ST Somashekhar: 22 ಲಕ್ಷ ರೈತರಿಗೆ ₹ 14 ಸಾವಿರ ಕೋಟಿ ಸಾಲ..!

ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 22 ಲಕ್ಷ ರೈತರಿಗೆ 14979.73 ಕೋಟಿ ರು. ಸಾಲ ವಿತರಣೆ

Last Updated : Mar 3, 2021, 06:01 PM IST
  • ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 22 ಲಕ್ಷ ರೈತರಿಗೆ 14979.73 ಕೋಟಿ ರು. ಸಾಲ ವಿತರಣೆ
  • ಶೇ.90.56ರಷ್ಟುಗುರಿ ಸಾಧನೆ ಮಾಡಲಾಗಿದೆ ಎಂದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌
  • ಫೆ.25ರವರೆಗೆ 21.64 ಲಕ್ಷ ರೈತರಿಗೆ 14179.22 ಕೋಟಿ ರು., 36 ಸಾವಿರ ರೈತರಿಗೆ 800.51 ಕೋಟಿ ರು.ಗಳ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ.
ST Somashekhar: 22 ಲಕ್ಷ ರೈತರಿಗೆ ₹ 14 ಸಾವಿರ ಕೋಟಿ ಸಾಲ..! title=

ಬೆಂಗಳೂರು: ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 22 ಲಕ್ಷ ರೈತರಿಗೆ 14979.73 ಕೋಟಿ ರು. ಸಾಲ ವಿತರಣೆ ಮಾಡಲಾಗಿದ್ದು, ಶೇ.90.56ರಷ್ಟುಗುರಿ ಸಾಧನೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಟಿ.ಸೋಮಶೇಖರ್(ST Somashekhar)‌, ಫೆ.25ರವರೆಗೆ 21.64 ಲಕ್ಷ ರೈತರಿಗೆ 14179.22 ಕೋಟಿ ರು., 36 ಸಾವಿರ ರೈತರಿಗೆ 800.51 ಕೋಟಿ ರು.ಗಳ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ. ಅಲ್ಪಾವಧಿ ಸಾಲದ ಗುರಿ ಶೇ.107ರಷ್ಟು, ಮಧ್ಯಮಾವಧಿ ಸಾಲ ಶೇ.111, ದೀರ್ಘಾವಧಿ ಸಾಲ ಶೇ.76ರಷ್ಟುವಿತರಣೆ ಮಾಡಲಾಗಿದೆ ಎಂದರು.

SSLC Examination : ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ..!

ಹೈನುಗಾರಿಕೆ/ ಮೀನುಗಾರರಿಗೆ ದುಡಿಯುವ ಬಂಡವಾಳಕ್ಕಾಗಿ 57,185 ರೈತರಿಗೆ 106 ಕೋಟಿ ರು. (ಶೇ.100 ) ಹಾಗೂ 116 ಮೀನುಗಾರರಿಗೆ 59 ಲಕ್ಷ ರು. ಸಾಲ(Bank Lone) ವಿತರಿಸಲಾಗಿದೆ. ಸ್ವ ಸಹಾಯ ಗುಂಪುಗಳಿಗೆ 2020-21ನೇ ಸಾಲಿನಲ್ಲಿ 21 ಸಾವಿರ ಗುಂಪುಗಳಿಗೆ 754.39 ಕೋಟಿ ರು. ಸಾಲ ವಿತರಿಸಲಾಗಿದ್ದು, ಶೇ.75ರಷ್ಟುಗುರಿ ಸಾಧಿ‘ಬಡವರ ಬಂಧು’ ಯೋಜನೆಯಡಿ 25 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ 8,778 ಬೀದಿ ವ್ಯಾಪಾರಿಗಳಿಗೆ 7.69 ಕೋಟಿ ರು.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ‘ಕಾಯಕ’ ಯೋಜನೆಯಡಿ 2500 ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ 245 ಗುಂಪುಗಳಿಗೆ 10.81 ಕೋಟಿ ರು. ಸಾಲ ನೀಡಲಾಗಿದೆ. ಮಾಚ್‌ರ್‍ ಅಂತ್ಯದೊಳಗೆ ಶೇ.100ರಷ್ಟುಸಾಲ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

Ramesh Jarkiholi: ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಮುಡಿಗೆ?

ಮೊದಲ ಸ್ಥಾನದಲ್ಲಿ ಕರ್ನಾಟಕ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆ (Agri Infra Fund‌) ಅನುಷ್ಠಾನದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 949 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) 355.84 ಕೋಟಿ ರು.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ನಬಾರ್ಡ್‌ 614 ಸಂಘಗಳಿಗೆ 198 ಕೋಟಿ ರು. ಸಾಲ ಮಂಜೂರು ಮಾಡಿದೆ. ಸಾಲ ಮಂಜೂರಾದ ಪ್ರತಿ ಪ್ಯಾಕ್ಸ್‌ಗೆ ಕೇಂದ್ರ ಸರ್ಕಾರ ಎರಡು ಕೋಟಿ ರು. ನೀಡಲಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

Siddaramaiah: 'ನೋಡೊದಕ್ಕು, ಹೇಳೊದಕ್ಕು ಅಸಹ್ಯವಾಗುತ್ತೆ, ಇಂತಹ ಮಾನಗೆಟ್ಟ ಸರ್ಕಾರ ಬೇಕಾ?'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News