New Parking Policy : ಇನ್ನು ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಲು ಬೇಕು ಪರ್ಮಿಶನ್.!

ರಾಜಧಾನಿ ಬೆಂಗಳೂರಿನಲ್ಲಿರುವ ಕಾರು ಮಾಲೀಕರಿಗೆ ಶಾಕಿಂಗ್ ಸುದ್ದಿ . ಇನ್ನು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ. 

Written by - Ranjitha R K | Last Updated : Feb 11, 2021, 02:49 PM IST
  • ಬೆಂಗಳೂರಿನ ಕಾರು ಮಾಲೀಕರಿಗೆ ಶಾಕಿಂಗ್ ನ್ಯೂಸ್
  • ಪರಿಷ್ಕೃತ ಪಾರ್ಕಿಂಗ್ ನೀತಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ
  • ಈ ನೀತಿಯನ್ನು ಸದ್ಯವೇ ಬಿಬಿಎಂಪಿ ಅನುಷ್ಠಾನಕ್ಕೆ ತರಲಿದೆ.
New Parking Policy : ಇನ್ನು ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಲು ಬೇಕು ಪರ್ಮಿಶನ್.! title=
ಬೆಂಗಳೂರಿನ ಕಾರು ಮಾಲೀಕರಿಗೆ ಶಾಕಿಂಗ್ ನ್ಯೂಸ್ ( photo Twitter)

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿರುವ ಕಾರು ಮಾಲೀಕರಿಗೆ ಶಾಕಿಂಗ್ ಸುದ್ದಿ(Shocking News). ಇನ್ನು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ. ಬೆಂಗಳೂರಿನಲ್ಲಿ (Bengaluru) ಪರಿಷ್ಕೃತ ಪಾರ್ಕಿಂಗ್ ನೀತಿ (Parking Policy) ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಿಬಿಎಂಪಿಗೆ (BBMP) ಅನುಮೋದನೆ ನೀಡಿದೆ.  ಬೆಂಗಳೂರು ರಸ್ತೆ ಸಾರಿಗೆ ನಿರ್ದೇಶನಾಲಯ ಈ ನೀತಿ ಸಿದ್ದಪಡಿಸಿದೆ. 

ಹೊಸ ಪಾರ್ಕಿಂಗ್ ನೀತಿ ಪ್ರಸ್ತಾಪಗಳು (Proposals) ಹೀಗಿವೆ: 
1. ಬೆಂಗಳೂರಿನಲ್ಲಿ  (Bengaluru) ಇನ್ನು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. 
2. ಮನೆ ಮುಂದೆ ವಾಹನ ಪಾರ್ಕಿಂಗ್ ಗೆ ಅನುಮತಿ ಕಡ್ಡಾಯ
3. ವಾಹನ ಪಾರ್ಕಿಂಗ್ ಗೆ (Parking) ಅನುಮತಿ ಪಡೆಯಲು ನಿರ್ದಿಷ್ಟ ಶುಲ್ಕ ಪಾವತಿಸಬೇಕು
4. ಸಣ್ಣ ವಾಹನಗಳಿಗೆ ವಾರ್ಷಿಕ 1000 ರೂಪಾಯಿ. ಮಧ್ಯಮ ಗಾತ್ರದ ಕಾರಿಗೆ ವಾರ್ಷಿಕ 3 ರಿಂದ 4 ಸಾವಿರ ರೂಪಾಯಿ, ಎಂಯುವಿ (MUV), ಎಸ್ಯುವವಿ  (SUV) ಕಾರುಗಳಿಗೆ 5 ಸಾವಿರ ನಿಗದಿಪಡಿಸಲಾಗಿದೆ.
5. ವಾಹನಕ್ಕೆ ಪರ್ಮಿಟ್ ಪಡೆಯುವಾಗ ಈ ಶುಲ್ಕ ಪಾವತಿ ಮಾಡಬೇಕು
6. ಸ್ಥಳ ಮತ್ತು ಸಮಯಕ್ಕೆ ತಕ್ಕಂತೆ ಪಾರ್ಕಿಂಗ್ ದರ (Parking Rate) ನಿಗದಿಯಾಗಲಿದೆ. 
ಪಾರ್ಕಿಂಗ್ ವಿಚಾರದಲ್ಲಿ ಈ ಎಲ್ಲಾ ಬದಲಾವಣೆ ಮಾಡಲು ಯೋಜನೆ ರೂಪಿತವಾಗಿದ್ದು, ಸದ್ಯದಲ್ಲೇ ಬಿಬಿಎಂಪಿ (BBMP) ಅದನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಮೆಟ್ರೋದಲ್ಲಿ ಕನ್ನಡ ಬೋರ್ಡ್ ಯಾಕಿಲ್ಲ ? ಎಂದ ಸಂಸದ ಜಿ.ಸಿ.ಚಂದ್ರಶೇಖರ್ ಗೆ ಉಪರಾಷ್ಟ್ರಪತಿ ಬೆಂಬಲ..!

ಬೆಂಗಳೂರಿನಲ್ಲಿದೆ 94 ಲಕ್ಷ ವಾಹನ.!
2020ರ ವಾಹನ ನೊಂದಣಿ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿರುವ ವಾಹನಗಳ ಸಂಖ್ಯೆ 94 ಲಕ್ಷ ದಾಟಿದೆ. ವರ್ಷಕ್ಕೆ ಶೇಕಡಾ 10 ರಷ್ಟು ರಿಜಿಸ್ಟ್ರೇಶನ್ ಏರಿಕೆಯಾಗುತ್ತಿದೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ವಿಪರೀತ ಹೆಚ್ಚಾಗಿದೆ. ಫ್ಲೈಓವರ್ (Fly over), ಮೆಟ್ರೊ (Metro) ಬಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೇ ಕಾರಣಕ್ಕೆ ಪಾರ್ಕಿಂಗ್ ನೀತಿಯನ್ನು ಸರ್ಕಾರ ಪರಿಷ್ಕರಿಸಿದೆ.

ಇದನ್ನೂ ಓದಿ : Farmers Protest ಪ್ರತಿಷ್ಠೆ ಆಗಬಾರದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು: ಎಚ್.ಡಿ. ದೇವೇಗೌಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News