ಬಿಜೆಪಿ ನಡೆಸುತ್ತಿರುವುದು 40% ʼಕಮಿಷನ್‌ ಸಮಾವೇಶʼ : ʼಕೈʼ ವಾಗ್ದಾಳಿ

ಬಿಜೆಪಿಗರು 40% ಕಮಿಷನ್‌ ಲೂಟಿಯ ಹಣದಲ್ಲಿ ʼಕಮಿಷನ್‌ ಸಮಾವೇಶʼ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಕಮಲಪಾಳಯದ ವಿರುದ್ಧ ಗುಡುಗಿದೆ.

Written by - Krishna N K | Last Updated : Sep 10, 2022, 12:48 PM IST
  • ಬಿಜೆಪಿ ಜನಸ್ಪಂದನ ಸಮಾವೇಶ ವಿರುದ್ಧ ಗುಡುಗಿದ ರಾಜ್ಯ ಕಾಂಗ್ರೆಸ್‌
  • ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮವೇಶವಲ್ಲ "ಕಮಿಷನ್ ಸಮಾವೇಶ"
  • ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ?
ಬಿಜೆಪಿ ನಡೆಸುತ್ತಿರುವುದು 40% ʼಕಮಿಷನ್‌ ಸಮಾವೇಶʼ : ʼಕೈʼ ವಾಗ್ದಾಳಿ title=

ಬೆಂಗಳೂರು: ಬಿಜೆಪಿಗರು 40% ಕಮಿಷನ್‌ ಲೂಟಿಯ ಹಣದಲ್ಲಿ ʼಕಮಿಷನ್‌ ಸಮಾವೇಶʼ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಕಮಲಪಾಳಯದ ವಿರುದ್ಧ ಗುಡುಗಿದೆ.

ಈ ಕುರಿತು ಸರಣಿ ಟ್ಟೀಟ್‌ ಮಾಡಿರುವ ಕೆಪಿಸಿಸಿ, ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ "ಕಮಿಷನ್ ಸಮಾವೇಶ" 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ?. ನಿಮ್ಮದೇ ಪಕ್ಷದ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್‌ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ 'ಎಸಿಬಿ' ರದ್ದುಗೊಳಿಸಿ ಅಧಿಕೃತ ಅಧಿಸೂಚನೆ!

ಅಲ್ಲದೆ, ಗುತ್ತಿಗೆದಾರರು ಸರ್ಕಾರದ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೂ ಉಪಯೋಗವಿಲ್ಲ, 40% ಕಮಿಷನ್ ಲೂಟಿ ನಿಂತೇ ಇಲ್ಲ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ನಿಮ್ಮ ಸರ್ಕಾರದ ಸಾಧನೆ ಏನು..? ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಸಾಧನೆಯೇ..? ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ? ಗುತ್ತಿಗೆದಾರರು, ಜನಸಾಮಾನ್ಯರ ನಂತರ ಹೈಕೋರ್ಟ್ ಕೂಡ 40% ಸರ್ಕಾರದ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿದೆ. ಸಿಎಂ ಬೊಮ್ಮಾಯಿ ಅವರೇ  ʼಬಿಜೆಪಿ ಬ್ರಷ್ಟೋತ್ಸವʼದ ಇಂತಹ ನಾಚಿಕೆಗೇಡಿನ ಸಂಗತಿ ಎದುರಿಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದ್ದೀರಿ? ನಾಡಿನ ಎದುರು ತಲೆ ತಗ್ಗಿಸಬೇಕಾದ ಸಮಯವಿದು ಎಂದು ಕಿಡಿಕಾರಿದೆ.

ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸ್ಪಂದನೆ ಇಲ್ಲದೆ. "ಜನರ ರೋಧನೆ" ನಡೆಯುತ್ತಿದೆ. ಸಚಿವರಾದ ಅರವಿಂದ್ ಲಿಂಬಾವಳಿ, ಮಾಧುಸ್ವಾಮಿಯಂತವರಿಂದ "ಜನರ ನಿಂದನೆ" ನಡೆಯುತ್ತಿದೆ. ನೆರೆ, ಪ್ರವಾಹ, ಬೆಲೆ ಏರಿಕೆಯಂತವುಗಳಿಂದ "ಜನರ ವೇದನೆ" ನೋಡುತ್ತಿದ್ದೇವೆ. ಬಿಜೆಪಿ ಸಮಾವೇಶಕ್ಕೆ "ಜನವೇದನೆ ಮತ್ತು ಜನರೋಧನೆ" ಹೆಸರುಗಳೇ ಸೂಕ್ತ ಎಂದು ರಾಜ್ಯ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News