ಕನ್ನಡಿಗರ ಉದ್ಯೋಗಕ್ಕಾಗಿ ಕರವೇ ಕಹಳೆ : ಸರ್ಕಾರಕ್ಕೆ ಒಂದು ತಿಂಗಳ ಗಡುವು
ಕನ್ನಡ ನಾಮಫಲದ ವಿಚಾರದಲ್ಲಿ ಹೊಸ ಕಿಚ್ಚು ಹಚ್ಚಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಇವತ್ತು ಮತ್ತೊಂದು ಹೊರಾಟಕ್ಕೆ ಮುನ್ನುಡಿ ಬರೆದಿದೆ.ಕರವೇ ರಾಜ್ಯದ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಕರುನಾಡಿನ ಮಣ್ಣಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ
ಬೆಂಗಳೂರು :ಕರುನಾಡಲ್ಲಿ ಇವತ್ತು ಕರವೇ ಕಹಳೆ ಮೊಳಗಿಸಿದೆ.ಉದ್ಯೋಗದ ವಿಚಾರದಲ್ಲಿ ಕರುನಾಡಲ್ಲೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಸಿಡಿದ್ದೆದಿದೆ.ರಾಜಧಾನಿಯ ನೆಲ ನಾರಾಯಣ ಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿದೆ.
ಕನ್ನಡಿಗರ ಉದ್ಯೋಗಕ್ಕಾಗಿ ಕರವೇ ಕಹಳೆ :
ಕನ್ನಡ ನಾಮಫಲಕದ ವಿಚಾರದಲ್ಲಿ ಹೊಸ ಕಿಚ್ಚು ಹಚ್ಚಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಇವತ್ತು ಮತ್ತೊಂದು ಹೊರಾಟಕ್ಕೆ ಮುನ್ನುಡಿ ಬರೆದಿದೆ.ಕರವೇ ರಾಜ್ಯದ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಕರುನಾಡಿನ ಮಣ್ಣಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ.ಉದ್ಯೋಗದ ವಿಚಾರದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿಎಂ ಸಿದ್ದರಾಮಯ್ಯ
ಈ ಪ್ರತಿಭಟನೆಗೆ ನಗರದ ಫ್ರೀಡಂ ಪಾರ್ಕ್ ಸಾಕ್ಷಿಯಾಗಿತ್ತು.ಚಿತ್ರ ನಟ ನೆನಪಿರಲಿ ಪ್ರೇಮ್, ನಟಿ ಪೂಜಾ ಗಾಂಧಿ ಸೇರಿ ಇನ್ನಿತರ ನಾಯಕರು ಹೋರಾಟಕ್ಕೆ ಸಾಥ್ ನೀಡಿದರು.
ಕರವೇ ಪ್ರಮುಖ ಬೇಡಿಕೆಗಳು :
ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಪರಭಾಷಿಗರ ಹಾವಳಿಯಿಂದ ಕನ್ನಡಿಗರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಶೇಕಡಾ 100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದೆ. ಇತರೆ ಗ್ರೂಪ್ ಗಳಲ್ಲಿ ಶೇಕಾಡ 80ರಷ್ಟು ಮೀಸಲಾತಿ ದೊರಕಬೇಕು.ರಾಜ್ಯ ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯದಲ್ಲಿ 100% ಕನ್ನಡಿಗರಿಗೆ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಲ್ಲಿ 100% ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಕನ್ನಡದ ಕಟ್ಟಾಳುಗಳು ಒತ್ತಾಯಿಸಿದ್ದಾರೆ.ಅಲ್ಲದೇ ಕನ್ನಡಿಗರ ಉದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಮಾರ್ಗ ಹೊಂದಿದ್ದ ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರ
ಈ ವೇಳೆ ಮಾತನಾಡಿದ ನಾರಾಯಣಗೌಡ ಕರುನಾಡಿನಲ್ಲಿ ಕನ್ನಡಿಗರರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು. ಕನ್ನಡಿಗರ ಉದ್ಯೋಗ ವಿಚಾರದಲ್ಲಿ ಕಾಯಿದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಕರವವೇ ಮಕ್ಕಳು ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಸಿಎಂ ಮೇಲೆ ನಂಬಿಕೆ ಇದೆ ಮೂವತ್ತು ದಿನಗಳ ಕಾಲ ಕಾಲಾವಕಾಶ ನೀಡುತ್ತೇವೆ. ಉತ್ತರ ಸಿಗದಿದ್ದರೆ ಬಹು ದೊಡ್ಡ ಹೋರಾಟ ಫಿಕ್ಸ್ ಎಂದು ಎಚ್ಚರಿಕೆ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.