ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರ ಮತ್ತೆ ಭುಗಿಲೆದ್ದಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದಿಂದ ಮಹಾರಾಷ್ಟ್ರ ರಾಜ್ಯಕ್ಕೆ ತೆರಳುವ ಬಸ್ ಸಂಚಾರವನ್ನು ಕೆ ಎಸ್ ಆರ್ ಟಿ ಸಿ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. 


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಸಾಂಗ್ಲಿ ಮೀರಜ್ ಕೊಲ್ಲಾಪುರ್ ರಾಜ್ಯಗಳಿಗೆ ಕರ್ನಾಟಕದ ಹಲವಾರು ಜನರು ಚಿಕಿತ್ಸೆ ಹಾಗೂ ಇನ್ನಿತರ ಕೆಲಸಗಳಿಗೆ ಅವಲಂಬಿತವಾದ ಹಿನ್ನೆಲೆಯಲ್ಲಿ ಸದ್ಯ  KSRTC & MSRTC ಬಸ್ ಸಂಚಾರ ಸ್ಥಗಿತದಿಂದ ಗಡಿಯಲ್ಲಿ ತೊಂದರೆ ಉದ್ಭವವಾಗಿದೆ. ಚಿಕ್ಕೋಡಿ ಉಪವಿಭಾಗದಿಂದ ಕಾಗವಾಡ ಮಾರ್ಗವಾಗಿ ದಿನನಿತ್ಯ ನೂರಾರು ಬಸ್ ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಯೂರಿಗೆ ಮಾತ್ರ ಬಸ್ ಸಂಚಾರ ನಡೆಯುತ್ತಿದ್ದು ಮಹಾರಾಷ್ಟ್ರ ರಾಜ್ಯಕ್ಕೆ ಪ್ರಯಾಣಿಕರು ಖಾಸಗಿ ವಾಹನಗಳ ಮುಖಾಂತರ ಸಂಚಾರ ಮಾಡುವಂತಾಗಿದೆ. 


ಇದನ್ನೂ ಓದಿ- Karnataka Congress : ಕಾಂಗ್ರೆಸ್‌ಗೆ ತಲೆನೋವು ತಂದ ಅರ್ಜಿಗೆ ₹5000 ಆಫರ್! ಡಿಕೆ ಆಕಾಂಕ್ಷಿಗಳ ವಿರುದ್ಧ ಗರಂ


ವಿಜಯಪುರ, ಚಿಕ್ಕೋಡಿ, ಅಥಣಿ, ಬಾಗಲಕೋಟೆ, ಬೆಳಗಾವಿ ಜನರು ಚಿಕಿತ್ಸೆಗೋಸ್ಕರ ಮೀರಜ್ ಸಾಂಗ್ಲಿಗೆ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದರೆ ನೇರವಾಗಿ ಬಸ್ ಸಂಚಾರ ಇಲ್ಲದೆ ಇರುವುದರಿಂದ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಉಭಯ ರಾಜ್ಯಗಳ ಸರ್ಕಾರ ಮುಖ್ಯಮಂತ್ರಿಗಳು ಮಾತನಾಡಿ ಸಮಸ್ಯೆ ಬಗೆಹರಿಸಿ, ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. 


ಇದನ್ನೂ ಓದಿ- ಬೀದಿಬದಿ ಸಿಕ್ಕ ಕಂತೆ ಕಂತೆ 10 ಲಕ್ಷ ಹಣವನ್ನು ಈ ಕುಡುಕ ಏನು ಮಾಡಿದ್ದಾನೆ ನೋಡಿ!


ಮಹಾರಾಷ್ಟ್ರ ಖಾಸಗಿ ವಾಹನ ಚಾಲಕರಿಂದ ಹಣವಸೂಲಿ ದಂಧೆ: 
ಸದ್ಯ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಇದನ್ನೇ ಕೆಲವು ವಾಹನ ಚಾಲಕರು ದುರುಪಯೋಗ ಮಾಡಿಕೊಂಡು ಕರ್ನಾಟಕ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಕಾಗವಾಡ ಗುಡಿಯಿಂದ ಮಹಾರಾಷ್ಟ್ರ ಮೀರಜ- ಸಾಂಗ್ಲಿ ನಗರ ಕೇವಲ 20 ಕಿಲೋಮೀಟರ್ ಅಂತರದಲ್ಲಿ ಇದ್ದರು 'ಮಹಾ' ಚಾಲಕರು ಒಬ್ಬ ಪ್ರಯಾಣಿಕರಿಗೆ 150 ರಿಂದ 200 ರೂಪಾಯಿ ನಿಗದಿ ಮಾಡಿದ್ದು ಇದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.