ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ರದ್ದುಗೊಳಿಸಲಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್(Suresh Kumar),  ಪ್ರಥಮ ಪಿಯುಸಿ ಗ್ರೇಡಿಂಗ್ ಆಧರಿಸಿ ಆಧರಿಸಿ ಪಾಸ್ ಮಾಡಲಾಗುತ್ತದೆ. ಫಲಿತಾಂಶ ಸಮಾಧಾನ ನೀಡದಿದ್ದರೆ. ಕೊರೋನಾ ಕಡಿಮೆಯಾದ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್ ನಿಂದ ಕ್ಷಮೆಯಾಚನೆ


ನಂತ್ರ ಹತ್ತನೇ ತರಗತಿ ಪರೀಕ್ಷೆಯ ಕುರಿತು ಮಾತನಾಡಿದ ಅವರು,  SSLC ಎರಡು ವಿಷಯಗಳ ಪರೀಕ್ಷೆ(SSLC Exam 2021)  ಮಾಡಲು ನಿರ್ಧರಿಸಲಾಗಿದೆ. ಪೇಪರ್ ಒಂದು ಹಾಗೂ ಪೇಪರ್ ಎರಡು ಇರಲಿದೆ  ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : ಕರ್ನಾಟಕದಲ್ಲಿ ಜೂನ್ 14 ರವರೆಗೆ ಲಾಕ್ ಡೌನ್ ವಿಸ್ತರಣೆ


ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈ ಮಾಡದೇ ಇರೋದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಈ ವರ್ಷದ ದ್ವಿತೀಯ ಪಿಯುಸಿ(2nd PUC) ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೇ ಯಾವ ರೀತಿಯಲ್ಲಿ ಗ್ರೇಡಿಂಗ್ ಕೊಡಬಹುದು ಎನ್ನುವ ಬಗ್ಗೆ ಯೋಚಿಸಿದ್ದೇವೆ. ಕೆಲವು ರಾಜ್ಯಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಿದ ಮೇಲೆ, ಯಾವರೀತಿ ಫಲಿತಾಂಶ ಪ್ರಕಟಿಸುತ್ತೀರಿ ಎಂಬುದಾಗಿಯೂ ಚರ್ಚಿಸಿದ್ದೇವೆ. ಯಾರು ಕೂಡ ತೆಗೆದುಕೊಳ್ಳಬಹುದಾದಂತ ಮಾನದಂಡದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದಿದ್ದಾರೆ. ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ. ಆ ಎಲ್ಲಾ ಮಕ್ಕಳಿಗೆ ನಾವು ಯಾವರೀತಿ ಅಸೆಸ್ ಮಾಡಬಹುದು ಎನ್ನುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಇದನ್ನೂ ಓದಿ : ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದ ಗೂಗಲ್ ವಿರುದ್ಧ ಸಿಡಿದ್ದೆದ್ದ ಕನ್ನಡಿಗರು..!


ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ(2nd PUC Exams)ಯಗಳನ್ನು ಪ್ರಥಮ ಪಿಯುಸಿ ಪರೀಕ್ಷೆಯನ್ನು ಜಿಲ್ಲಾ ಮಟ್ಟದ ಪರೀಕ್ಷೆಯಾಗಿ ಎದುರಿಸಿದ್ದರು. ಆ ಆಧಾರದ ಮೇಲೆ ಪರೀಕ್ಷೆಯಿಲ್ಲದೇ ಈ ಬಾರಿ, ಆ ಅಂಕಗಳ ಆಧಾರದ ಮೇಲೆ ನಾವು ಒಂದಷ್ಟು ಮಾನದಂಡಗಳನ್ನು ಇಟ್ಟುಕೊಂಡು, ಪಿಯು ಇಲಾಖೆ ಅವುಗಳನ್ನು ಬಿಡುಗಡೆ ಮಾಡಲಿದೆ. ಅದರ ಆಧಾರದ ಮೇಲೆ ಗ್ರೇಡ್ ಮಾಧರಿಯಲ್ಲಿ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