ಬೆಂಗಳೂರು :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಖ್ಯಾತ ಚಿತ್ರ ನಟ ಯಶ್ ಅವರ ಜೊತೆ ಹೆಲಿ ಕ್ಯಾಪ್ಟರ್ ನಲ್ಲಿ ಮೈಸೂರಿಗೆ ತೆರಳಿದರು. ಕೊವೀಡ್‌ನಿಂದ ಗುಣಮುಖರಾದ ಬಳಿಕ ಸಿಎಂ ಬೊಮ್ಮಾಯಿ ಅವರು, 1 ವಾರದ ನಂತರ ಮನೆಯಿಂದ ಹೊರಗೆ ಬಂದಿದ್ದಾರೆ. ಇಂದು ಮಂಡ್ಯ, ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಂಡ್ಯ, ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಇಂದು ಸಿಎಂ ಭಾಗಿಯಾಗಲಿದ್ದಾರೆ. ಇಂದು ಬೆಳಿಗ್ಗೆ 9.30ಕ್ಕೆ ಮೈಸೂರಿಗೆ ತೆರಳಿದ ಸಿಎಂ ಬೊಮ್ಮಾಯಿ, ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಪ್ರವಾಸ ಮುಗಿಸಿ ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕೋವಿಡ್‌ನಿಂದ ಗುಣಮುಖರಾದ ಸಿಎಂ ಅವರನ್ನು ಸಚಿವ ಅಶ್ವತ್ಥ ನಾರಾಯಣ ಭೇಟಿ ಮಾಡಿದರು. ಆರ್ ಟಿ ನಗರದ ನಿವಾಸದಲ್ಲಿ ಅಶ್ವತ್ಥ ನಾರಾಯಣ ಅವರು ಸಿಎಂ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಬಳಿಕ ಸಿಎಂ ಜೊತೆಯಲ್ಲೇ ಮಂಡ್ಯಕ್ಕೆ ತೆರಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ADGP Alok Kumar : ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ : ಆರೋಪಿಗಳ ಆಸ್ತಿ ಮುಟ್ಟುಗೋಲು


ಸಿಎಂ ಬದಲಾವಣೆ ವದಂತಿ ವಿಚಾರ : 


ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ವದಂತಿ ವಿಚಾರವಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನ ಟ್ವೀಟ್ ಹೊಸದೇನಲ್ಲ. ಕಾಂಗ್ರೆಸ್ ನವರ ಮನಸ್ಸಲ್ಲಿ ಅತಂತ್ರ ಇದೆ. ಆದರೆ ಜನರು ಇದನ್ನು ಒಪ್ಪುವುದಿಲ್ಲ. ನನಗೆ ಸತ್ಯ ಏನೆಂಬುದು ಗೊತ್ತಿದೆ, ಈ ಚರ್ಚೆಯಲ್ಲಿ ಯಾವುದೇ ರೀತಿಯ ಆಧಾರ ಇಲ್ಲ. ಇದರಿಂದ ನನ್ನ ನಿರ್ಣಯಗಳು ಗಟ್ಟಿ ಆಗುತ್ತವೆ. ಬರುವಂತಹ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಎರಡು ತಾಸು ಹೆಚ್ಚು ಕೆಲಸ ಮಾಡ್ತೀನಿ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.


ಮಳೆ ಹಾನಿ ಸಮೀಕ್ಷೆ ಕುರಿತ ವರದಿ ವಿಚಾರ :


ಮಳೆ ಹಾನಿ ಸಮೀಕ್ಷೆ ಕುರಿತ ವರದಿ ವಿಚಾರವಾಗಿ, ಮಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ಇನ್ನೂ ಎರಡು ದಿನಗಳಲ್ಲಿ ವರದಿಯನ್ನು ಕೇಂದ್ರಕ್ಕೆ ನಾನೇ ಸಲ್ಲಿಸುತ್ರೇನೆ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಸಿಎಂ ತಿಳಿಸಿದರು. 


ಇದನ್ನೂ ಓದಿ : BS Yediyurappa : ಸಿಎಂ ಬೊಮ್ಮಾಯಿಗೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಿಎಂ ಬಿಎಸ್ ವೈ


ಈದ್ಗಾ ಮೈದಾನದ ವಿವಾದ ವಿಚಾರ : 


ಇದೇ ವೇಳೆ ಈದ್ಗಾ ಮೈದಾನದ ವಿವಾದ ವಿಚಾರವಾಗಿ ಮಾತನಾಡಿದ ಸಿಎಂ, ಈದ್ಗಾ ಮೈದಾನ ಕಂದಾಯ ಮೈದಾನ ವಾಗಿದೆ. ಕಂದಾಯ ಇಲಾಖೆ ಆದ್ಮೇಲೆ ಅದು ಸರ್ಕಾರದ ಆಸ್ತಿ ಆಗುತ್ತೆ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಸಭೆ ಉತ್ಸವಗಳು ನಡೆಯಲಿವೆ. ಕಾನೂನು ಪ್ರಕಾರ ನಡೆಸೋದಕ್ಕೆ ಕ್ರಮ ವಹಿಸುತ್ತೇವೆ ಎಂದರು. ಇದೇ ವೇಳೆ ಗಣೇಶ ಕೂರಿಸೋಕೆ ಬಿಡಲ್ಲ ಎಂಬ ಜಮ್ಮೀರ್ ಅಹಮದ್ ಹೇಳಿಕೆ ವಿಚಾರವಾಗಿ, ಯಾರು ಏನೇ ಹೇಳಿದ್ರು ಅನ್ನೋದು ಮುಖ್ಯ ಅಲ್ಲ ನನಗೆ. ನನಗೆ ಕಾನೂನು ಮುಖ್ಯ, ಕಾನೂನಿನ ಪ್ರಕಾರವೇ ಉತ್ಸವ ನಡೆಯಲಿದೆ ಎಂದು ಖಡಕ್‌ ಉತ್ತರ ನೀಡಿದರು. 


ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರ : 


ಕೆಲವರ ಮಾತಿಗೆಲ್ಲ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್ ಗೌಡ ಮಾತು ನಮಗೇನು ಲೆಕ್ಕಕ್ಕೆ ಇಲ್ಲ ಎಂದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.