ಬಡವರ ದುಡಿಮೆಯ ಕಾರ್ಖಾನೆ ಮುಚ್ಚಿ ಸಿರಿವಂತರಿಗೆ ವಿಮಾನ ಹಾರಿಸುವುದೇ ಅಭಿವೃದ್ಧಿಯೇ?: ಕಾಂಗ್ರೆಸ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಯಸ್ಸಿನ ಕಾರಣದಿಂದ ರಾಜೀನಾಮೆ ಕೊಟ್ಟಿದ್ದಿದ್ದರೆ `ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ`ವೆಂದು ಕೊನೆಯ ದಿನದವರೆಗೂ ಹೇಳಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL)ಯನ್ನು ಮುಚ್ಚುವಂತೆ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಈಗಾಗಲೇ ಈ VISL ಮುಚ್ಚದಂತೆ ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಪತ್ರ ಬರೆದಿದ್ದು, ಕಾರ್ಖಾನೆ ಮುಚ್ಚದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ಥಳೀಯರಿಗೆ ಉದ್ಯೋಗದ ನೀಡುವ ಭದ್ರಾವತಿಯ VISL ಮುಚ್ಚುವುದು. ಶಿವಮೊಗ್ಗದಲ್ಲಿ ಹೆಚ್ಚಿನ ಉದ್ಯೋಗಕ್ಕೆ ಅವಕಾಶವಿಲ್ಲದ ವಿಮಾನ ನಿಲ್ದಾಣ ತೆರೆಯುವುದು. ಬಿಜೆಪಿ ಸರ್ಕಾರಕ್ಕೆ ವಿಮಾನ ನಿಲ್ದಾಣದ ಮೇಲಿನ ಅರ್ಧದಷ್ಟು ಆಸಕ್ತಿ VISL ಉಳಿಸುವುದರಲ್ಲಿ ಏಕಿಲ್ಲ? ಬಡವರ ದುಡಿಮೆಯ ಕಾರ್ಖಾನೆ ಮುಚ್ಚಿ ಸಿರಿವಂತರಿಗೆ ವಿಮಾನ ಹಾರಿಸುವುದೇ ಅಭಿವೃದ್ದಿಯೇ?’ ಎಂದು ಪ್ರಶ್ನಿಸಿದೆ.
ಸಂಸಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ರೂಪ ಪೋಸ್ಟ್: ರೂಪ ಗಂಡನ ಮೇಲೆ ಕಣ್ಣಾಕಿದ್ರಾ ರೋಹಿಣಿ ಸಿಂಧೂರಿ..!
BSY ಮೂಲೆಗುಂಪು ಮಾಡಿದ್ದೇಕೆ?
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಯಸ್ಸಿನ ಕಾರಣದಿಂದ ರಾಜೀನಾಮೆ ಕೊಟ್ಟಿದ್ದಿದ್ದರೆ "ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ"ವೆಂದು ಕೊನೆಯ ದಿನದವರೆಗೂ ಹೇಳಿದ್ದೇಕೆ? ಏಕಾಏಕಿ ರಾಜೀನಾಮೆ ಕೊಟ್ಟಿದ್ದೇಕೆ? ಕಣ್ಣೀರು ಹಾಕಿದ್ದೇಕೆ? BSY ಅನಿವಾರ್ಯವಲ್ಲವೆಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದೇಕೆ? ಮೂಲೆಗುಂಪು ಮಾಡಿದ್ದೇಕೆ? #BSYmuktaBJP ಪೂರ್ವಯೋಜಿತ ಅಭಿಯಾನವಲ್ಲವೇ?’ ಎಂದು ಕಾಂಗ್ರೆಸ್ ಕುಟುಕಿದೆ.
Corrupt Congress ಎಂದ ಬಿಜೆಪಿ
‘ನೋಟು ಕೊಟ್ಟು ಓಟು ಹಾಕಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಈಗ ಟಿವಿ ಕೊಡಲು ಹೊರಟಿದೆ. ಕಾಂಗ್ರೆಸ್ ಪರ ಪ್ರಚಾರ ಮಾಡಲು ಕಾರ್ಯಕರ್ತರೇ ಇಲ್ಲದ ಕಾರಣ, ಬಹುಮಾನ ಘೋಷಿಸಿ ಕಾರ್ಯಕರ್ತರನ್ನು ಕರೆತರಬೇಕಾದ ದುಸ್ಥಿತಿಗೆ ಬಂದಿದೆ. ರಾಜ್ಯದಲ್ಲಿ ‘ಕೈ’ ಪಕ್ಷವನ್ನು ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸುವ ದಿನಗಳೂ ಬರಲಿವೆ’ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: Ananth Nag: ಹಿರಿಯ ನಟ ಅನಂತ್ ನಾಗ್ ಇಂದು ಬಿಜೆಪಿಗೆ ಸೇರ್ಪಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.