ಬಾಗಲಕೋಟೆ : ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಒಟ್ಟು ಹತ್ತು ಪೀಠಗಳು ತಲೆ ಎತ್ತಲಿವೆ ಎಂದು ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ್ ದಿಂಡೂರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಪಂಚಮಸಾಲಿ 3ನೇ ಪೀಠದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಬಳಿಕ  ಸುದ್ದಿಗಾರರ ಜೊತೆ ಮಾತನಾಡಿದ ಅವರು(Basavaraj Dindur), 2030ರ ಸಂಕ್ರಾಂತಿ ವೇಳೆಗೆ ಹತ್ತು ಪೀಠಗಳು ಆಗಬಹುದು. ಸದ್ಯ ಶಿಕಾರಿಪುರ ತಾಲೂಕಿನ ಉಡತಡಿ ಗ್ರಾಮದಲ್ಲಿ ಪೀಠಗಳ ಸ್ಥಾಪನೆ ಮಾಡಲಾಗಿದೆ.ಉಡತಡಿಯಲ್ಲಿ ಪಂಚಮಸಾಲಿ ಸಮಾಜದ ಮಹಿಳಾ ಪೀಠ ಸ್ಥಾಪನೆ ಆಗಲಿದೆ. ಆಕಳಿಗೊಂದು ಗೂಟ, ಜಿಲ್ಲೆಗೊಂದು ಪಂಚಮಸಾಲಿ ಪೀಠ ಆಗಬೇಕು. ದೊಡ್ಡ ಜಿಲ್ಲೆ ಇದ್ದರೆ ಎರಡು ಪೀಠಗಳು ಆದರೂ ತೊಂದರೆ ಇಲ್ಲ ಎಂದರು.


ಇದನ್ನೂ ಓದಿ : Jayamritunjaya Swamiji : 'ನವೀನ್ ಅಣ್ಣನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡಬೇಕು'


ಪೀಠಗಳ ಸ್ಥಾಪನೆ(Panchamasali Jagadguru Peetha) ಮುಖ್ಯ ಉದ್ದೇಶವೆಂದರೆ, ಸಮಾಜದ ಯುವಜನರಿಗೆ ಧಾರ್ಮಿಕ ಸಂಸ್ಕಾರ ನೀಡುವುದು ಮತ್ತು ಮಕ್ಕಳಲ್ಲಿ ಸ್ವಾಭಿಮಾನ, ವ್ಯಕ್ತಿತ್ವ ವಿಕಾಸ ಮಾಡುವುದಾಗಿದೆ. ಆ ಮೂಲಕ ರಾಜ್ಯದಲ್ಲಿ ಇರುವ ಒಂದು ಕೋಟಿ ಪಂಚಮಸಾಲಿ ಸಮಾಜವನ್ನು ಒಕ್ಕಟ್ಟು ಮಾಡುವುದಾಗಿದೆ ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.