Shravana 2023 : ಶ್ರಾವಣ ಮಾಸ ಪ್ರಾರಂಭ, ಪೂಜಾ ಸಮಯ, ವಿಧಿ ವಿಧಾನಗಳು ಇಲ್ಲಿವೆ..!

Shravana 2023 pooja timing : ಶ್ರಾವಣ ಮಾಸ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಮಾಸವು ಶಿವನನ್ನು ಮೆಚ್ಚಿಸಲು ಮತ್ತು ಶಿವನ ಕೃಪೆಗೆ ಪಾತ್ರವಾಗಲು ಅತ್ಯಂತ ಮಂಗಳಕರ ಸಮಯ. ಈ ಶ್ರಾವಣ ಮಾಸದ ಸಂಪೂರ್ಣ ಲಾಭ ಪಡೆಯಲು ಏನು ಮಾಡಬೇಕು, ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಯೋಣ..  

Written by - Krishna N K | Last Updated : Jul 9, 2023, 07:56 PM IST
  • ಶ್ರಾವಣ ಮಾಸ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು.
  • ಈ ಮಾಸವು ಶಿವನನ್ನು ಮೆಚ್ಚಿಸಲು ಮತ್ತು ಶಿವನ ಕೃಪೆಗೆ ಪಾತ್ರವಾಗಲು ಅತ್ಯಂತ ಮಂಗಳಕರ ಸಮಯ.
  • ಈ ಶ್ರಾವಣ ಮಾಸದ ಸಂಪೂರ್ಣ ಲಾಭ ಪಡೆಯಲು ಏನು ಮಾಡಬೇಕೆಂದು ಇಲ್ಲಿ ತಿಳಿಯಿರಿ.
 Shravana 2023 : ಶ್ರಾವಣ ಮಾಸ ಪ್ರಾರಂಭ, ಪೂಜಾ ಸಮಯ, ವಿಧಿ ವಿಧಾನಗಳು ಇಲ್ಲಿವೆ..! title=

Shravana 2023 : ಶ್ರಾವಣ ಮಾಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಶ್ರಾವಣ ಮಾಸದ ಆರಂಭಕ್ಕೆ ಶ್ರಾವಣ ಸೋಮವಾರ ಅಮಾವಾಸ್ಯೆ ಎನ್ನುವ ಮೂಲಕ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ವೇಳೆ ಒಂದಷ್ಟು ಪೂಜೆಗಳನ್ನು ಮಾಡಿದರೆ ಕೋಟ್ಯಾಧಿಪತಿಗಳಾಗಬಹುದು ಎನ್ನುತ್ತಾರೆ ಜ್ಯೋತಿಷಿಗಳು. 

ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸ ಎಂದರೆ ಅತ್ಯಂತ ಶ್ರದ್ಧೆಯಿಂದ ಕಳೆಯುವ ಮಾಸ ಎಂದರ್ಥ, ಈ ಮಾಸದಲ್ಲಿ ನಿಷ್ಠೆಯಿಂದ ಶಿವನನ್ನು ಪೂಜಿಸಿದರೆ ಹರನ ಕೃಪ ಕಟಾಕ್ಷ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಭೋಳನಾಥ ದಯಪಾಲಿಸಿದರೆ ನಿಮ್ಮ ಇಷ್ಟಾರ್ಥಗಳು ಚಿಟಿಕೆಯಲ್ಲಿ ಈಡೇರುತ್ತವೆ. 

ಇದನ್ನೂ ಓದಿ: ಈ ಸೊಪ್ಪು-ಎಣ್ಣೆಯ ಹೇರ್ ಮಾಸ್ಕ್ ಹಚ್ಚಿದರೆ ನೈಸರ್ಗಿಕವಾಗಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ!

