ಬೆಂಗಳೂರು: ಬಿಜೆಪಿ ಜಸಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಈ ನಡುವೆ ವಿಜಯ್‌ ಪ್ರಕಾಶ್‌ ಹಾಡಿಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದು, ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಈ ಸಂತೋಷ, ಸಡಗರ, ಸಂಭ್ರಮ ಎಂದು ಕಾಂಗ್ರೆಸ್‌ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ..? ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ?. ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ? ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ? 40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ? ಎಂದು ಟ್ಟೀಟ್‌ ಮೂಲಕ ಪ್ರಶ್ನಿಸಿದೆ.


ಇದನ್ನೂ ಓದಿ: ಬಿಜೆಪಿ ನಡೆಸುತ್ತಿರುವುದು 40% ʼಕಮಿಷನ್‌ ಸಮಾವೇಶʼ : ʼಕೈʼ ವಾಗ್ದಾಳಿ


ಅಲ್ಲದೆ, ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ ನಡುವೆಯೂ ಬಿಜೆಪಿ ಮೋಜಿನ ನರ್ತನೆ ಮಾಡುತ್ತಿದೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿದ್ದಾರೆ. ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಬಿಜೆಪಿ ಸಂಭ್ರಮಾಚರಣೆಯಲ್ಲಿದೆ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಿಡಿಕಾರಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.