ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡಿಗೆ ನೀರು ಬಿಟ್ಟಿರುವ ಮಾಹಿತಿ ಬಗ್ಗೆ ತಿಳಿಸಿದ್ದು, ಈ ಭಾರಿ ಮಳೆಗಾಲ ಉತ್ತಮವಾಗಿರುವುದರಿಂದ  ಸುಪ್ರೀಂ ಕೋರ್ಟ್ ಸೂಚನೆಗಿಂತಲೂ ಹೆಚ್ಚಿನ‌ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ ಎಂದು ಕರ್ನಾಟಕ ಹೇಳಿದೆ.


COMMERCIAL BREAK
SCROLL TO CONTINUE READING

ಗುರುವಾರ ದೆಹಲಿಯ ಸೇವಾಭವನದಲ್ಲಿರುವ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡಿಗೆ ನೀರು ಬಿಟ್ಟಿರುವ ಮಾಹಿತಿ ಬಗ್ಗೆ ತಿಳಿಸಿದೆ. ಕಾವೇರಿ ನೀರು‌ ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡುಗಳು ಮುಖ್ಯವಾಗಿ ಜುಲೈ ತಿಂಗಳ ಒಳ ಮತ್ತು ಹೊರ ಹರಿವಿನ ಮಾಹಿತಿ ಮುಂದಿಟ್ಟಿದ್ದು, ಮಳೆಯ ಪ್ರಮಾಣದ ಮಾಹಿತಿ ನೀಡಿದವು. 


ಕರ್ನಾಟಕ, ತಮಿಳುನಾಡಿಗೆ 140 ಟಿಎಂಸಿ ನೀರು ಬಿಟ್ಟಿರುವ ಮಾಹಿತಿಯನ್ನೂ‌ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಕಾವೇರಿ ನೀರು‌ ನಿಯಂತ್ರಣ ಸಮಿತಿ ಸೆಪ್ಟೆಂಬರ್ ಎರಡನೇ ವಾರಕ್ಕೆ ಈ ಸಭೆಯನ್ನು ಮುಂದೂಡಿತು.