ಬೆಂಗಳೂರು : ಫೆಬ್ರವರಿ 10 ರಿಂದ ವಿಧಾನಮಂಡಲ ಅಧಿವೇಶನ ಅಧಿವೇಶನ ಪ್ರಾರಂಭ ಆಗಲಿದ್ದು, ಚುನಾವಣಾ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಕೊಂಡಿರುವ ಶಾಸಕರು ಅಧಿವೇಶನವನ್ನು ಬದಿಗಿಡುವ ಹಿನ್ನಲೆಯಲ್ಲಿ ಮೂರು ಪಕ್ಷದ ಶಾಸಕರು ಗೈರಾಗುವ ಸಾಧ್ಯತೆ ಹೆಚ್ಚಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ನಡೆಸುತ್ತಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಯಾತ್ರೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೂ ಬಿಜೆಪಿ ಕೂಡ ವಿಜಯ ಸಂಕಲ್ಪ ಯಾತ್ರೆ, ಭೂತ್ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಜೊತೆಗೆ ಜೆಡಿಎಸ್ ಪಂಚ ರತ್ನ ಯಾತ್ರೆ ಕೂಡ ಸಾಗುತ್ತಿದ್ದೂ, ಅಧಿವೇಶನಕ್ಕೆ ಮೂರು ಪಕ್ಷದ ನಾಯಕರು ಗೈರಾಗಲಿದ್ದಾರೆ.


ಇದನ್ನೂ ಓದಿ: ಡಾ.ಪುನೀತ್‌ ರಾಜ್‌ಕುಮಾರ್‌ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?


ಇದೇ ಶುಕ್ರವಾರದಿಂದ ಆರಂಭ ಆಗಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೂಟ್ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣ ಕುರಿತು ಸೋಮವಾರದಿಂದ ಚರ್ಚೆಗಳು ನಡೆಯಲಿದೆ.


ಬಿಜೆಪಿ ಕಟ್ಟಿಹಾಕಲು ಕೈ ತಯಾರಿ : ಈ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನ ಕಟ್ಟಿ ಹಾಕಲು ಕಾಂಗ್ರೆಸ್ ತಯಾರಿ ನಡೆಸಿದೆ. ಪ್ರಚಲಿತ ವಿವಾದಗಳಾದ ಸಾಂಟ್ರೋ ರವಿ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುವ ಮೂಲಕ ಕಾಂಗ್ರೆಸ್ ತಯಾರಿ ನಡೆಸಿದೆ. ಈ ಮೂಲಕ ಬಿಜೆಪಿಯನ್ನು ಇಕ್ಕಟಿಗೆ ಸಿಲುಕಿಸುವ ಪ್ರಯತ್ನವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಲಿದೆ.


ಇದನ್ನೂ ಓದಿ: Mejestic : ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ.!


2023 ಚುನಾವಣೆಗೆ ಬಜೆಟ್ ಮೂಲಕ ಬಿಜೆಪಿ ಪ್ರಣಾಳಿಕೆ ಸ್ಯಾಂಪಲ್! : ಫೆ 17 ರಂದು ರಾಜ್ಯ ಬಜೆಟ್ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಮಂಡನೆ ಮಾಡಲಿದ್ದಾರೆ. ಚುನಾವಣಾ ವರ್ಷ ಆಗಿರುವುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಜನಪ್ರಿಯ ಘೋಷಣೆಗಳನ್ನು ಒಳಗೊಂಡಿರುತ್ತದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರಕ್ಕೆ ಪ್ರತಿತಂತ್ರವಾಗಿ ಬಜೆಟ್ ಘೋಷಣೆ ಮೂಲಕ ಪ್ರತ್ಯುತ್ತರ ನೀಡಲು ಕಮಲ ನಾಯಕರು ಸಿದ್ದರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.