Karnataka Darshan for SSLC children: ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪ್ರತಿವರ್ಷ ಆಯೋಜಿಸುವ ಕರ್ನಾಟಕ ದರ್ಶನ ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಂಚಿತರಾಗುತ್ತಿರುವ ಕಾರಣ 8ನೇ ತರಗತಿಗೆ ಮಾತ್ರ ಮೀಸಲಾಗಿದ್ದ ಈ ಯೋಜನೆಯನ್ನು ಈ ವರ್ಷದಿಂದ 10ನೇ ತರಗತಿಯವರೆಗೂ ಸರ್ಕಾರ ವಿಸ್ತರಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ಮುಂಚೆ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಸರ್ಕಾರ ಇಂತಿಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಒಪ್ಪಿಗೆ ನೀಡುತ್ತದೆ. ಅದರಲ್ಲೂ ಮಕ್ಕಳು ಹೆಚ್ಚಿದ್ದರೆ ಎಲ್ಲರಿಗೂ ಹೋಗುವ ಅವಕಾಶ ಇರುವುದಿಲ್ಲ.


ಇದನ್ನೂ ಓದಿ: ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ, ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ಇಲ್ಲ: ಡಿ.ಕೆ. ಸುರೇಶ್


ಪ್ರವಾಸ ಎಂದರೆ ಯಾವ ಮಕ್ಕಳಿಗೆ ತಾನೇ ಇಷ್ಟ ಇಲ್ಲ.. ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಸ್ನೇಹಿತರ ಜೊತೆ ಪ್ರವಾಸ ಎಂದರಂತೂ ಪ್ರತಿಯೊಬ್ಬರಿಗೂ ಅಚ್ಚು ಮೆಚ್ಚು. ಆ ಪ್ರವಾಸವು ಎಲ್ಲವನ್ನೂ ಒಳಗೊಂಡಿರುತ್ತದೆ. ಆಟ-ಪಾಠ, ಮೋಜು-ಮಸ್ತಿ, ಕುಣಿತ ಸೇರಿದಂತೆ ಎಲ್ಲವೂ ಆ ಪ್ರವಾಸದಲ್ಲಿರುತ್ತದೆ. ಇಂತಹ ಪ್ರವಾಸಕ್ಕೆ ಕೆಲವರಿಗೆ ಮಾತ್ರ ಅವಕಾಶ ದೊರೆತು ಮತ್ತೆ ಕೆಲವರಿಗೆ ಅವಕಾಶ ಸಿಗದೇ ಹೋದರೆ ಎಂತವರಿಗಾದರೂ ಸಹ ಬೇಸರವಾಗುತ್ತದೆ.


ಹೀಗಾಗಿ ಸರ್ಕಾರ ಪ್ರತಿವರ್ಷ ಪ್ರವಾಸೋದ್ಯಮ ಇಲಾಖೆ ಆಯೋಜಿಸುವ ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ವರ್ಷದಿಂದ 10ನೇ ತರಗತಿಯ ಮಕ್ಕಳಿಗೂ ಅವಕಾಶ ನೀಡಿದೆ. SCSP, TSP ಅನುದಾನದಡಿ ರಾಜ್ಯದ 31 ಜಿಲ್ಲೆಗಳ ಸರ್ಕಾರಿ ಫ್ರೌಡ ಶಾಲೆಗಳಲ್ಲಿ ಹಾಗೂ ಮೊರಾರ್ಜಿ ದೇಸಾಯಿ, ಕ್ರೈಸ್‌ ವಸತಿ ಶಾಲೆಗಳಲ್ಲಿನ SC/ST ಪಂಗಡದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುತ್ತಿತ್ತು. 


ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಭಕ್ತರಿಗೆ KSRTCಯಿಂದ ಗುಡ್‌ ನ್ಯೂಸ್‌; ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಶಬರಿಮಲೆಗೆ Volvo bus ಸೇವೆ!!


ಅದೇ ರೀತಿ ಈ ಬಾರಿಯೂ ಪ್ರವಾಸಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಈ ವರ್ಷ ವಿಶೇಷವಾಗಿ 10ನೇ ತರಗತಿ ಮಕ್ಕಳಿಗೂ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದಾದ್ಯಂತ 19 ಸಾವಿರ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ದೊರೆಯಲಿದೆ. ಈ ರೀತಿಯ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೆ ನೀಡುವ ಮೂಲಕ ಮಕ್ಕಳು ಮತ್ತು ಪೋಷಕರಲ್ಲಿ ಸರ್ಕಾರಿ ಶಾಲೆಗಳೂ ಸಹ ಯಾವುದಕ್ಕೂ ಕಡಿಮೆ ಇಲ್ಲವೆಂಬುದನ್ನು ಸಾಬೀತುಪಡಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.