ಆಡಳಿತದಲ್ಲಿ ಆಧುನಿಕತೆ ತರುವ, ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್: ಸಿಎಂ ಬೊಮ್ಮಾಯಿ
Budget 2022: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ. ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್ ಇದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ (Union Budget 2022) ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ. ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್ ಇದಾಗಿದೆ. ಮೂಲಭೂತ ಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿದೆ. ಜಿಡಿಪಿ 9.2% ಹೆಚ್ಚಿಸಬೇಕು ಎಂಬ ಗುರಿ ಹೊಂದಿರುವ ಬಜೆಟ್ ಇದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
ಬಜೆಟ್ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೇಂದ್ರ ಬಜೆಟ್ ಕೋವಿಡ್ (Corona) ಸಾಂಕ್ರಾಮಿಕ ಬಂದ ನಂತರದ ಮೂರನೇ ಬಜೆಟ್ ಆಗಿತ್ತು. ಕಳೆದ ಮೂರು ವರ್ಷಗಳಿಂದ ಆರ್ಥಿಕ ಹಿಂಜರಿತ ಇತ್ತು. ಈ ಬಾರಿ ಆರ್ಥಿಕತೆ ಉತ್ತೇಜನಕ್ಕೆ ಪೂರಕವಾಗುವಂತಹ ಬಜೆಟ್ ಮಂಡಿಸಲಾಗಿದೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಆರ್ಥಿಕತೆ ವೃದ್ಧಿಯಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: HD Kumaraswamy : ಕೇಂದ್ರ ಬಜೆಟ್ ಅನ್ನು ತುಂಬಾ ಕಟುವಾಗಿ ಟೀಕಿಸಿದ ಮಾಜಿ ಸಿಎಂ ಕುಮಾರಸ್ವಾಮಿ!
ರೈಲ್ವೆ, ಡಿಜಿಟಲ್ ಆರ್ಥಿಕತೆ ಮತ್ತು ರಾಜ್ಯಗಳಿಗೆ ವಿವಿಧ ಸಂಪರ್ಕ ಸಾಧನಗಳ ವಲಯದಲ್ಲಿ ಹೂಡಿಕೆ ಆಗಲಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರ್ಥಿಕ ಸುಧಾರಣೆ (Economic Growth) ಹಾಗೂ ಬೆಳವಣಿಗೆ ಈ ಬಜೆಟ್ ನಲ್ಲಿ ಆಗಲಿದೆ. ಜನಸಾಮಾನ್ಯರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಂಶಗಳು ಇವೆ ಎಂದು ಹೇಳಿದ್ದಾರೆ.
ಜನಜೀವನ್ ಯೋಜನೆಗೆ ಅತಿ ಹೆಚ್ಚು ಅನುದಾನ, ಆರೋಗ್ಯ ಕ್ಷೇತ್ರಕ್ಕೆ ಅನುದಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೆಚ್ಚಿನ ಕೊಡುಗೆ ನೀಡಲಾಗಿದೆ. ಇವೆಲ್ಲವೂ ಗ್ರಾಮೀಣ ಭಾರತದ ಸಬಲೀಕರಣಕ್ಕೆ ಸಹಕಾರಿ ಆಗಲಿದೆ. ನಗರ ಪ್ರದೇಶಗಳ ಅಭಿವೃದ್ಧಿಗೆ ತಜ್ಞರ ಸಹಕಾರದಿಂದ ಹೊಸ ಯೋಜನೆಗಳು ಬರಲಿವೆ. ಇದಕ್ಕೆ ದೊಡ್ಡ ಪ್ರಮಾಣದ ಅನುದಾನ ಮೀಸಲಿಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ದೇಶವನ್ನು ಕೃಷಿಯಲ್ಲಿ ಸ್ವಾವಲಂಬನೆ ಮಾಡುವ ಸಲುವಾಗಿ ಯೋಜನೆಗಳನ್ನು ನೀಡಲಾಗಿದೆ. ರಕ್ಷಣಾ ವಲಯದಲ್ಲಿ ಶೇ.68 ರಷ್ಟು ಶಸ್ತ್ರಾಸ್ತ್ರ ಉತ್ಪಾದನೆಗೆ ಒತ್ತು ನೀಡಲಾಗಿದೆ. ಇದು ಆತ್ಮನಿರ್ಭರ ಭಾರತದ (Atmanirbhar Bharat) ಯಶಸ್ವಿಗೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮಟ್ಟಿಗೆ ಬಂಡವಾಳ ಹೂಡಿಕೆ ವಲಯಕ್ಕೆ ಉತ್ತೇಜನ ಬಜೆಟ್ ನಲ್ಲಿ (Union Budget 2022) ಇದೆ. ಈ ಬಾರಿ 29 ಸಾವಿರ ಕೋಟಿ ಬಂಡವಾಳ ನಿರೀಕ್ಷೆ ಇದೆ. ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ಪ್ರವಾಸೋದ್ಯಮ, ಸೇವಾವಲಯಗಳಿಗೂ ಉತ್ತೇಜನ ನೀಡಲಾಗಿದೆ ಎಂದಿದ್ದಾರೆ.
ಸಣ್ಣ ಕೈಗಾರಿಕೆಗಳಿಗೆ 5 ಲಕ್ಷ ಕೋಟಿ ಇಟ್ಟಿದ್ದಾರೆ. ಇದರಿಂದಲೂ ನಮ್ಮ ರಾಜ್ಯಕ್ಕೆ ಅನುಕೂಲ ಆಗಲಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಲ್ಲೂ ರಾಜ್ಯಕ್ಕೆ ಅನುಕೂಲ ಆಗಲಿದೆ. ಬಡ, ಮಧ್ಯಮ ವರ್ಗಕ್ಕೆ ಏನು ಸಿಕ್ಕಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆರ್ಥಿಕ ಪ್ರಗತಿಯಾದರೆ ಎಲ್ಲಾ ಹಂತದ ಜನರಿಗೂ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: Union Budget 2022: ಶೀಘ್ರದಲ್ಲಿಯೇ 5G ಸೇವೆ ಆರಂಭ, ಗ್ರಾಮಗಳಿಗೂ ತಲುಪಲಿದೆ Optical Fiber
9.02% ಆರ್ಥಿಕ ಪ್ರಗತಿ ಬಂದಿರುವುದೇ ಒಳ್ಳೆಯ ಬೆಳವಣಿಗೆ. ಬಜೆಟ್ ನಲ್ಲಿ ಕರ್ನಾಟಕ ಕ್ಕೆ 3000 ಸಾವಿರ ಕೋಟಿಯಷ್ಟು ಹಣ ಸಿಗಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.