ಕರ್ನಾಟಕ ಶಿಕ್ಷಣ ನೀತಿ: ಕಾಂಗ್ರೆಸ್ನಿಂದ ಯುವಕರ ಬ್ರೈನ್ ವಾಶ್ ಮಾಡುವ ಪ್ರಯತ್ನ?- ಬಿಜೆಪಿ ಆರೋಪ
Karnataka Education Policy: ಕಾಂಗ್ರೆಸ್ ತನ್ನ ತಿರುಚಿದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತೂರಿಸಿ, ಮಕ್ಕಳ ಹಾಗೂ ಯುವಕರ ಬ್ರೈನ್ ವಾಶ್ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಭಾರತದಲ್ಲಿ ರಾಷ್ಟ್ರೀಯತೆ ಜಾಗೃತಗೊಂಡರೆ, ತನ್ನ ಅಸ್ತಿತ್ವ ಕಮರಿ ಹೋಗುತ್ತದೆ ಎಂಬುದು ಬ್ರಿಟಿಷರ ಸಂಜಾತರಾಗಿರುವ ಕಾಂಗ್ರೆಸ್ ಪಕ್ಷದ ಮನಸ್ಥಿತಿ. ಹೀಗಾಗಿ ಅಧಿಕಾರ ದೊರೆತಾಗ ಮತ್ತು ಅವಕಾಶ ಸಿಕ್ಕಾಗ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯತೆಯ ಅಂಶಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹತ್ತಿಕ್ಕುತ್ತಲೇ ಬಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿದ್ದು, ರಾಷ್ಟ್ರೀಯತೆಯನ್ನು ಒಳಗೊಂಡ ಪಠ್ಯಪುಸ್ತಕವನ್ನು ಹಿಂಪಡೆದಿದ್ದು, ಇದೆಲ್ಲಾ ಕಾಂಗ್ರೆಸ್ ಪಕ್ಷದ ರಾಷ್ಟ್ರವಿರೋಧಿ ಧೋರಣೆಯ ಪ್ರತೀಕವೆಂದು ಬಿಜೆಪಿ ಟೀಕಿಸಿದೆ.
‘ಅತ್ಯಂತ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಭಾರತೀಯರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅನುವುಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಗತ್ಯ. ಇದನ್ನು ಮನಗಂಡಿದ್ದ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸೇರಿದಂತೆ ಶಿಕ್ಷಣ ವಲಯವನ್ನು ಸುಧಾರಿಸುವ ಅನೇಕ ಸುಧಾರಣಾ ಕ್ರಮಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತ್ತು. ನೂತನ ಪಠ್ಯಕ್ರಮ, ವಿಭಿನ್ನ ಬೋಧನಾ ಶೈಲಿ, ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಿಕೆ, ವಿಜ್ಞಾನ ಮತ್ತು ಕಲೆಯ ವಿಷಯಗಳು ಹಾಗೂ ವೃತ್ತಿಪರ ಮತ್ತು ಶೈಕ್ಷಣಿಕ ಕೋರ್ಸ್‌ಗಳ ಮೂಲಕ ಉದ್ಯೋಗಾಧಾರಿತ ಕೌಶಲ್ಯಗಳ ಜೊತೆಜೊತೆಗೆ ರಾಷ್ಟೀಯತೆಯ ಚಿಂತನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಚೇಸ್ ಮಾಡಿ ದಂತ ಚೋರರಿಗೆ ಖೆಡ್ಡ ತೋಡಿದ ಅರಣ್ಯ ಇಲಾಖೆ
‘ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಭಾರತದ ಶಿಕ್ಷಣ ಜಗತ್ತಿಗೆ ಯಾವುದೇ ಕೊಡುಗೆಯನ್ನು ನೀಡದೆ, ಮೆಕಾಲೆ ಶಿಕ್ಷಣ ಪದ್ದತಿಯನ್ನೇ ಯಥಾವತ್ತಾಗಿ ಮುಂದುವರಿಸಿದೆ. ಶಿಕ್ಷಣವನ್ನು ರಾಷ್ಟ್ರ ನಿರ್ಮಾಣಕ್ಕೆ, ಯುವಜನತೆಗೆ ಸ್ವಾವಲಂಬನೆಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು, ಆತ್ಮವಿಶ್ವಾಸವನ್ನು ವೃದ್ಧಿಸಲು ಬಿಜೆಪಿ ಬಳಸಿದರೆ, ಅದೇ ಕಾಂಗ್ರೆಸ್ ಶಿಕ್ಷಣವನ್ನು ತನ್ನ ಪೊಳ್ಳು ಸಿದ್ದಾಂತ ಹಾಗೂ ತನ್ನ ದೇಶವಿರೋಧಿ ಮನಸ್ಥಿತಿಯನ್ನು ತುಂಬುವ ಟೂಲ್ ಕಿಟ್ ಆಗಿ ಬಳಸಿಕೊಳ್ಳುತ್ತದೆ. ಕಾಂಗ್ರೆಸ್ ತನ್ನ ತಿರುಚಿದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತೂರಿಸಿ, ಮಕ್ಕಳ ಹಾಗೂ ಯುವಕರ ಬ್ರೈನ್ ವಾಶ್ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಇದಕ್ಕಾಗಿ ತನ್ನ ವಂಧಿಮಾಗದರನ್ನು, ಆಸ್ಥಾನ ಕಲಾವಿದರನ್ನೆಲ್ಲಾ ಗುಡ್ಡೆ ಹಾಕಿ, ತನ್ನ ಸಿದ್ದಾಂತಕ್ಕೆ ಅನುಕೂಲವಾಗುವ ರೀತಿಯಲ್ಲಿ ಪಠ್ಯ ಪರಿಷ್ಕರಣೆ ಮಾಡಿತ್ತು’ ಎಂದು ಬಿಜೆಪಿ ಕುಟುಕಿದೆ.
Honor killing: ಅನ್ಯಜಾತಿಯ ಯುವಕನ ಪ್ರೀತಿಸಿದ ಮಗಳ ಕತ್ತು ಕೊಯ್ದು ಕೊಲೆಗೈದ ತಂದೆ!
‘ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದುಪಡಿಸಬೇಕು ಹಾಗೂ ದ್ವೇಷ ರಾಜಕಾರಣ ಮಾಡಬೇಕೆಂಬ ಟೂಲ್‍ಕಿಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುತ್ತಿರುವುದು ಸಹ ದ್ವೇಷದ ರಾಜಕಾರಣಕ್ಕಾಗಿ. ಕರ್ನಾಟಕದ ಎಲ್ಲಾ 30 ವಿವಿಯ ಕುಲಪತಿಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸದೆ ಮುಂದುವರೆಸಿ ಎಂದು ಆಗ್ರಹಿಸಿದರೂ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಪುರುಷಾರ್ಥದ ಸಾಧನೆಗೆ ಕಾಂಗ್ರೆಸ್ ರದ್ದುಗೊಳಿಸಿದೆ ಎಂಬ ಪ್ರಶ್ನೆಗೆ ಇದುವರೆಗೂ ಸ್ಪಷ್ಟ ಉತ್ತರ ನೀಡಿಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.