ಬೆಂಗಳೂರು : ಅದೇಕೋ ಏನೋ ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಾಲನೇ ಕೂಡಿ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ಸಿಎಂ ದೆಹಲಿಗೆ ಹೋಗಿ ಬಂದದಾಯ್ತು.. ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋಗಿದಾಯ್ತು.. ಸಚಿವಾಂಕ್ಷಿಗಳು ಕಾದು ಕಾದು ಸುಸ್ತಾಗಿದಾಯ್ತು.. ಸಿಎಂ ಒಂದಿಲ್ಲ ಒಂದು ಕಾರಣ ನೆಪವಡ್ಡಿ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕುತ್ತಲೇ ಹೋಗುತ್ತಿದ್ದಾರೆ. ಆದ್ರೆ ಇದೀಗ 2-3 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು ನೀಡಿದ್ದು, ಭಾರಿ ಕುತೂಹಲ ಕೆರಳಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯದಲ್ಲಿ ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ, ಮುಂಬರಲಿರುವ ರಾಜ್ಯ ಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಇಕ್ಕಟಿಗೆ ಸಿಲುಕಿದ್ದು, ಒಂದು ಕಡೆ ಸಚಿವ ಸಂಪುಟ ವಿಸ್ತರಣೆ.. ಮತ್ತೊಂದೆಡೆ ರಾಜ್ಯದಲ್ಲಿ ಮುಂಬರುವ ಸಾಲು ಸಾಲು ಚುನಾವಣೆಗಳು ಸಿಎಂಗೆ ಭಾರೀ ತಲೆನೋವಾಗಿ ಪರಿಣಿಸಿದೆ.


ಇದನ್ನೂ ಓದಿ : School Reopen: ನಾಳೆಯಿಂದ ಶಾಲೆಗಳು ಓಪನ್: ತಳಿರು ತೋರಣಗಳಿಂದ ಮಕ್ಕಳ ಸ್ವಾಗತಕ್ಕೆ ಸಿದ್ಧತೆ


ಇನ್ನು ಇದೆಲ್ಲದರ ಮಧ್ಯೆ ಇಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪ್ರಯಾಣ ಭಾರೀ ಕುತೂಹಲ ಕೆರಳಿಸಿದೆ. ವಿಮಾನದಲ್ಲಿಯೇ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದು, ಯಾರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು, ಯಾರಿಗೆ ಪಟ್ಟ ಕಟ್ಟಬೇಕು ಎಂಬುದರ ಬಗ್ಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇನ್ನು ಎರಡು ಮೂರು ದಿನದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಅಂತಾನು ಹೇಳಲಾಗಿದೆ. 


ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಹಾಗೂ ರಾಜ್ಯ ಸಭೆ ಚುನಾವಣೆಯಲ್ಲಿ ಬ್ಯೂಸಿ ಇದ್ದೇವೆ‌. ನಿನ್ನೆಯಷ್ಟೇ ಕೊರ್ ಕಮಿಟಿ ಸಭೆ ಮುಗಿದಿದೆ. ಸಭೆಯ ನಿರ್ಧಾರವನ್ನ ಹೈಕಮಾಂಡ್‌ಗೆ ತಿಳಿಸಲಾಗಿದೆ. ಅಲ್ಲದೇ 2 ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸುತ್ತೇವೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಅಂತ ಹೇಳಿದ್ರು. 


ಇದನ್ನೂ ಓದಿ : ಬಿಎಂಟಿಸಿ ಬಸ್‌ ಬೆಂಕಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್: ಸಿಬ್ಬಂದಿ ಬುಡಕ್ಕೆ ಬೆಂಕಿ ಹಚ್ಚಿದ ನಿಗಮದ ನೋಟೀಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.