ಬೆಂಗಳೂರು: ರಾಜ್ಯಸಭೆ ಚುನಾವಣೆ ಯಾವಾಗ ಯಾವಾಗ ನಡೆದಿದೆಯೋ ಆಗೆಲ್ಲಾ ಪಕ್ಷಗಳಲ್ಲಿ ಏರುಪೇರು ಆಗಿದೆ. ಇವತ್ತು ಹೀಗೆ ಆಗಲಿದೆ ಎಂದು ಹೇಳುವುದು ಕಷ್ಟ. ಹಲವಾರು ಸಂದರ್ಭಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವ ಮಧ್ಯದಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ. ಹಾಗಾಗಿ ಕಡೆಯವರೆಗೂ ನಾವು ಕಾಯಬೇಕು. ಆದರೂ ನಮಗೆ ಹೆಚ್ಚಿನ ಮತಗಳಿರುವ ಕಾರಣ ನಮ್ಮ 3ನೇ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ಶಾಸಕಾಂಗ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಇಬ್ಬರು, ಕಾಂಗ್ರೆಸ್‍ನ ಒಬ್ಬರ ಗೆಲುವು ಅನಾಯಾಸವಾಗಿ ಆಗಲಿದೆ ಆದರೆ, 4ನೇ ಸ್ಥಾನಕ್ಕೆ ಯಾರೋಬ್ಬರೂ ಅಗತ್ಯ ಸಂಖ್ಯೆ ಹೊಂದಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ. ಎಲಿಮಿನೇಟ್ ಆದವರ ಮತಗಳು ವರ್ಗಾವಣೆಯಾಗಲಿದೆ‌. ಇವತ್ತಿನ ರಾಜಕೀಯ ಸ್ಥಿತಿಗತಿಗಳನ್ನು ನೋಡಿದಾಗ ನಮಗೆ 32 ಮತಗಳು ಹೆಚ್ಚಿದ್ದು, 2ನೇ ಪ್ರಾಶಸ್ತ್ಯದ ಮತಗಳೂ ಹೆಚ್ಚಿವೆ. ಹೀಗಾಗಿ ನಮ್ಮ 3ನೇ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: Video : ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್​ ಸಿಬ್ಬಂದಿ


ರಾಜ್ಯಸಭೆ ಎಲೆಕ್ಷನ್ ಯಾವಾಗ ಯಾವಾಗ ನಡೆಯಲಿದೆಯೋ ಆಗೆಲ್ಲಾ ಪಕ್ಷಗಳಲ್ಲಿ ಏರುಪೇರು ಆಗಿದೆ. ಕಳೆದ ಬಾರಿಯೂ ನಾವು ಇದನ್ನು ನೋಡಿದ್ದೇವೆ. ಹೀಗಾಗಿ ಚುನಾವಣೆ ಇವತ್ತು ಹೀಗೆ ಆಗಲಿದೆ ಎಂದು ಹೇಳುವುದು ಕಷ್ಟ. ಹಲವಾರು ಸಂದರ್ಭಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವ ಮಧ್ಯದಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ. ಹೀಗಾಗಿ ನಾವು ಕೊನೆಯವರೆಗೂ ಕಾಯಬೇಕು ಎಂದರು.


ಯಾವುದೇ ರೀತಿಯ ಹೊಂದಾಣಿಕೆ ಮೇಲೆ ನಾವು ನಿಂತಿಲ್ಲ. ಯಾರ ಯಾರ ನಡುವೆ ಹೊಂದಾಣಿಕೆ ಆಗಲಿದೆ. ಏನಾಗಲಿದೆ ಎಂದು ಕಾದುನೋಡಿ. ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು. ಚುನಾವಣೆ ಸಂಜೆವರೆಗೂ ಕಾದುನೋಡಿ ಎಂದು ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ: ಸಿದ್ದರಾಮಯ್ಯ ಎರಡು ತಲೆ ಹಾವು: ಸಚಿವ ಶ್ರೀರಾಮುಲು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.