Mejestic : ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ.!

Darshan Starrer Majestic movie : 2002 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಸೂಪರ್‌ಹಿಟ್ ಚಿತ್ರ ಮೆಜೆಸ್ಟಿಕ್. ಆ ಕಾಲದಲ್ಲಿಯೇ ಸಖತ್‌ ಸೌಂಡ್‌ ಮಾಡಿತ್ತು. ಮೆಜೆಸ್ಟಿಕ್ ಬಿಡುಗಡೆಯಾಗಿ ಇಂದಿಗೆ 21 ಪೂರೈಸಿದೆ. 

Written by - Chetana Devarmani | Last Updated : Feb 8, 2023, 03:10 PM IST
  • ದರ್ಶನ್ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡ ಸಿನಿಮಾ
  • ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ
  • 2002 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಸಿನಿರಂಗಕ್ಕೆ ಪದಾರ್ಪಣೆ
Mejestic : ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ.! title=
ಮೆಜೆಸ್ಟಿಕ್

Darshan Starrer Majestic movie : 2002 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಸೂಪರ್‌ಹಿಟ್ ಚಿತ್ರ ಮೆಜೆಸ್ಟಿಕ್. ಆ ಕಾಲದಲ್ಲಿಯೇ ಸಖತ್‌ ಸೌಂಡ್‌ ಮಾಡಿತ್ತು. ಮೆಜೆಸ್ಟಿಕ್ ಬಿಡುಗಡೆಯಾಗಿ ಇಂದಿಗೆ 21 ಪೂರೈಸಿದೆ. ಅಂಡರ್‌ವರ್ಲ್ಡ್ ಆಧಾರಿತ ಚಿತ್ರವು ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಪಿ ಎನ್ ಸತ್ಯ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ದರ್ಶನ್‌ ಖದರ್‌ಗೆ ಸಿನಿಪ್ರಿಯರೇ ಫಿದಾ ಆಗಿದ್ದರು. ಈ ಸಿನಿಮಾಗೆ ಸಾಧು ಕೋಕಿಲ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಇದನ್ನೂ ಓದಿ : Sanvi Sudeep : ತಮ್ಮ ಕ್ರಶ್‌ ಮದುವೆಯಾಗಿದ್ದಕ್ಕೆ ಸುದೀಪ್‌ ಮಗಳು ಸಾನ್ವಿ ಬೇಸರ!?

ಬೆಂಗಳೂರಿನ ಭೂಗತ ಲೋಕದ ಕತೆ ಆಧಾರಿತ ಈ ಸಿನಿಮಾದಲ್ಲಿ ದರ್ಶನ್‌ ಲಾಂಗ್‌ ಬೀಸಿ ಚರಿತ್ರೆ ಸೃಷ್ಟಿಸಿದ್ದರು. ಎಲ್ಲ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಈ ಸಿನಿಮಾ ಯಶಸ್ವಿಯಾಗಿತ್ತು. ಇನ್ನೂ ಚಿತ್ರದ ಹಾಡುಗಳು ಸಹ ಅಷ್ಟೇ ಜನಪ್ರಿಯವಾದವು. ಇದೇ ಸಿನಿಮಾವನ್ನು ತೆಲುಗಿನಲ್ಲಿ ಚಾರ್ಮಿನಾರ್ ಎಂದು ರೀಮೇಕ್ ಕೂಡ ಮಾಡಲಾಯಿತು.

ಅನಾಥನಾಗಿರುವ ಬಾಲಕ, ದೊಡ್ಡವನಾದಾಗ ದರೋಡೆಕೋರನಾಗುತ್ತಾನೆ. ಈ ಪಾತ್ರಕ್ಕೆ ದರ್ಶನ್‌ ಅಕ್ಷರಶಃ ಜೀ ತುಂಬಿದ್ದಾರೆ. ಅವರ ನಟನೆ ಪ್ರೇಕ್ಷಕರು ಮೂಕ ಮುಗ್ಧರಾಗುವಂತಿದೆ. ನಟಿ ರೇಖಾ ನಟಿಸಿದ ಈ ಸಿನಿಮಾ ಸಖತ್‌ ಹಿಟ್‌ ಕೊಟ್ಟಿತ್ತು. ಆಕೆಯ ಪ್ರೀತಿಯಲ್ಲಿ ಬಿದ್ದಾಗ ರೋಡೆಕೋರನ ಜೀವನ ಬದಲಾಗುತ್ತದೆ. ನಟರಾದ ಜೈ ಜಗದೀಶ್, ಬುಲೆಟ್ ಪ್ರಕಾಶ್, ಹರೀಶ್ ರಾಯ್ ಮತ್ತು ವನಿತಾ ವಾಸು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ : Urfi Javed : ಮನೆಯಿಂದ ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಉರ್ಫಿ ಜಾವೇದ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News