ಬೆಂಗಳೂರು: ಕೊರೊನಾ 3ನೇ ಅಲೆ(Corona 3rd Wave)ಯ ಭೀತಿ ನಡುವೆ ಇಂದು ಕರುನಾಡಿನಲ್ಲಿ ‘ಕೊರೊನಾ’ ಸ್ಫೋಟವಾಗಿದೆ. ರಾಜ್ಯದಲ್ಲಿ ಕೇವಲ ಒಂದೇ ದಿನ ಬರೋಬ್ಬರಿ 2,479 ಹೊಸ ಕೊರೊನಾ ಪ್ರಕರಣಗಳು(Corona Cases In Karnataka) ಪತ್ತೆಯಾಗಿವೆ. ಈ ಕುರಿತು ಟ್ವಿಟ್ಟರ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಕಿಯ ಬಾಣಲೆಯಲ್ಲಿ ಬೆಂಗಳೂರು!


ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್(Corona Positivity Rate) ದಿಢೀರ್ ಶೇ.2.59ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 95,391 ಜನರನ್ನು ಟೆಸ್ಟ್ ಮಾಡಲಾಗಿದೆ. ಈ ಪೈಕಿ 2,479 ಜನರಿಗೆ ಕೊರೊನಾ ದೃಢಪಟ್ಟಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 2,053 ಕೇಸ್ ಗಳು ಕನ್ಫರ್ಮ್ ಆಗಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಂಕದ ವಾತಾವರಣ ನಿರ್ಮಾಣವಾಗಿದೆ.


ಮಿಸ್ಟರ್‌ ಡಿ.ಕೆ.ಶಿವಕುಮಾರ್‌ ಗೂಂಡಾಗಿರಿ ಬಿಡಿ: ಸಚಿವ ಅಶ್ವತ್ಥ್ ನಾರಾಯಣ ಎಚ್ಚರಿಕೆ


ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕೇಸ್(CoronaVirus) ಹಾಗೂ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. ಇದು ಜನರಲ್ಲಿ ಎರಡೆರಡು ರೀತಿ ಭಯಕ್ಕೆ ಕಾರಣವಾಗಿದೆ. ಒಂದು ಕಡೆ ಆಸ್ಪತ್ರೆಗಳು ದಿಢೀರ್ ತುಂಬಿ ತುಳುಕುವ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ಇನ್ನೊಮ್ಮೆ ಲಾಕ್ ಡೌನ್ಆಗುವ ಆತಂಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಕಳೆದ 2 ವರ್ಷಗಳಿಂದ ಇದೇ ರೀತಿ ಕೊರೊನಾ ವೈರಸ್ ಎಲ್ಲರನ್ನೂ ಸಂಕಷ್ಟದ ಬಲೆಗೆ ನೂಕುತ್ತಿದೆ.


ಮೊದಲೇ ಎಚ್ಚರಿಸಿದ್ದ ತಜ್ಞರು


ಕೊರೊನಾ 2ನೇ ಅಲೆ(COVID-19) ಮುಗಿಯುತ್ತಿದ್ದಂತೆ ತಜ್ಞರು 3ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಆರಂಭದಲ್ಲಿ ಕಂಟ್ರೋಲ್ ಆಗಿದ್ದ ಕೇಸ್ ಗಳು ಈಗ ದಿಢೀರ್ ಏರಿಕೆ ಕಾಣುತ್ತಿವೆ. ಇದೇ ರೀತಿ ಇನ್ನಷ್ಟು ದಿನ ಪಾಸಿಟಿವಿಟಿ ದರ ಏರಿಕೆಯಾದ್ರೆ ಬೆಂಗಳೂರು ನಗರ ಲಾಕ್ ಆಗೋದು ಫಿಕ್ಸ್ ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಏಕೆಂದರೆ ರಾಜಧಾನಿಯಲ್ಲಿ ಊಹೆಗೂ ಮೀರಿ ಪಾಸಿಟಿವಿಟಿ ರೇಟ್ ಏರಿಕೆಯಾಗಿದೆ.


ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಯತ್ನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.