ಈ ವರ್ಷ ಶ್ರಾವಣ ಮಾಸ ಜುಲೈ 17 ರಂದು ಆರಂಭವಾಗಲಿದೆ. ಅದೇ ದಿನ ಶ್ರಾವಣ ಸೋಮವಾರ ಅಮಾವಾಸ್ಯೆ ಆಗಿರುವುದರಿಂದ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಆ ದಿನ ಮೂರು ಶುಭ ಯೋಗಗಳು ಉಂಟಾಗುತ್ತವೆ. ಶ್ರಾವಣ ಸೋಮವಾರವಾಗಿರುವುದರಿಂದ ಕೆಲವು ವಿಶೇಷ ಪೂಜೆಗಳನ್ನು ಮಾಡುವುದರಿಂದ ಅನಿರೀಕ್ಷಿತ ಲಾಭಗಳು ದೊರೆಯುತ್ತವೆ.

ಶ್ರಾವಣ ಸೋಮವಾರ ಅಮಾವಾಸ್ಯೆಯು ಜುಲೈ 16 ರಂದು ರಾತ್ರಿ 10.08 ಕ್ಕೆ ಪ್ರಾರಂಭವಾಗಲಿದೆ. ಜುಲೈ 17 ರಂದು ಉದಯ ತಿಥಿಯಾಗಿರುವುದರಿಂದ ಇದನ್ನು ಆಚರಿಸಲಾಗುತ್ತದೆ. ಜುಲೈ 18 ರಂದು ಮಧ್ಯಾಹ್ನ 12.01 ಗಂಟೆಗೆ ಮುಕ್ತಾಯವಾಗುತ್ತದೆ. 

ಶ್ರಾವಣ ಸೋಮವಾರ ಅಮಾವಾಸ್ಯೆಯಂದು ರುದ್ರಾಭಿಷೇಕವನ್ನು ಮಾಡುವುದರಿಂದ ಒಳ್ಳೆಯ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನದ ಉಪವಾಸವು ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಈ ದಿನ ಶಿವಲಿಂಗಕ್ಕೆ ಹಸುವಿನ ಹಾಲಿನಿಂದ ಅಭಿಷೇಕ ಮಾಡುವುದರಿಂದ ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ, ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. 

ಇದನ್ನೂ ಓದಿ: ಸಂಡೇ ಸ್ಪೆಷಲ್‌ ಊಟಕ್ಕೆ ರುಚಿಕರವಾದ ಸ್ಟಫ್ಡ್ ತಂದೂರಿ ಆಲೂ, ಮನೆಯವರ ಮನಗೆಲ್ಲುವ ರೆಸಿಪಿ!

ಮತ್ತೊಂದೆಡೆ, ಜುಲೈ 17 ರ ಶ್ರಾವಣ ಸೋಮವಾರ ಅಮವಾಸ್ಯೆಯ ದಿನ, ರಾವಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಬಡತನ ದೂರವಾಗಿ ಕಷ್ಟಗಳು ಕೊನೆಗೊಳ್ಳುತ್ತವೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಗುಣಮುಖರಾಗುತ್ತೀರಿ. ವಿವಾಹ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇದಕ್ಕಾಗಿ ಸೋಮವಾರ ಅಮಾವಾಸ್ಯೆಯ ದಿನ ಬೆಳಗ್ಗೆ ಹಸುವಿಗೆ 5 ತಾಜಾ ಹಣ್ಣುಗಳನ್ನು ತಿನ್ನಿಸಿದರೆ 33 ಕೋಟಿ ದೇವತೆಗಳು ಅನುಗ್ರಹಿಸುತ್ತಾರೆ. ತುಳಸಿ ಗಿಡದ ಸುತ್ತ 108 ಪ್ರದಕ್ಷಿಣೆ ಹಾಕಿ.

ಕೈಯಲ್ಲಿ ಹಣವಿಲ್ಲದಿದ್ದರೂ ಅಥವಾ ಸಾಕಷ್ಟು ಆದಾಯವಿಲ್ಲದಿದ್ದರೂ, ಶ್ರಾವಣ ಮಾಸದಲ್ಲಿ 5 ಸೋಮವಾರಗಳು ಶಿವಲಿಂಗಕ್ಕೆ ಬಿಲ್ವಪತ್ರಿಯನ್ನು ಅರ್ಪಿಸಬೇಕು. ಹೀಗೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಲಕ್ಷ್ಮಿಯಾವಾಗಲೂ ಇರುತ್ತಾಳೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News