ನವದೆಹಲಿ : ಉಕ್ರೇನ್ ನಲ್ಲಿ ಕರ್ನಾಟಕ  ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾರೆ (Karnataka student died in Ukraine). 21 ವರ್ಷದ ನವೀನ್ ಕರ್ನಾಟಕದ ಚಳಗೇರಿ ನಿವಾಸಿ. ವಿದ್ಯಾರ್ಥಿ ನವೀನ್ ಸಾವಿಗೆ ರಷ್ಯಾದ ಶೆಲ್ ದಾಳಿಯೇ ಕಾರಣ ಎನ್ನಲಾಗುತ್ತಿದೆ.  ನವೀನ್  2 ದಿನಗಳ ಹಿಂದೆ ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್‌ ಮೂಲಕ ಮಾತುಕತೆ ನಡೆಸಿದ್ದರು. 


COMMERCIAL BREAK
SCROLL TO CONTINUE READING

ನವೀನ್ ಖಾರ್ಕಿವ್‌ನ ಬಂಕರ್‌ನಲ್ಲಿ ಅಡಗಿಕೊಂಡಿದ್ದರೂ ಎನ್ನಲಾಗಿದೆ (Naveen dead). ಅವಶ್ಯವಸ್ತು ಮುಗಿದ ಮೇಲೆ ಅವರು ಬಂಕರ್ ನಿಂದ ಹೊರ ಬಂದಿದ್ದಾರೆ. ಈ ವೇಳೆ ನಡೆದ ಶೆಲ್ ದಾಳಿಗೆ  ನವೀನ್ ಬಲಿಯಾಗಿದ್ದಾರೆ ( Naveen death). ನವೀನ್ ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ತನ್ನ ಹೆತ್ತವರೊಂದಿಗೆ ಮಾತನಾಡುತ್ತಿದ್ದರು. ಇಂದು ಮುಂಜಾನೆ ಕೂಡಾ ನವೀನ್ ದೂರವಾಣಿ ಕರೆ ಮಾಡಿ  ಮಾತನಾಡಿದ್ದ ಎನ್ನುತ್ತಾರೆ   ನವೀನ್ ತಂದೆ ಶೇಖರಗೌಡ ಗ್ಯಾನ ಗೌಡರ್. 


ಉಕ್ರೇನ್ ನಲ್ಲಿ ಮೃತ ಪಟ್ಟ ರಾಜ್ಯದ ಯುವಕ: ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಸಿಎಂ
    
ಈ ಬೆಳವಣಿಗೆಯ ನಂತರ ಭಾರತವು ರಷ್ಯಾ ಮತ್ತು ಉಕ್ರೇನ್ ರಾಯಭಾರಿಗಳನ್ನು ಕರೆಸಿದೆ (Russia Ukriane war). ಇದರೊಂದಿಗೆ, ಉಕ್ರೇನ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಶೀಘ್ರವಾಗಿ ಸ್ಥಳಾಂತರಿಸಲು ಭಾರತ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದೆ. ಈ ಮಧ್ಯೆ, ಉಕ್ರೇನ್‌ನಲ್ಲಿರುವ (Ukraine)ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರೂ ರೈಲಿನಲ್ಲಿ ಅಥವಾ ಲಭ್ಯವಿರುವ ಯಾವುದೇ ವಿಧಾನನದ ಮೂಲಕ  ತಕ್ಷಣವೇ ಕೈವ್‌ನಿಂದ ಹೊರಡುವಂತೆ ರಾಯಭಾರ ಕಚೇರಿ ಸೂಚಿಸಿದೆ. 


ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ನಂತರ ಯುದ್ಧಪೀಡಿತ ದೇಶದ ವಾಯುಪ್ರದೇಶವನ್ನು ಮುಚ್ಚಿರುವ ಹಿನ್ನಲೆಯಲ್ಲಿ ಭಾರತ ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕಿಯಾದೊಂದಿಗೆ ಉಕ್ರೇನ್‌ನ ಗಡಿ ಪೋಸ್ಟ್‌ಗಳ ಮೂಲಕ ಅಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿದೆ. ಸೋಮವಾರ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ರಾಜಧಾನಿ ಕೈವ್‌ನಲ್ಲಿರುವ ರೈಲು ನಿಲ್ದಾಣವನ್ನು ತಲುಪಲು ಸಲಹೆ ನೀಡಿತ್ತು.   


ಇದನ್ನೂ ಓದಿ : "ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು ಯೂತ್ ಕಾಂಗ್ರೆಸ್ ಅಧ್ಯಕ್ಷರು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.