ ಪೋರ್ಟ್ ಮೆಟ್ರೋ (metro) ಆರಂಭಿಸಬೇಕು. ಇವು ಪ್ರಮುಖವಾಗಿ ಬೆಂಗಳೂರು ಜನರ ನಿರೀಕ್ಷೆ..


3. ರಾಜ್ಯ ಸಾರಿಗೆ ನಿಗಮಗಳ ಹಣಕಾಸು ಆರೋಗ್ಯ ಸರಿಯಿಲ್ಲ. ಈ ನಿಗಮಗಳ ಪುನಶ್ಚೇತನಕ್ಕೆ ಪರ್ಯಾಯ ಯೋಜನೆ ರೂಪಿಸಬೇಕು.


4. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ (job creation) ಯಡಿಯೂರಪ್ಪ (Yediyurappa) ಬಜೆಟ್ ಆದ್ಯತೆ ನೀಡಬೇಕು. ಈ ಮೂಲಕ ಯುವಕರ ಗಂಭೀರ ಸಮಸ್ಯೆಗೆ ಅಂತ್ಯ ಹಾಡಬೇಕು. 


ಇದನ್ನೂ ಓದಿ : Jarkiholi Brothers: ತುರ್ತು ಸುದ್ದಿಗೋಷ್ಠಿ ಕರೆದ ಜಾರಕಿಹೊಳಿ ಬ್ರದರ್ಸ್!


5. ಕರೋನಾ (Coronavirus) ಮಹಾಮಾರಿ ರಾಜ್ಯದಲ್ಲಿ ಆರೋಗ್ಯ ವಲಯದ (Health Sector) ತಾಕತ್ತನ್ನು ಬಟಾಬಯಲು ಮಾಡಿದೆ. ಹಾಗಾಗಿ, ಗ್ರಾಮೀಣ ವಲಯದಲ್ಲಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂಬ ಕೂಗು ಎದ್ದಿದೆ. 


6. ಶಿಕ್ಷಣ ಕ್ಷೇತ್ರ (Education Sector) ಆದ್ಯತೆಯ ವಿಷಯವಾಗಬೇಕು ಹಾಗೂ ಶಿಕ್ಷಣ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಮುಂದಾಗಬೇಕು. 


7. ತೆರಿಗೆ ಹೊರೆ ಕಡಿಮೆ ಮಾಡಬೇಕು. ಮುಖ್ಯವಾಗಿ ಪೆಟ್ರೋಲ್ (Petrol), ಡೀಸೆಲ್ ತೆರಿಗೆ ಇಳಿಸಿ ಬೆಲೆ ಏರಿಕೆ ಹೆಚ್ಚಾಗದಂತೆ ಎಚ್ಚರವಹಿಸಬೇಕ  ಅನ್ನೋದು ಜನರ ಪ್ರಧಾನ ಬೇಡಿಕೆಯಾಗಿದೆ.


ಇದನ್ನೂ ಓದಿ : B Sriramulu: 'ಸಿದ್ದು- ಡಿಕೆಶಿ ಜೋಡೆತ್ತುಗಳಲ್ಲ, ಅಧಿಕಾರಕ್ಕೆ ಬಡಿದಾಡುವ ಹೋರಿಗಳು'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.