ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದ ಗೂಗಲ್ ವಿರುದ್ಧ ಸಿಡಿದ್ದೆದ್ದ ಕನ್ನಡಿಗರು..!

ನೀವು ಗೂಗಲ್ ನಲ್ಲಿ ಭಾರತದಲ್ಲಿ ugliest language ಯಾವುದು ಎನ್ನುವುದನ್ನು ಹುಡುಕುತ್ತಾ ಹೊರಟಾಗ ಕನ್ನಡ ಎನ್ನುವ ಉತ್ತರವನ್ನು ಗೂಗಲ್ ಮೊದಲಿಗೆ ತೋರಿಸುತ್ತದೆ.

Last Updated : Jun 3, 2021, 06:56 PM IST
  • ನೀವು ಗೂಗಲ್ ನಲ್ಲಿ ಭಾರತದಲ್ಲಿ ugliest language ಯಾವುದು ಎನ್ನುವುದನ್ನು ಹುಡುಕುತ್ತಾ ಹೊರಟಾಗ ಕನ್ನಡ ಎನ್ನುವ ಉತ್ತರವನ್ನು ಗೂಗಲ್ ಮೊದಲಿಗೆ ತೋರಿಸುತ್ತದೆ.
ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದ ಗೂಗಲ್ ವಿರುದ್ಧ ಸಿಡಿದ್ದೆದ್ದ ಕನ್ನಡಿಗರು..! title=
Photo Courtesy: Twitter

ಬೆಂಗಳೂರು: ನೀವು ಗೂಗಲ್ ನಲ್ಲಿ ಭಾರತದಲ್ಲಿ ugliest language ಯಾವುದು ಎನ್ನುವುದನ್ನು ಹುಡುಕುತ್ತಾ ಹೊರಟಾಗ ಕನ್ನಡ ಎನ್ನುವ ಉತ್ತರವನ್ನು ಗೂಗಲ್ ಮೊದಲಿಗೆ ತೋರಿಸುತ್ತದೆ.

ಇದನ್ನೂ ಓದಿ: Anushka Shetty: ಹೆತ್ತವರಿಗೆ ಕನ್ನಡದಲ್ಲೇ ವಿಶ್ ಮಾಡಿದ ಅನುಷ್ಕಾಗೆ ನೆಟ್ಟಿಗರು ಹೇಳಿದ್ದೇನು ಗೊತ್ತಾ

ಈಗ ಇದರ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕನ್ನಡಿಗರು ಗೂಗಲ್ ವಿರುದ್ಧ ಸಿಡಿದೆದ್ದಿದಾರೆ. ಇನ್ನೊಂದೆಡೆಗೆ ಈಗ ಕರ್ನಾಟಕ ಸರ್ಕಾರ ಕೂಡ ಗೂಗಲ್ (Google) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಅವರು ಗೂಗಲ್ ಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

"ಕನ್ನಡ (Kannada) ಭಾಷೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ, ಇದು 2,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ.ಕನ್ನಡವನ್ನು ಈಗ ಭಾರತದಲ್ಲಿ ಕೊಳಕು ಭಾಷೆ ಎಂದು ಕರೆದಿದ್ದರೆ, ಇದು ಕೇವಲ ಕನ್ನಡಿಗರ ಹೆಮ್ಮೆಯನ್ನು ಅವಮಾನಿಸುವ ಗೂಗಲ್‌ನ ಪ್ರಯತ್ನವಾಗಿದೆ ”ಎಂದು ಲಿಂಬಾವಳಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲಿಂಬಾವಳಿ ಅವರು ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿಗೆ ಕಾನೂನು ಇಲಾಖೆಯನ್ನು ಸಂಪರ್ಕಿಸಿ ಗೂಗಲ್‌ಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!

ಇನ್ನೊಂದೆಡೆಗೆ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ"#ಗೂಗಲ್‌ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು.ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News