Karnataka Congress: `ಕಮಲಕ್ಕೆ ಹಾರಿ ಬಂದ 15 ಶಾಸಕರಿಗೆ ಬಿಜೆಪಿ ರಾಜಕೀಯ ಸಮಾಧಿ`
ಆಪರೇಷನ್‌ಗೊಳಪಟ್ಟು ಜಿಗಿದ `ಜಂಪಿಂಗ್ ಸ್ಟಾರ್ಸ್ಗ`ಳಿಗೆ ಕರ್ನಾಟಕದ ಭಾರತೀಯ ಜನತಾ ಪಕ್ಷವು ರಾಜಕೀಯ ಸಮಾಧಿ ತೊಡುತ್ತದೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು: ಯುವತಿ ಜೊತೆಗಿನ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿಗೆ ಜಿಗಿದ 15 ಶಾಸಕರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಆಪರೇಷನ್‌ಗೊಳಪಟ್ಟು ಜಿಗಿದ 'ಜಂಪಿಂಗ್ ಸ್ಟಾರ್ಸ್ಗ'ಳಿಗೆ ಕರ್ನಾಟಕದ ಭಾರತೀಯ ಜನತಾ ಪಕ್ಷವು ರಾಜಕೀಯ ಸಮಾಧಿ ತೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಅಂದೇ ಸದನದಲ್ಲಿ ಗಂಟಾಘೋಷವಾಗಿ ಭವಿಷ್ಯ ನುಡಿದಿದ್ದರು' ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.
Ramesh Jarkiholi: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು!
ಕಾಂಗ್ರೆಸ್ ನಿಂದ ಬಿಜೆಪಿ(BJP)ಗೆ ಜಿಗಿದ 15 ಮಂದಿ ಶಾಸಕರ ಪೈಕಿ ಒಬ್ಬೊಬ್ಬರನ್ನೇ ಮುಗಿಸುವುದಕ್ಕೆ ಹೊರಟಿದೆ. 'ಇಂದು ಅದರಂತೆಯೇ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ... ಒಬ್ಬೊಬ್ಬರನ್ನಾಗಿಯೇ ಒಂದೊಂದು ರೀತಿಯಲ್ಲಿ ಮುಗಿಸುತ್ತಿದೆ ಬಿಜೆಪಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ST Somashekhar: 22 ಲಕ್ಷ ರೈತರಿಗೆ ₹ 14 ಸಾವಿರ ಕೋಟಿ ಸಾಲ..!
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಂದು ಹೇಳಿದ್ದೇನು?: 'ಒಬ್ಬ ಬಂದು ನಂಗೆ ಪವರ್ ಸಿಗುತ, ಅವನ್ಯಾರೋ ಒಬ್ಬ ಹೇಳ್ತಾನೆ ನಂಗೆ ಡೆಪ್ಯೂಟಿ ಸಿಎಂ(DCM), ನನಗೆ ಜಲಸಂಪನ್ಮೂಲ, ಇನ್ನೊಬ್ರಿಗೆ ಪವರ್ ಅಂತೆ, ಇನ್ನೊಬ್ಬರಿಗೆ ಗೃಹ ಖಾತೆಯಂತೆ. ನಾನ್ ಹೇಳಿದೆ ಲೇ.. ಎಲ್ಲೋ ಹಾಕತೌರೆ ಕಣೋ ಟೋಪಿ ನಿಮ್ಗೆ 15 ಜನರಕ್ಕೂ.. ನಿಮ್ 15 ಜನಕ್ಕೂ ಸಮಾಧಿ ಮಾಡ್ತಾರೆ. ರಾಜಕೀಯದ ಸಮಾಧಿ. ಹಾ ರಾಜಕೀಯವಾಗಿ ಸಮಾಧಿ ಮಾಡುತ್ತಿದ್ದಾರೆ ಇಂಥ ಮಾತಿಗೆಲ್ಲ ಬೀಳುವುದಕ್ಕೆ ಹೋಗಬೇಡಿ ಕಣ್ರೋ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.
SSLC Examination : ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.