Karnataka Congress : ಮಕ್ಕಳಿಗೆ `ಟ್ಯಾಬ್ಲೆಟ್` ಗೆಲ್ಲುವ ಸುವರ್ಣ ಅವಕಾಶ ನೀಡಿದ ಕಾಂಗ್ರೆಸ್..!
ಕೊರೋನಾ ಲಸಿಕೆಯ ಬಗ್ಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸುವಂತ ಕೆಲಸಕ್ಕೆ, ಈಗ ಕಾಂಗ್ರೆಸ್ ಮುಂದಾಗಿದೆ. ಮಕ್ಕಳ ಮೂಲಕ, ಕೋವಿಡ್ ಲಸಿಕೆಯ ಜಾಗೃತಿಗೆ ಮುಂದಾಗಿರುವಂತ ರಾಜ್ಯ ಕಾಂಗ್ರೆಸ್, ಕೊರೋನಾ ಲಸಿಕಾ ಜಾಗೃತಿಯನ್ನು ಮೂಡಿಸುವಂತ ವೀಡಿಯೋ ಕಳುಹಿಸಿದವರಿಗೆ, ಗಿಫ್ಟ್ ಆಗಿ ಟ್ಯಾಬ್ ನೀಡೋದಾಗಿ ಘೋಷಿಸಿದೆ.
ಬೆಂಗಳೂರು : ಕೊರೋನಾ ಲಸಿಕೆಯ ಬಗ್ಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸುವಂತ ಕೆಲಸಕ್ಕೆ, ಈಗ ಕಾಂಗ್ರೆಸ್ ಮುಂದಾಗಿದೆ. ಮಕ್ಕಳ ಮೂಲಕ, ಕೋವಿಡ್ ಲಸಿಕೆಯ ಜಾಗೃತಿಗೆ ಮುಂದಾಗಿರುವಂತ ರಾಜ್ಯ ಕಾಂಗ್ರೆಸ್, ಕೊರೋನಾ ಲಸಿಕಾ ಜಾಗೃತಿಯನ್ನು ಮೂಡಿಸುವಂತ ವೀಡಿಯೋ ಕಳುಹಿಸಿದವರಿಗೆ, ಗಿಫ್ಟ್ ಆಗಿ ಟ್ಯಾಬ್ ನೀಡೋದಾಗಿ ಘೋಷಿಸಿದೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರು, ಕೋವಿಡ್ ಲಸಿಕೆ ಪಡೆಯುವಂತೆ ಮಕ್ಕಳು ಸಾಮಾಜಿಕ ಜಾಲತಾಣಗಳ ಮೂಲಕ ವಯಸ್ಕರನ್ನು ಪ್ರೇರೇಪಿಸುವ ವ್ಯಾಕ್ಸಿನೇಟ್ ಕರ್ನಾಟಕ ವೀಡಿಯೋ ಸ್ಪರ್ಧೆಗೆ ಚಾಲನೆ ನೀಡಿದರು.
ಇದನ್ನೂ ಓದಿ : BS Yediyurappa : ಅರುಣ್ ಸಿಂಗ್ ಬಂದುಹೋದ ಮೇಲೆ 'ಜಾಲಿ ಮೂಡ್' ನಲ್ಲಿ ಸಿಎಂ ಬಿಎಸ್‌ವೈ
ವಿನೂತನವಾದ ಈ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳು ಪಾಲ್ಗೊಳ್ಳಬಹುದು. ಉತ್ತಮ 100 ವೀಡಿಯೋಗಳಿಗೆ ತಲಾ ಒಂದು ಆಂಡ್ರಾಯ್ಡ್ ಟ್ಯಾಬ್ಲೆಟ್(Android Tablet) ಬಹುಮಾನವಾಗಿ ಸಿಗಲಿದೆ.
DK Shivakumar : 'ಬಿಜೆಪಿಯದ್ದು ಯುದ್ಧಕಾಂಡ ಜನ ಸಾಮಾನ್ಯರದ್ದು ಕರ್ಮಕಾಂಡ'
ಸ್ಪರ್ಧೆ ಏನೆಂದ್ರೇ, ಕೋವಿಡ್ ಲಸಿಕೆ(Covid Vaccine) ಪಡೆಯುವಂತೆ ಎಲ್ಲಾ ವಯಸ್ಕರನ್ನು ಪ್ರೇರೇಪಿಸುವ 2 ನಿಮಿಷಗಳ ವೀಡಿಯೋಗಳನ್ನು ಮಾಡಬೇಕು. ಆ ವೀಡಿಯೋಗಳನ್ನು ವ್ಯಾಕ್ಸಿನ್ ಕರ್ನಾಟಕ ಹ್ಯಾಸ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು. ಅಲ್ಲದೇ www.vaccinatekarnataka.in ಜಾಲತಾಣದಲ್ಲೂ ಅಪ್ ಲೋಡ್ ಮಾಡಬೇಕು. ಹೀಗೆ ಅಪ್ ಲೋಡ್ ಮಾಡಿದಂತ ಅತ್ಯುತ್ತಮ 100 ವೀಡಿಯೋಗಳ ಮಕ್ಕಳಿಗೆ ಕೆಪಿಸಿಸಿಯಿಂದ ಟ್ಯಾಬ್ ಅನ್ನು ಬಹುಮಾನವಾಗಿ ನೀಡಲಿದೆ.
ಇದನ್ನೂ ಓದಿ : Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!
ಅಂದಹಾಗೇ ರಾಜ್ಯದ ಮಕ್ಕಳು(Children's) ವಿನೋದಭರಿತ ಹಾಡು, ನೃತ್ಯ, ಕವನ, ನಾಟಕ ಹೀಗೆ ಅವರು ಬಯಸಿದಂತ ವಿಧಾನದಲ್ಲಿ ವೀಡಿಯೋಗಳನ್ನು ಮಾಡಿ, ವ್ಯಾಕ್ಸಿನೇಟ್ ಸಂದೇಶಗಳನ್ನು ನೀಡುವಂತೆ ಆ ವೀಡಿಯೋ ಇರಬೇಕು. #VaccinateKarnataka ಹ್ಯಾಸ್ ಟ್ಯಾಗ್ ನೊಂದಿಗೆ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕು. ಹೆಚ್ಚು ವೀಕ್ಷಕರು, ಅತ್ಯುತ್ತಮ ಸಂದೇಶ ಹೊಂದಿರುವಂತ ವೀಡಿಯೋಗಳಿಗೆ ಟ್ಯಾಬ್ಲೆಟ್ ಬಹುಮಾನವಾಗಿ ಸಿಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.