ಬೆಂಗಳೂರು: ಹತಾಶೆ ಎಂಬುದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಕಿತ್ತು ತಿನ್ನುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರರ ವಿರುದ್ಧದ ಕಾಸಿಗಾಗಿ ಹುದ್ದೆಯ ವಿಡಿಯೋ ಲೀಕ್ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.  


COMMERCIAL BREAK
SCROLL TO CONTINUE READING

ಕುಮಾರಸ್ವಾಮಿಗೆ ಹೀನಾಯ ಸೋಲಿನ ಹತಾಶೆ, ಅಧಿಕಾರ ಸಿಗದಿರುವ ಹತಾಶೆ, ಪಕ್ಷ ಖಾಲಿಯಾಗುತ್ತಿರುವ ಹತಾಶೆ ಮತ್ತು ಕಾರ್ಯಕರ್ತರ ಅಸಹಕಾರದ ಹತಾಶೆ. ಈ ಎಲ್ಲಾ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ತನ್ನೂ ಬಿಡದೆ ಕಳ್ಳತನ ಮಾಡಿದವರೊಬ್ಬರು ಸಮಾಜಕ್ಕೆ ಬುದ್ದಿ ಹೇಳುತ್ತೇನೆ ಎಂದು ಹೊರಡುವುದು ಪರಮಹಾಸ್ಯ’ವೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.


ಬೆಂಗಳೂರಿನ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಆರಂಭ


‘ಡಾ.ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು, ಕೆಡಿಪಿ ಸಮಿತಿಯ ಸದಸ್ಯರು. ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದು ಸಹಜ. ಕ್ಷೇತ್ರದ ಜನರ ಅಹವಾಲುಗಳನ್ನು ಕೇಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದು ಪೆನ್ ಡ್ರೈವ್ ಸ್ವಾಮಿಗಳಿಗೆ ಹಾಗೂ ಬಿಜೆಪಿಯ ಮತಿಹೀನರಿಗೆ ಅಪರಾಧವಾಗಿ ಕಂಡಿದ್ದು ಹೇಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಕಾಸಿಗಾಗಿ ಹುದ್ದೆ ವಿಡಿಯೋ ಲೀಕ್!


ಎಚ್.ಡಿ.ಕುಮಾರಸ್ವಾಮಿ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು. ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ ನೌಟಂಕಿ ನಾಟಕ ಮುಂದುವರೆಸಿರುವ ಅವರನ್ನು ಕರ್ನಾಟಕದ ರಾಜಕಾರಣದ “ತಿಪ್ಪೆಗುಂಡಿ“ ಎಂದು ಪರಿಗಣಿಸುವ ಕಾಲ ದೂರವಿಲ್ಲ’ವೆಂದು ಕಾಂಗ್ರೆಸ್ ಕುಟುಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.