ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ(Mekedatu Padayatra)ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಪಾದಯಾತ್ರೆ ಮಾಡಬೇಕಾ ಬೇಡ್ವಾ ಅನ್ನೋದರ ಬಗ್ಗೆ ಕಾಂಗ್ರೆಸ್ ನಾಯಕರು ಯೋಚಿಸಲಿ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಒಮಿಕ್ರಾನ್, ಕೊರೊನಾ(CoronaVirus) ಕಂಟ್ರೋಲ್ ಗೆ ಜನರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಮುಖ್ಯ. ರಾಜ್ಯದಲ್ಲಿ ಆರೋಗ್ಯದ ತುರ್ತು ಪರಿಸ್ಥಿತಿ ಇರೋದ್ರಿಂದ ಜನರು, ರಾಜಕೀಯ ಪಕ್ಷಗಳು ಸಹಕಾರ ಕೊಡಬೇಕು. ಕಾಂಗ್ರೆಸ್(Congress)ಗೆ ಜನರ ಹಿತಕಾಪಾಡುವ ಮನಸ್ಸು ಇದೆ ಅಂತ ಅಂದುಕೊಳ್ತೀನಿ. ಹೀಗಾಗಿ ಪಾದಯಾತ್ರೆ ಮಾಡಬೇಕಾ ಬೇಡ್ವಾ ಅನ್ನೋದರ ಬಗ್ಗೆ ಕಾಂಗ್ರೆಸ್ ನಾಯಕರು ಯೋಚನೆ ಮಾಡಲಿ. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಏನು ಆಗಿದೆ ಅಂತಾ ಎಲ್ಲರಿಗೂ ಗೊತ್ತು. ಅನೇಕ ವರ್ಷ ಕಾಂಗ್ರೆಸ್ ನವರು ಅಧಿಕಾರ ನಡೆಸಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಅವರು ಅರ್ಥ ಮಾಡಕೊಳ್ಳಬೇಕು ಅಂತಾ ಹೇಳಿದ್ದಾರೆ.


ಇದನ್ನೂ ಓದಿ: BDA: ಭೂಗಳ್ಳರಿಗೆ ಬಿಗ್ ಶಾಕ್..! ₹300 ಕೋಟಿ ಮೌಲ್ಯದ ಜಾಗ ವಶಕ್ಕೆ..!


ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆದವರು, ಸಚಿವರಾದವರು, ಉನ್ನತ ಸ್ಥಾನದಲ್ಲಿರೋರು ಇದ್ದಾರೆ. ಅವರೇ ಈ ಬಗ್ಗೆ ಯೋಚನೆ ಮಾಡಬೇಕು. ರಾಜ್ಯದ ಜನರು ಎಲ್ಲವನ್ನೂ ನೋಡ್ತಿದ್ದಾರೆ. ಎಲ್ಲವನ್ನು ಜನ ಅರ್ಥ ಮಾಡಿಕೊಳ್ತಾರೆ. ಕಾಂಗ್ರೆಸ್ ನಾಯಕರು ದೀರ್ಘಕಾಲ ಆಡಳಿತ ಮಾಡಿದ್ದಾರೆ. ಜನರ ಹಿತದೃಷ್ಟಿಯಿಂದ ಅವರು ನಿರ್ಧಾರ ಮಾಡ್ತಾರೆಂದು ಅಂದುಕೊಡಿದ್ದೇನೆ. ಅವರು ಹೀಗೆ ಹಠ ಮುಂದುವರೆಸಿದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ ಅಂತಾ ಸಚಿವ ಸುಧಾಕರ್(Health Minister K Sudhakar) ಎಚ್ಚರಿಕೆ ನೀಡಿದ್ದಾರೆ.


ಜ.9ರಿಂದ 163 ಕಿ.ಮೀ ಪಾದಯಾತ್ರೆ


ಕರ್ನಾಟಕದಲ್ಲಿ ಕೋವಿಡ್-19(COVID-19) ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, 3ನೇ ಅಲೆ(Corona 3rd Wave)ಯ ಭೀತಿ ಎದುರಾಗಿದೆ. ರಾಜ್ಯ ಸರ್ಕಾರ ಕೊರೊನಾ ಮತ್ತು ಓಮಿಕ್ರಾನ್ ನಿಯಂತ್ರಣಕ್ಕೆ ಹಲವು ನಿರ್ಬಂಧಗಳನ್ನು ಹೇರಿಕೆ ಮಾಡಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಧ್ಯೆ ಕಾಂಗ್ರೆಸ್ ಜ.9ರಿಂದ  163 ಕಿ.ಮೀ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಕನಕಪುರ ತಾಲೂಕಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡರೂ ಕಾಂಗ್ರೆಸ್ ನಿರಾಕರಿಸಿದೆ.


ಇದನ್ನೂ ಓದಿ: ಮುಂದಿನ 4 ರಿಂದ 6 ವಾರಗಳ ಕಾಲ ಸೋಂಕು ಹೆಚ್ಚಾಗಿ ಹರಡುತ್ತೆ, ಜನ ಎಚ್ಚರ ವಹಿಸಬೇಕು: ಆರೋಗ್ಯ ಸಚಿವ ಸುಧಾಕರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.