ಇಂದಿನಿಂದ ‘ಅನ್ನಭಾಗ್ಯ’ ಅಕ್ಕಿ ಬದಲು ಸಿಗುತ್ತೆ ಹಣ! ಯಾರಿಗೆ ಎಷ್ಟು ನಗದು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
Karnataka Congress government: ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಉಚಿತ 10 ಕೆಜಿ ಅಕ್ಕಿ ವಿತರಿಸುವುದಾಗಿ ಆಶ್ವಾಸನೆ ನೀಡಿತ್ತು.
Karnataka Congress government: ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಇಂದಿನಿಂದ ಅನ್ನಭಾಗ್ಯ ಅಕ್ಕಿ ಖಾತರಿ ಯೋಜನೆಗೆ ಬದಲಾಗಿ ನೇರ ನಗದು ವರ್ಗಾವಣೆಯನ್ನು ಪ್ರಾರಂಭಿಸಲಿದೆ. ಈ ಹಿಂದೆ ಕೇಂದ್ರ ಸರ್ಕಾರವು ಜೂನ್ ನಲ್ಲಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿ ಸಾಗಾಟವನ್ನು ಸ್ಥಗಿತಗೊಳಿಸಿದ ಬಳಿಕ ಈ ನಿರ್ಧಾರವನ್ನು ಮಾಡಲಾಗಿದೆ.
ಇದನ್ನೂ ಓದಿ: Shravana 2023 : ಶ್ರಾವಣ ಮಾಸ ಪ್ರಾರಂಭ, ಪೂಜಾ ಸಮಯ, ವಿಧಿ ವಿಧಾನಗಳು ಇಲ್ಲಿವೆ..!
ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಉಚಿತ 10 ಕೆಜಿ ಅಕ್ಕಿ ವಿತರಿಸುವುದಾಗಿ ಆಶ್ವಾಸನೆ ನೀಡಿತ್ತು. ಅಂತೆಯೇ ಗೆಲುವು ಕಂಡಿದ್ದ ಕಾಂಗ್ರೆಸ್ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿತು. ಆದರೆ 5 ಕೆಜಿ ಕೇಂದ್ರದಿಂದ ಬರುತ್ತಿದ್ದ ಮತ್ತು 5 ಕೆಜಿ ರಾಜ್ಯ ನೀಡುವ ಅಕ್ಕಿ ಸೇರಿ 10 ಕೆಜಿ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಈ ಸಂದರ್ಭದಲ್ಲಿ ಕೇಂದ್ರವು ರಾಜ್ಯಕ್ಕೆ ಬರುತ್ತಿದ್ದ 5 ಕೆಜಿ ಅಕ್ಕಿ ಸಾಗಾಟವನ್ನು ಸ್ಥಗಿತಗೊಳಿಸಿತು. ಈ ಹಿನ್ನೆಲೆಯಲ್ಲಿ ಸದ್ಯ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಗೆ ಸಮಾನವಾದ ಹಣವನ್ನು ನೀಡಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ.
ಇದನ್ನೂ ಓದಿ: ಗಜೇಂದ್ರಗಡದಲ್ಲಿ ಬೀದಿ ನಾಯಿಗಳ ದಾಳಿ: ಬಾಲಕನಿಗೆ ಗಂಭೀರ ಗಾಯ
ಕರ್ನಾಟಕವು 1.28 ಕೋಟಿ ಪಡಿತರ ಚೀಟಿದಾರರನ್ನು ಹೊಂದಿದ್ದು, ಅವರು ನಗದು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಸರ್ಕಾರವು ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳನ್ನು ವರ್ಗಾಯಿಸುತ್ತದೆ. ಅಕ್ಕಿಯ ಜಾಗದಲ್ಲಿ ಒಬ್ಬರಿಗೆ ತಿಂಗಳಿಗೆ 170 ರೂ ಸಿಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l