ಬೆಂಗಳೂರು: 2019ರ ಹೊಸ ವರ್ಷವನ್ನು ಸ್ವಾಗತಿಸಲು ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಆದರೆ, ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಕಾತುರದಿಂದ ಕಾಯುತ್ತಿರುವವರಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಶಾಕ್ ನೀಡಿದೆ. 


COMMERCIAL BREAK
SCROLL TO CONTINUE READING

ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಜೋರಾಗಿ ಹಾಡುಗಳನ್ನು ಹಾಕಿ, ಡ್ಯಾನ್ಸ್ ಮಾಡುವುದಕ್ಕೆ ಮಂಡಳಿ ಕಡಿವಾಣ ಹಾಕಿದ್ದು, ಶಬ್ದ ಮಾಲಿನ್ಯ ನಿಯಂತ್ರಣ ಈ ಸಂಬಂಧ ಸೂಚನೆ ನೀಡಿದೆ. ಯಾರೇ ಆಗಲಿ, ನಿಯಮ ಮೀರಿ ಹೆಚ್ಚು ಸೌಂಡ್ ಕೊಟ್ಟು ಡ್ಯಾನ್ಸ್ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ. 


ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸದ್ಯ 75 ಡೆಸಿಬಲ್​ಗಿಂತ ಜಾಸ್ತಿ ಸೌಂಡ್ ಹಾಕುವಂತಿಲ್ಲ ಎಂಬ ನಿಯಮ ಹೇರಲಿದ್ದು, ಶಬ್ದ ಮಾಲಿನ್ಯ ಗಮನಿಸಲು ಸಂಚಾರಿ ಪೊಲೀಸರು ನಿರ್ವಹಣಾ ಕೇಂದ್ರಗಳನ್ನ ಸ್ಥಾಪಿಸಲಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿ ಕಾರ್ಯಾಚರಣೆ ಕೂಡ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.